farm laws| ತನ್ನ ಹೇಳಿಕೆಗೆ ಕ್ಷಮೆ ಕೇಳಿದ ಸಂಸದೆ ಕಂಗನಾ ರನೌತ್
ನವದೆಹಲಿ : ರೈತರ ಪ್ರತಿಭಟನೆ( farmer protest )ಳಿಕ ರದ್ದಾಗಿದ್ದ ಮೂರು ಕೃಷಿ ಕಾನೂನುಗಳನ್ನು ಮತ್ತೆ ಜಾರಿ ಮಾಡಬೇಕು ಎಂದು ಹೇಳಿಕೆ ನೀಡಿದ್ದ ನಟಿ ಮತ್ತು ಬಿಜೆಪಿ ಸಂಸದೆ ಕಂಗಾನ ರನೌತ್ ಬಹಿರಂಗ ಕ್ಷಮೆ ಕೇಳಿದ್ದಾರೆ. ಕಂಗಾನ ಹೇಳಿಕೆಗೆ ಸ್ವಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.
ಕಂಗನಾ ಏನಂದ್ರು ವಿಡಿಯೋ ಇಲ್ಲಿದೆ:-
https://www.facebook.com/share/r/Mm17PiRcwnbcGCmj/?mibextid=oFDknk
ನಾನು ಬರೀ ನಟಿಯಲ್ಲ, ರಾಜಕಾರಣಿಯೂ ಆಗಿದ್ದೇನೆ ಮತ್ತು ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರಬಾರದು, ಆದು ಪಕ್ಷದ ಪ್ರತಿಬಿಂಬವಾಗಿರಬೇಕು, ರೈತರ ಕಾನೂನುಗಳ ಬಗ್ಗೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ, ನನ್ನ ಹೇಳಿಕೆಗಳು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ನನ್ನ ಅಭಿಪ್ರಾಯಗಳು ಮತ್ತು ಮಾತುಗಳಿಂದ ನಾನು ಯಾರನ್ನಾದರೂ ನಿರಾಶೆಗೊಳಿಸಿದ್ದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:-ನೀರಿಗಿಳಿದ ತುಪ್ಪದ ಬೆಡಗಿ ರಾಗಿಣಿ|ಮೈಮಾಟಕ್ಕೆ ಪಡ್ಡೆಗಳು ಫಿದಾ.
ಖಾಸಗಿ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದ ಕಂಗಾನ ರನೌತ್, ಮೂರು ಕಾನೂನುಗಳು ರೈತರಿಗೆ ಪ್ರಯೋಜನಕಾರಿ ಆದರೆ ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರವು ಅದನ್ನು ರದ್ದುಗೊಳಿಸಿದೆ. ಈ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ತರಬೇಕು. ರೈತರೇ ವಾಪಸ್ ತರಲು ಒತ್ತಾಯಿಸಬೇಕು. ರೈತರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ಅವರ ಒಳಿತಿಗಾಗಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ನಾನು ಅವರಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ರನೌತ್ ಅವರ "ವೈಯಕ್ತಿಕ ಹೇಳಿಕೆ" ಮತ್ತು ಕೃಷಿ ಮಸೂದೆಗಳ ಬಗ್ಗೆ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಈ ಹೇಳಿಕೆಗೆ ಪಕ್ಷದ ಆತಂರಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಲೋಕಸಭೆಯ ಸಂಸದೆ ಕಂಗಾನ ರನೌತ್ ( Kangana Ranaut)ಅವರ ಟೀಕೆಗಳನ್ನು ಬಿಜೆಪಿ ಖಂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ರೈತರ ಪ್ರತಿಭಟನೆಯ ಕುರಿತು ಕಂಗನಾ ರಣಾವತ್ ಅವರ ಹೇಳಿಕೆಯಿಂದ ಪಕ್ಷವು ದೂರವಿತ್ತು ಮತ್ತು ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಸಂಯಮದಿಂದ ವರ್ತಿಸುವಂತೆ ಎಚ್ಚರಿಕೆ ನೀಡಿತ್ತು.