For the best experience, open
https://m.kannadavani.news
on your mobile browser.
Advertisement

Kumta| ಬೇರೊಬ್ಬಳ ಸ್ನೇಹ ,ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ

ಕುಮಟಾ ಹೆಗಡೆಯಲ್ಲಿ ತಂದೆಯೇ ಮಗನಿಗೆ ಬಾತ್ ರೂಮ್‌ನಲ್ಲಿ ಕೂಡಿಹಾಕಿ ಕಾರದಪುಡಿ ಎರಚಿ ಕೈ ಸುಟ್ಟು ಹಿಂಸೆ ನೀಡಿದ ದಾರುಣ ಘಟನೆ. ಬಾಲಕ ರಕ್ಷಣೆಯಾಗಿ ಆಸ್ಪತ್ರೆಗೆ ಸೇರಿಕೆ, ವಿಜಯ್ ವಿರುದ್ಧ ಪ್ರಕರಣ ದಾಖಲೆ.
01:01 PM Dec 11, 2025 IST | ಶುಭಸಾಗರ್
ಕುಮಟಾ ಹೆಗಡೆಯಲ್ಲಿ ತಂದೆಯೇ ಮಗನಿಗೆ ಬಾತ್ ರೂಮ್‌ನಲ್ಲಿ ಕೂಡಿಹಾಕಿ ಕಾರದಪುಡಿ ಎರಚಿ ಕೈ ಸುಟ್ಟು ಹಿಂಸೆ ನೀಡಿದ ದಾರುಣ ಘಟನೆ. ಬಾಲಕ ರಕ್ಷಣೆಯಾಗಿ ಆಸ್ಪತ್ರೆಗೆ ಸೇರಿಕೆ, ವಿಜಯ್ ವಿರುದ್ಧ ಪ್ರಕರಣ ದಾಖಲೆ.
kumta  ಬೇರೊಬ್ಬಳ ಸ್ನೇಹ  ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ
ಕುಮಟಾ -ತಂದೆಯಿಂದ ಮಗನಿಗೆ ಹಿಂಸೆ

Kumta| ಬೇರೊಬ್ಬಳ ಸ್ನೇಹ ,ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ.

Advertisement

ವರದಿ - ಪ್ರದೀಪ್ ಶಟ್ಟಿ.

https://chat.whatsapp.com/HbI3YG8zHwtAYxenaKEbAg?mode=ems_copy_ta

ಕಾರವಾರ :-ತಂದೆಯೇ ಮಗನನ್ನು ಬಾತ್ ರೂಮ್ ನಲ್ಲಿ ಕೂಡಿಹಾಕಿ ಕಣ್ಣಿಗೆ ಕಾರದಪುಡಿ ಎರಚಿ ಕೈಗಳನ್ನು ಸುಟ್ಟು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ಹೆಗಡೆಯಲ್ಲಿ ನಡೆದಿದೆ.

Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

ಬಾಲಕನ ತಂದೆ ವಿಜಯ ನಾಯ್ಕ ಎಂಬಾತನಿಂದ ಈ  ಕೃತ್ಯ ನಡೆದಿದೆ. 13 ವರ್ಷದ ಹಿಂದೆ ಚಿತ್ರ ಎಂಬಾಕೆಯನ್ನು ವಿವಾಹವಾಗಿದ್ದು ಇಬ್ಬರಿಗೂ ವಿಚ್ಛೇದನವಾಗಿದೆ.

ನ್ಯಾಯಾಲಯ ಇವರ ಮಕ್ಕಳನ್ನು ಇಬ್ಬರೂ ನೋಡಿಕೊಳ್ಳುವಂತೆ ಆದೇಶ ನೀಡಿತ್ತು. ಹೀಗಾಗಿ ತಂದೆ ವಿಜಯ ಮನೆಯಲ್ಲಿ ಮಗನಿದ್ದನು.

Child abuse case Kumta
ಕುಮಟಾ -ತಂದೆಯಿಂದ ಮಗನಿಗೆ ಹಿಂಸೆ

ವಿಜಯ್ ವಿಚ್ಛೇದನದ ನಂತರ ಬೇರೊಬ್ಬ ಮಹಿಳೆಯನ್ನು ತನ್ನ ಮನೆಯಲ್ಲಿ ಇಟ್ಟಿಕೊಂಡಿದ್ದು ಮಗ ತನ್ನ ಸರಸ ಸಲ್ಲಾಪಗಳಿಗೆ ಅಡ್ಡಿಯಾಗುತ್ತಾನೆ ಎಂದು ಆತನಿಗೆ ಪ್ರತಿ ದಿನ ಹಿಂಸೆ ನೀಡುತಿದ್ದನು .ಇದಲ್ಲದೇ ಮನೆಯ ಬಾತ್ ರೂಮ್ ನಲ್ಲಿ ಕೂಡಿಹಾಕಿದ್ದು ,ಕೈಗಳನ್ನು ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ.

Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ! 

ಈ ವಿಜಯ ಬಾಲಕನ ತಾಯಿಗೆ ತಿಳಿದು ಕುಮಟಾ ಪೊಲೀಸರ ಸಹಾಯದಿಂದ ಮಗುವನ್ನು ರಕ್ಷಣೆ ಮಾಡಿದ್ದು ಕುಮಟಾದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತಿದ್ದಾರೆ.

ಬಾಲಕನ ಪಾಪಿ ತಂದೆ ವಿಜಯ್ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಆತ ತಲೆಮರೆಸಿಕೊಂಡಿದ್ದಾನೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ