Breaking news| ಕಡಲ ತೀರದಲ್ಲಿ ಎಕೆ-47 ರೈಫಲ್ ಪತ್ತೆ!
Breaking news| ಕಡಲ ತೀರದಲ್ಲಿ ಎಕೆ-47 ರೈಫಲ್ ಪತ್ತೆ!
ಪಣಜಿ (October. 09) :- ಗೋವಾ (goa)ರಾಜ್ಯದ ಮಿರಾಮಾರ್ ಕಡಲ ತೀರದಲ್ಲಿ ಗುರುವಾರ ಬೆಳಿಗ್ಗೆ ಎಕೆ-47 ರೈಫಲ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.
ಕಡಲ ತೀರದಲ್ಲಿ ಕರ್ತವ್ಯದಲ್ಲಿದ್ದ ಜೀವ ರಕ್ಷಕ ದಳದ ಸಿಬ್ಬಂದಿ( lifeguard) ಎಕೆ-47 ಗನ್ ಮರಳಿನ ಮೇಲೆ ಬಿದ್ದಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Karnataka | ರಾಜ್ಯದ ವಿವಿಧ ವಿಭಾಗದ ಪೊಲೀಸ್ ಪಿ.ಐ ಗಳ ವರ್ಗಾವಣೆ-ಎಲ್ಲಿ ಯಾರಿಗೆ ಯಾವ ಹುದ್ದೆ ವಿವರ ಇಲ್ಲಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ AK -47 ಮಾದರಿಯ ವಸ್ತುವನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆಗೆ ಕಳುಹಿಸಿದ್ದರು. ಇನ್ನು ವಿಷಯ ಹರಡುತಿದ್ದಂತೆ ಜನರಲ್ಲಿ ಆತಂಕ ಸಹ ತಂದೊಡ್ಡಿತ್ತು. ಹಿಂದೆ ಮುಂಬೈ ನಲ್ಲಿ ಉಗ್ರರು ಸಮುದ್ರ ಮೂಲಕ ಹೇಗೆ ದಾಳಿ ಮಾಡಿದ್ದರೋ ಅದೇ ಮಾದರಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದಾರೆಯೇ ,ಅವರ ಕೈನಿಂದ ಸಮುದ್ರದಲ್ಲಿ ತಪ್ಪಾಗಿ ಬಿದ್ದು ಸಿಕ್ಕಿರಬಹುದೇ ಎಂಬ ಗಾಳಿ ಸುದ್ದಿಗಳು (ಫೇಕ್ ನ್ಯೂಸ್) ಹರಡಿತ್ತು. ಇದಲ್ಲದೇ ಗೋವಾ ಪೊಲೀಸರು ಕೇಂದ್ರ ರಕ್ಷಣಾ ದಳದವರಿಗೂ ಮಾಹಿತಿ ನೀಡಿದ್ದರು.
Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ
ಪತ್ತೆಯಾದ ಗನ್ ನನ್ನು ಪರಿಶೀಲನೆ ನಡೆಸಿದಾಗ ಇದು ಪ್ಲಾಸಿಕ್ ಆಟಿಕೆಯ ಗನ್ ಎಂದು ದೃಢಪಟ್ಟಿದೆ. ಇದು ಮಕ್ಕಳ ಆಟಿಕೆಯ ಗನ್ ಆಗಿದ್ದು ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.