Sharavathi ಸೇತುವೆ ಮೇಲೆ ಬೈಕ್ ಗೆ ಗುದ್ದಿದ ಕಾರು -ಯುವತಿ ಸಾವು
Honnavara news : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ನಗರದ ಶರಾವತಿ ಬ್ರಿಡ್ಜ್ ಬಳಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತವಾಗಿ ಬೈಕ್ ಅಲ್ಲಿ ತೆರಳುತಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
08:52 PM Jan 20, 2025 IST | ಶುಭಸಾಗರ್
Honnavara news : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ(honnavara) ನಗರದ ಶರಾವತಿ ಬ್ರಿಡ್ಜ್ ಬಳಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತವಾಗಿ ಬೈಕ್ ಅಲ್ಲಿ ತೆರಳುತಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
Advertisement
ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ ಚಲಿಸುತ್ತಿದ್ದ ಬೈಕ್ ಬಸ್ ಓವರಟೇಕ್ ಮಾಡುವ ಬರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:- Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!
ಮೃತ ಯುವತಿ ಹಳದೀಪುರ ಮೂಲದ ಪೂಜಾ ಗೌಡ ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ಬೈಕ ಸವಾರ ಸುರೇಶ ಗೌಡ ಇವರನ್ನು ತಾಲೂಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ತಿವ್ರತೆಗೆ ಬೈಕ್ ಹಾಗೂ ಕಾರಿನ ಮುಂಭಾಗ ಜಖಂ ಆಗಿದೆ.ಘಟನೆ ಸಂಬಂಧ ಹೊನ್ನಾವರ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement