Breaking news : ಸಮುದ್ರದ ಅಲೆಗೆ ಕೊಚ್ಚಿಹೋದ ಏಳು ಜನ ವಿದ್ಯಾರ್ಥಿನಿಯರು ಓರ್ವ ವಿದ್ಯಾರ್ಥಿನಿ ಸಾವು ಮೂವರು ಕಾಣೆ!
Murdeshwara 10 December 2024 :- ಸಮುದ್ರದಲ್ಲಿ ಆಟವಾಡುತಿದ್ದ ಏಳು ಜನ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ನೀರುಪಾಲಾಗಿದ್ದು ,ಓರ್ವ ವಿದ್ಯಾರ್ಥಿನಿ (student)ಸಾವು ಕಂಡರೇ ಮೂವರು ಕಾಣೆಯಾಗಿದ್ದು, ಮೂರು ಜನ ವಿದ್ಯಾರ್ಥಿನಿಯರನ್ನು ಲೈಫ್ ಗಾರ್ಡ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಟಳ (bhatkal)ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ (murdeshwara sea) ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಮುರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು ಇಂದು ಸಂಜೆ ಕಡಲಿನಲ್ಲಿ ಆಟವಾಡಲು ಇಳಿದಿದ್ದರು.
ಇದನ್ನೂ ಓದಿ:-Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!
ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಈ ಸಂದರ್ಭದಲ್ಲಿ ಲೈಪ್ ಗಾರ್ಡಗಳು ಯಾವುದೇ ಪರಿಕರ ಸಾಧನ ಇಲ್ಲದಿದ್ದರೂ ಮೂರು ಜನ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿದ್ದು ಓರ್ವ ವಿದ್ಯಾರ್ಥಿನಿ ಸಾವು ಕಂಡರೇ ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಮುಳಬಾಗಿಲಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಶಾವಂತಿ ( 15) ಸಾವು ಕಂಡ ವಿದ್ಯಾರ್ಥಿನಿಯಾಗಿದ್ದು ಮುಳಬಾಗಿಲಿನ ಯಶೋಧ , ವೀಕ್ಷಣಾ , ಲಿಪಿಕಾ ರಕ್ಷಣೆಗೊಳಗಾದವರಾಗಿದ್ದು ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ RNS ಆಸ್ಪತ್ರೆಯ ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ದೀಕ್ಷ , ಲಾವಣ್ಯ, ವಂದನ ಸಮುದ್ರದಲ್ಲಿ ಕಾಣೆಯಾದ ವಿದ್ಯಾರ್ಥಿನಿಯರಾಗಿದ್ದು ಹುಡುಕಾಟ ಮುಂದುವರೆದಿದೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಆಸ್ಪತ್ರೆಗೆ ತಹಶಿಲ್ದಾರ್ ಅಶೋಕ್ ಭಟ್ ರವರು ಭೇಟಿ ನೀಡಿ ಮಕ್ಕಳ ಸ್ಥಿತಿಗತಿ ವಿಚಾರಿಸಿದರು.
ಲೈಪ್ ಗಾರ್ಡ ( lifeguard) ಬಳಿ ಇಲ್ಲ ರಕ್ಷಣಾ ಸಾಮಗ್ರಿ.
ಇನ್ನು ಜಿಲ್ಲಾಡಳಿತ ಲೈಪ್ ಗಾರ್ಡ ಗಳಿಗೆ ರಕ್ಷಣಾ ಸಾಮಗ್ರಿ ಒದಗಿಸಬೇಕು .ಆದರೇ ಈ ಹಿಂದೆ ಲೈಪ್ ಗಾರ್ಡ ( lifeguard) ಗಳೇ ಮನವಿ ಮಾಡಿದರೂ ಲೈಪ್ ಗಾರ್ಡಗಳಿಗೆ ಯಾವುದೇ ಪರಿಕರ ನೀಡದೇ ನಿರ್ಲಕ್ಷ ಮಾಡಿದೆ.
ಇದರಿಂದಾಗಿ ಲೈಫ್ ಗಾರ್ಡ ಗಳು ರಕ್ಷಣೆ ಮಾಡಲು ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡುವಂತಾದರೂ ಮೂರು ಜನರನ್ನು ಮಾತ್ರ ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ.
Feed: invalid feed URL