ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Murdeshwar ಸಮುದ್ರದಲ್ಲಿ ಕಾಣಿಯಾಗಿದ್ದ ಮೂರು ವಿದ್ಯಾರ್ಥಿನಿಯರ ಶವ ಪತ್ತೆ

Murdeshwar 11 December 2024:- ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಮ ಮುರುಡೇಶ್ವರದಲ್ಲಿ ಕೋಲಾರ ಮೂಲದ ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದು ಕಾಣೆಯಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ.
12:57 PM Dec 11, 2024 IST | ಶುಭಸಾಗರ್

Murdeshwar 11 December 2024:- ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಮ ಮುರುಡೇಶ್ವರದಲ್ಲಿ ಕೋಲಾರ ಮೂಲದ ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದು ಕಾಣೆಯಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ.

Advertisement

ಇಂದು ಮೂವರು ವಿದ್ಯಾರ್ಥಿನಿಯರ ಶವವನ್ನು ಕರಾವಳಿ ಕಾವಲುಪಡೆ ಪೊಲೀಸರು ಪತ್ತೆ ಮಾಡಿದ್ದಾರೆ.

ಮುರುಡೇಶ್ವರದ ನವೀನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರದಲ್ಲಿ ತೇಲುತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾದರೇ ಮತ್ತೊಂದು ಮೃತದೇಹ ಅಳವೆಕೋಡಿಯಲ್ಲಿ ಪತ್ತೆಯಾಗಿದೆ.

Advertisement

ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿದ್ದು ಮೃತದೇಹವನ್ನು ಬೋಟ್ ಮೂಲಕ ಅಳವೆಕೋಡಿ ಬಳಿ ದಡಕ್ಕೆ ತರಲಾಗುತ್ತಿದೆ.

ಇದನ್ನೂ ಓದಿ:-Murdeshwar|ಬೀಚ್ ನಲ್ಲಿ ವಾಹನ ಓಡಿಸಿ ಹುಚ್ಚಾಟ ವಾಹನ ಸವಾರನಿಗೆ 184 IMVನಡಿ ದಂಡ!

ಘಟನೆ ಏನಾಗಿತ್ತು?

ಕೋಲಾರ (kolara) ಜಿಲ್ಲೆಯ ಮುಳುಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 57ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿತ್ತು.

ನಿನ್ನೆ ದಿನ ಸಂಜೆ ಸಮುದ್ರದಲ್ಲಿ ಆಟವಾಡುತಿದ್ದ ವೇಳೆ ಸಮುದ್ರದಲ್ಲಿ ಏಳು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು . ಆ ಪೈಕಿ ಮೂವರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ರೆ ಶ್ರಾವಂತಿ ಎಂಬಾಕೆ ಸಾವನ್ನಪ್ಪಿದ್ದಳು.

ದೀಕ್ಷಾ, ಲಾವಣ್ಯ, ವಂದನಾ ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದರು. ಇವರ ಹುಡುಕಾಟಕ್ಕೆ ಮೂರು ತಂಡ ರಚನೆಮಾಡಿ ಮುರುಡೇಶ್ವರ ಕಡಲತೀರದಲ್ಲಿ ಶೋಧ ನಡೆಸಿದ್ದು ಕೊನೆಗೂ ಮೂರು ಶವಗಳು ಪತ್ತೆಯಾಗಿದ್ದು ಇದೀಗ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ ಕಂಡಿದೆ.

ಜಿಲ್ಲಾಡಳಿತದ ನಿರ್ಲಕ್ಷ ಈ ಸಾವಿಗೆ ಹೊಣೆ ಯಾರು?

ಜಿಲ್ಲಾಡಳಿತ ನಿಗದಿ ಮಾಡಿದ ಲೈಫ್ ಗಾರ್ಡ ಗಳಿಗೆ ಈವರೆಗೂ ರಕ್ಷಣಾ ಸಾಮಗ್ರಿ ನೀಡಿಲ್ಲ. ಇದಲ್ಲದೇ ಹೆಚ್ಚು ಪ್ರವಾಸಿಗರ ದಟ್ಟನೆ ಇರುವ ಈ ಪ್ರದೇಶದಲ್ಲಿ ಯಾವ ಪರಿಕರವೂ ನೀಡದೇ ನಿರ್ಲಕ್ಷ ಮಾಡಿದೆ.

ಇದಲ್ಲದೇ ಲೈಫ್ ಗಾರ್ಡ ಗೆ ಬೇಕಾದ ತರಬೇತಿ ಸಹ ಈಬಾರಿ ನೀಡಿಲ್ಲ. ಎಲ್ಲವನ್ನೂ ಗಾಳಿಗೆ ತೂರಿದೆ. ಲೈಪ್ ಗಾರ್ಡಗಳು ರಕ್ಷಣೆಗೆ ತಕ್ಷಣ ದಾವಿಸಬೇಕು ಎಂದರೇ ಮೀನುಗಾರರನ್ನು ಅಥವಾ ಸ್ಥಳೀಯ ಬೋಟ್ ಮಾಲೀಕರನ್ನು ಅವಲಂಬಿಸಬೇಕಿದೆ. ಹೀಗಿರುವಾಗ ತಕ್ಷಣ ಕಾರ್ಯಪ್ರವೃತ್ತರಾಗೋದು ಹೇಗೆ ಎಂಬ ಪ್ರಶ್ನೆ ಎದ್ದಿದೆ‌

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರದ್ದು ಭಿನ್ನ ರಾಗ . ಸ್ಥಳೀಯ ರಾಜಕಾರಣಕ್ಕೆ ಇಡೀ ಪ್ರವಾಸೋಧ್ಯಮವೇ ನಲುಗಿ ಹೋಗಿದ್ದು , ನಿಯಮಗಳನ್ನ ಗಾಳಿಗೆ ತೂರಿ ಪ್ರವಾಸೋಧ್ಯಮ ಚಟುವಟಿಕೆ ನಡೆಯುತ್ತಿದೆ.

ಬೀಚ್ ನಲ್ಲಿ ವಾಹನ ನಿಲ್ಲಿಸಲೂ ಜಾಗವಿಲ್ಲ, ಸಮುದ್ರವನ್ನೇ ಇಲ್ಲಿನ ವಾಣಿಜ್ಯ ಮಳಿಗೆಗಳು ನುಂಗಿ ಹಾಕಿದ್ದು ಮೂಲಭೂತ ಸೌಕರ್ಯವೂ ಅಷ್ಟಕಷ್ಟೆ ಎನ್ಬುವಂತಾಗಿದೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಸಾವು ಮುರುಡೇಶ್ವರ ಭಾಗದಲ್ಲಿ ಆಗುತಿದ್ದು ಇದನ್ನು ತಡೆಯುವ ಬೇಕಾದ ವ್ಯವಸ್ಥೆ ಮಾತ್ರ ಜಿಲ್ಲಾಡಳಿತ ಮಾಡದಿರುವುದು ದುರಂತ.

ಸದ್ಯ ಇಂದಿನ ಘಟನೆ ಶಿಕ್ಷಕರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷದಿಂದ ನಾಲ್ಕು ಜನರ ಸಾವು ಸಂಭವಿಸುವಂತಾಗಿದೆ.

Feed: invalid feed URL

Advertisement
Tags :
KarnatakaKolaramulabagiluMurdeshwarSeaStudentTourist
Advertisement
Next Article
Advertisement