Rain ನಿಂದ ಸಂಗ್ರಹವಾದ ನೀರಿನಿಂದ ಪಶ್ಚಿಮ ಘಟ್ಟದಲ್ಲಿ ಬದಲಾವಣೆ! ಭೂ ಕಂಪನದ ಹಿಂದಿನ ರಹಸ್ಯ ಏನು?
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪನದ ಅನುಭವ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಕುಮಟಾ,ಶಿರಸಿ,(sirsi)ಯಲ್ಲಾಪುರ,ಸಿದ್ದಾಪುರ ಘಟ್ಟ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 3.5 ತೀವ್ರತೆಯ ಕಂಪನವಾಗಿದೆ. ಆದರೇ ಜಿಲ್ಲಾಡಳಿತ ಭೂ ಕಂಪನವಾಗಿಲ್ಲ ಎಂದು ಹೇಳಿಕೆ ನೀಡಿದೆ. ಆದರೂ ರಾಜ್ಯ ವಿಫತ್ತು ನಿರ್ವಹಣಾ ಪ್ರಾಧಿಕಾರದಿಂದ ಜಗದೀಶ್ ನೇತ್ರತ್ವದ ಇಬ್ಬರು ಭೂ ವಿಜ್ಞಾನಿಗಳ ತಂಡ ಸೋಮವಾರ ಶಿರಸಿ ತಾಲೂಕಿನ ಯಾಣದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ .
ಇಂದು ಸಹ ಯಾಣದ (yana)ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಕಂದಾಯ ಇಲಾಖೆಯಿಂದ ಪರಿಶೀಲನೆಗೆ ಕಳುಹಿಸಿದ ವೈಜ್ಞಾನಿಕ ಅಧಿಕಾರಿ ಜಗದೀಶ್ ಹಾಗೂ ಸಂತೋಷ್ ಕುಮಾರ್ ರವರು ಇಂದು ಸಂಪೂರ್ಣ ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ .
ವೈಜ್ಞಾನಿಕ ಅಧಿಕಾರಿ ಜಗದೀಶ್ ರವರು ಕನ್ನಡವಾಣಿ ಸಂಪರ್ಕಕ್ಕೆ ಸಿಕ್ಕಿದ್ದು ಕೆಲವು ಅಂಶಗಳ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:-Uttara kannda |ಶಿರಸಿ-ಕುಮಟಾ ಘಟ್ಟ ಭಾಗದಲ್ಲಿ ಭೂ ಕಂಪನ !
ಘಟ್ಟಪ್ರದೇಶದಲ್ಲಿ ಆದ ಭೂ ಕಂಪನದಿಂದ ( earthquake) ಹೆದರುವ ಅವಷ್ಯಕತೆಯಿಲ್ಲ. .ಭೂಮಿಕೆಳಗೆ ಪೊದರಗಳು ಇರುತ್ತದೆ ಕೆಲವು ಕಡೆ ಮಳೆ ಹೆಚ್ಚಿದ್ದಾಗ ಕೆಳಭಾಗದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ಭೂ ತಳಭಾಗದ ಒಂದು ಲೇಯರ್ ಇನ್ನೊಂದು ಲೇಯರ್ ಮೇಲೆ ರೀ ಸೆಟಲ್ ಆಗುತ್ತದೆ. ಒಳಭಾಗದಲ್ಲಿ ಒಂದು ಕಲ್ಲು ಇನ್ನೊಂದು ಕಲ್ಲು ಮೇಲೆ ಬೀಳುತ್ತದೆ.ಆಗ ಭೂಮಿಯ ಮೇಲ್ಭಾಗದಲ್ಲಿ ಕಂಪನ ಉಂಟಾಗುತ್ತದೆ. ಅದೇ ಈ ಭಾಗದಲ್ಲಿ ಆಗಿದೆ.
ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ನೈಸರ್ಗಿಕ ಕ್ರಿಯೆ ಅಷ್ಟೇ ಪೊದರಗಳು ರೀ ಸಟಲ್ ಆಗಿದ್ದರಿಂದ ಭೂಮಿ ಕಂಪಿಸಿದೆ ಎಂದರು.
ಘಟ್ಟ ಭಾಗದಲ್ಲಿ ಭೂ ಕುಸಿತ ಆತಂಕ!
ಇನ್ನು ದೇವಿಮನೆ ಘಟ್ಟ ಭಾಗದಲ್ಲಿ ಹೆಚ್ಚಿನ ಮಳೆ ಸುರಿದರೆ ಶಿರೂರು ಭಾಗದಲ್ಲಿ ಆದಂತೆ ಗುಡ್ಡ ಕುಸಿಯುವ ಆತಂಕವಿದೆ. ಹೆದ್ದಾರಿ ಕಾಮಗಾರಿ ಮಾಡುವಾಗ ಗುಡ್ಡವನ್ನು ನೇರವಾಗಿ ತುಂಡರಿಸಲಾಗಿದ್ದು ಇದರಿಂದ ಭೂ ಕುಸಿತವಾಗುವ ಸಾಧ್ಯತೆ ಹೆಚ್ಚಿದೆ . ಕಾಮಗಾರಿ ಮಾಡುವವರು ವೈಜ್ಞಾನಿಕವಾಗಿ ಗುಡ್ಡವನ್ನು ಕತ್ತರಿಸಿದರೆ ಭೂ ಕುಸಿತದ ಸಂಭಾವ್ಯ ಕಡಿಮೆ ಇರುತ್ತದೆ.
ಇದನ್ನೂ ಓದಿ:-Uttara kannda -ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ-ತಜ್ಞರ ಸ್ಥಳ ಪರಿಶೀಲನೆ ಜಿಲ್ಲಾಧಿಕಾರಿ ಹೇಳಿದ್ದಿಷ್ಟು.
ಹೀಗಾಗಿ ಎಚ್ಚರಿಕೆಯಿಂದ ವೈಜ್ಞಾನಿಕ ರೀತಿ ಕಾಮಗಾರಿ ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯ. ಇನ್ನು ಕೇಂದ್ರ ಭೂ ತಜ್ಞರ ಪ್ರಕಾರ ದೇವಿಮನೆ ಘಟ್ಟ ಭಾಗದಲ್ಲಿ ಭೂ ಕುಸಿತವಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಭಾಗದಲ್ಲಿ ಮಣ್ಣು ಸಡಿಲಗೊಂಡಿದೆ. ಕಲ್ಲುಗಳು ಸಹ ಜಾರುತ್ತಿವೆ ಹೀಗಾಗಿ ಆಡಳಿತ ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯ ಭೂಕಂಪನ ಬಗ್ಗೆ ಮಾಹಿತಿ ಇದ್ದರೂ ಜಿಲ್ಲಾಡಳಿತ ಇದನ್ನು ಮುಚ್ಚಿಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ. ವಿಷಯವನ್ನು ಮುಚ್ಚಿಡುವ ಮೂಲಕ ಏನನ್ನು ಸಾಧಿಸಲು ಹೊರಟಿದೆ ಎಂಬ ಪ್ರಶ್ನೆ ಏಳುತ್ತಿದೆ.
ಆದರೂ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಬದಲಾವಣೆ ಮುಂದಿನ ದಿನದ ಭೂ ಕುಸಿತದ ( landslide) ಮುನ್ಸೂಚನೆಯೇ ? ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆ ಏಳುತ್ತಿದೆ.....