January 5 ರಿಂದ ಬಸ್ ದರ ಏರಿಕೆ -ರಾಮಲಿಂಗ ರೆಡ್ಡಿ
ಬೆಂಗಳೂರು:ರಾಜ್ಯ ಸರ್ಕಾರ ( Karnataka state government) ಜನವರಿ 5 ರಿಂದ ಬಸ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಶಕ್ತಿ ಯೋಜನೆ, ಡೀಸೆಲ್ ದರ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸರ್ಕಾರ ಬಸ್ ಟಿಕೆಟ್ ದರವನ್ನು (bus ticket rate )15% ಏರಿಕೆ ಮಾಡಿದೆ.
ಬಿಎಂಟಿಸಿ ಬಸ್(Bus) ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಇಂದಿನ ಕ್ಯಾಬಿನೆಟ್ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರವರು ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:-Karnataka ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ
ಹಿಂದೆ ಏರಿಕೆ ಕಂಡಿದ್ದು ಯಾವಾಗ?.
ದಿನಾಂಕ 26 February 2020- ಏರಿಕೆ ಕಂಡ ನಿಗಮಹೆಸರು -ಕೆಎಸ್ ಆರ್ ಟಿಸಿ ,ಕೆಕೆಆರ್ ಟಿಸಿ ಹಾಗೂ ಎನ್ ಡಬ್ಲೂ ಕೆಎಸ್ ಆರ್ ಟಿ- ಶೇಕಡವಾರು- 12% .
2014 - ನಿಗಮದ ಹೆಸರು- ಬಿಎಂಟಿಸಿ -ಶೇಕಡವಾರು- 17% ಏರಿಕೆ.
2015 ರಲ್ಲಿ 2% ಇಳಿಕೆ ನಂತರ 15% ದರ ಕಡಿಮೆ ಮಾಡಲಾಗಿತ್ತು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಟಿಕೆಟ್ ದರ ಏರಿಕೆ ಅನಿವಾರ್ಯವಾಗಿ ಮಾಡಬೇಕಾಗಿದೆ , 15% ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಬಿಜೆಪಿ ಅವರು ಸಾವಿರಾರು ಕೋಟಿ ಸಾಲ ಉಳಿಸಿ ಹೋಗಿದ್ದರು. ಸಾರಿಗೆ ಸಂಸ್ಥೆಗಳು ಉಳಿಬೇಕು ಹೀಗಾಗಿ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ ಅವರು ನಾಲ್ಕು ನಿಗಮಗಳಿಂದ ಬೇರೆ ಬೇರೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ.
ಬಿಎಂಟಿಸಿಯಿಂದ 42%, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ 28% ದರ ಏರಿಕೆಗೆ ಪ್ರಸ್ತಾವನೆ ಬಂದಿತ್ತು ಎಂದು ಸಚಿವರು ಹೇಳಿದರು.