For the best experience, open
https://m.kannadavani.news
on your mobile browser.
Advertisement

ಕಾರವಾರ ನಮ್ಮೂರು ಅಂದ್ರು ಶಾಹೀದ್ ಕಪೂರ್ ಹೀರೋಯಿನ್ Amrita Rao !

ಬಾಲಿವುಡ್ ನಲ್ಲಿ ಒಂದಷ್ಟು ಹಿಟ್ ಫಿಲಂ ಗಳನ್ನು ನೀಡಿ, ನಂತರ ನಟನೆಯಿಂದಲೇ ದೂರ ಉಳಿದ ನಟಿ ಇವರು. ಅವರು ಬೇರಾರು ಅಲ್ಲ ನಟಿ ಅಮೃತಾ ರಾವ್. ವಿವಾಹ್ ನಂತಹ ರೊಮ್ಯಾಂಟಿಕ್ ಪ್ರೇಮಕಥೆಯ ಮೂಲಕ ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅಮೃತಾ ರಾವ್ (Amrita Rao), ಅಷ್ಟೇ ಅಲ್ಲ ಮೇ ಹೂಂ ನಾ ಸಿನಿಮಾದಲ್ಲಿ ತಮ್ಮ ಬಿಂದಾಸ್ ಅಭಿನಯದ ಮೂಲಕ ಮೋಡಿ ಮಾಡಿದ್ದ ನಟಿ ಅಮೃತಾ ರಾವ್ ತನ್ನ ಮೂಲದ ರಹಸ್ಯ ಬಿಚ್ಚಿಟ್ಟಿದ್ದಾರೆ
02:49 PM Jan 23, 2025 IST | ಶುಭಸಾಗರ್
ಕಾರವಾರ ನಮ್ಮೂರು ಅಂದ್ರು ಶಾಹೀದ್ ಕಪೂರ್ ಹೀರೋಯಿನ್ amrita rao
Actor Amrita Rao

Bollywood  ಸಿನಿಮಾಗಳಲ್ಲಿ ಕನ್ನಡಿಗರು ಛಾಪು ಮೂಡಿಸಿದ್ದಾರೆ. ಅದ್ರಲ್ಲೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai)ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ, ಪೂಜಾ ಹೆಗ್ಡೆ, ಸುನೀಲ್ ಶೆಟ್ಟಿ, ಫ್ರೀಡಾ ಪಿಂಟೋ, ದೀಪಿಕಾ ಪಡುಕೋಣೆ, ಜೆನಿಲಿಯಾ ಡಿಸೋಜಾ ಇವರೆಲ್ಲಾ ಕರ್ನಾಟಕದವರೇ ಆದರೇ ಜನಪ್ರಿಯತೆ ಗಳಿಸಿದ್ದು ಮಾತ್ರ ಬಾಲಿವುಡ್ ನಲ್ಲಿ.

Advertisement

ಇದೀಗ ಮತ್ತೊಬ್ಬ ನಟಿ ತಾನು ಕೂಡ ಕನ್ನಡತಿ ಎಂದಿದ್ದಾರೆ. ಹೌದು ತಾನು ಕರ್ನಾಟಕದವಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಮ್ಮೂರು ಎಂದು ಟ್ಯೂಬ್ (YouTube) ಸಂದರ್ಶನವೊಂದರಲ್ಲಿ ತಾನೊಬ್ಬ ಕನ್ನಡತಿ, ಕಾರವಾರದ ಹುಡುಗಿ ಎಂದು ಹೇಳಿಕೊಂಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಮಾಡಿದ್ದ ಈ ಸಂದರ್ಶನ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ:-Actor Umashree ಮಂಥರೆ yakshagana ವೇಶ ಹೇಗಿದೆ ಗೊತ್ತಾ| ವಿಡಿಯೋ ನೋಡಿ

ಹೌದು ಬಾಲಿವುಡ್ ನಲ್ಲಿ ಒಂದಷ್ಟು ಹಿಟ್ ಫಿಲಂ ಗಳನ್ನು ನೀಡಿ, ನಂತರ ನಟನೆಯಿಂದಲೇ ದೂರ ಉಳಿದ ನಟಿ ಇವರು. ಅವರು ಬೇರಾರು ಅಲ್ಲ ನಟಿ ಅಮೃತಾ ರಾವ್. ವಿವಾಹ್ ನಂತಹ ರೊಮ್ಯಾಂಟಿಕ್ ಪ್ರೇಮಕಥೆಯ ಮೂಲಕ ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅಮೃತಾ ರಾವ್ (Amrita Rao), ಅಷ್ಟೇ ಅಲ್ಲ ಮೇ ಹೂಂ ನಾ ಸಿನಿಮಾದಲ್ಲಿ ತಮ್ಮ ಬಿಂದಾಸ್ ಅಭಿನಯದ ಮೂಲಕ ಮೋಡಿ ಮಾಡಿದ್ದ ನಟಿ ಅಮೃತಾ ರಾವ್ ತನ್ನ ಮೂಲದ ರಹಸ್ಯ ಬಿಚ್ಚಿಟ್ಟಿದ್ದಾರೆ.

ಇನ್ನು ಸಂದರ್ಶನದಲ್ಲಿ ಪ್ರೀತಿಯ ಕನ್ನಡಿಗರಿಗೆ ನಾನು ಅಮೃತಾ ರಾವ್ ಮಾಡುವ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ.

ಬಳಿಕ ಕರ್ನಾಟಕದ ಜೊತೆಗಿನ ನಂಟಿನ ಬಗ್ಗೆ ತಿಳಿಸಿದ ಅವರು ಅಮ್ಮನ ಅಪ್ಪ ಕಾರವಾರದವರು .(Karwar), ಹಾಗಾಗಿ ಕಾರವಾರ, ಕುಮಟಾ, ಮೈಸೂರು ಎಲ್ಲಾ ಜಾಗಗಳ ಬಗ್ಗೆ ಅಮೃತ ರಾವ್ ಮನಬಿಚ್ಚಿ ಮಾತನಾಡಿದ್ದಾರೆ.

Bollywood actor Amrita Rao
Amrita Rao actor

ಕಾರವಾರ ನನ್ನ ಫೇವರಿಟ್ ಟ್ರಾವೆಲ್ ತಾಣ,ಇಲ್ಲಿನ ಬೀಚ್ ಗಳು ಪ್ರಕೃತಿ ಸೌಂದರ್ಯ ಎಲ್ಲವೂ ನನಗೆ ಇಷ್ಟ.ಹೆಚ್ಚಾಗಿ ವೇಕೇಶನ್ ಗೆ ತಮ್ಮ ಫ್ಯಾಮಿಲಿ ಜೊತೆ ಇಲ್ಲಿ ಬರುತಿದ್ದೆ ,ನನ್ನ ಮಾತೃ ಭಾಷೆ ಕೊಂಕಣಿ. ಕರ್ನಾಟಕ ಅಂದ್ರೆ ನಮ್ಮ ಮನೆ ಇದ್ದ ಹಾಗೆ ಎಂದು ಹೇಳಿದ್ದಾರೆ.

ನನಗೆ ಕರ್ನಾಟಕದ ಆಹಾರ ಅಂದ್ರೆ ಇಷ್ಟ. ದೋಸೆ, ಬಿಸಿಬೇಳೆಬಾತ್, ಮೈಸೂರು ಪಾಕ್ (mysore pak) ಅಂದ್ರೆ ತಮಗೆ ತುಂಬಾನೆ ಇಷ್ಟ. ಬೆಂಗಳೂರಲ್ಲಿ ಬಾಲ್ಯವನ್ನು ಕಳೆದಿದ್ದೇನೆ ,ಕಬ್ಬನ್ ಪಾರ್ಕ್ ಫೇವರೇಟ್ ಪ್ಲೇಸ್ ಎಂದಿದ್ದಾರೆ.

Amrita Rao Bollywood actor
ಬಾಲಿವುಡ್ ಸಿನಿಮಾಗಳಲ್ಲಿ ಕನ್ನಡಿತಿಯಾಗಿ ಛಾಪುಮೂಡಿಸಿದ ನಟಿ ಅಮೃತ ರಾವ್

ಇನ್ನು ಕನ್ನಡದ ಸಿನಿಮಾದಲ್ಲಿ ಅಭಿನಯಿಸೋ ಆಸೆಇತ್ತು. ಪುನಿತ್ ರಾಜಕುಮಾರ್ ಜೊತೆ ನಟಿಸುವ ಆಸೆ ಇತ್ತು. ಆದ್ರೆ ಕಾಲ ಕೂಡಿಬರಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ಕರ್ನಾಟಕದವರೇ ಆದ ನಟಿ ಅಮೃತರಾವ್ ಮುಂಬೈ ಹುಡುಗಿ ಅಂದುಕೊಂಡವರಿಗೆ ಇದೀಗ ಈಕೆ ಕರ್ನಾಟಕದವರು ಎನ್ನುವ ವಿಷಯ ಗೊತ್ತಾಗಿದ್ದು,ಇದೀಗ ಹಳೆಯ ಯೂಟ್ಯೂಬ್‌ನ ಸಂದರ್ಶನ ಈಗ ವೈರಲ್ ಆಗಿದೆ.

ಇನ್ನು ಈ ನಟಿ ಫಿಲಮ್ ಫೇರ್ ಅವಾರ್ಡ, ಜೀ ಸಿನಿಮಾ ಅವಾರ್ಡ,ಸ್ಕ್ರೀನ್ ಅವಾರ್ಡ,ಸೇರಿದಂತೆ ಹಲವು ಪ್ರಶಸ್ತಿ ಗಳನ್ನ ಮುಡಿಗೇರಿಸಿಕೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ