BJP ಯಡಿಯೂರಪ್ಪರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ 300 ಕೋಟಿ ಅಕ್ರಮ ತನಿಖೆಗೆ ಸಮಿತಿ
Bangalore News 12 November 2024 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ (former cm bs yadiyurappa )ಅವಧಿಯಲ್ಲಿ ಕೋವಿಡ್ ಬಳಿಕ KKRDB ಯ 300 ಕೋಟಿ ಅಕ್ರಮದ ಕುರಿತು ತನಿಖೆಗೆ ಸರ್ಕಾರ ತಂಡ ರಚಿಸಿದೆ.
ಕೋವಿಡ್ ಹಗರಣದ ತನಿಖೆಗೆ ಬಳಿಕ ಯಡಿಯೂರಪ್ಪ ವಿರುದ್ಧ ಮತ್ತೊಂದು ಹಗರಣದ ತನಿಖೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ.
ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅಕ್ರಮದ ಕುರಿತು ತನಿಖೆಗೆ ಆದೇಶ ಹೊರಡಿಸಿದೆ. 300 ಕೋಟಿ ಅನುದಾನ ಅಕ್ರಮ ಆಗಿದೆ ಎಂದು ತನಿಖೆಗೆ ನಿವೃತ್ತ ಐಎಎಸ್ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚನೆ ಮಾಡಲಾಗಿತ್ತು.
ಈ ಅವಧಿಯಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷರಾಗಿದ್ದರು. ಆಗ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಪ್ರತಿ ಕ್ಷೇತ್ರ ಕ್ಕೆ 100 ಕೋಟಿಯಂತೆ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.
Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ?
ಈ ಅನುದಾನದಲ್ಲಿ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸಮಿತಿ ರಚನೆ ಮಾಡಿದೆ.
ಕೋವಿಡ್ ಅವಧಿಯಲ್ಲಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿಕೆ. ದೇಶಿ ಹಸು ಸಾಕಣೆಗೆ ಪ್ರೋತ್ಸಾಹ ಧನ ವಿತರಣೆ. 1 ಕೋಟಿ ಸಸಿ ನೆಟ್ಟಿರುವ ಬಗ್ಗೆಯೂ ತನಿಖೆ ನಡೆಯಲಿದೆ.
Feed: invalid feed URL