ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Waqf: ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Bangalore 02 number 2024 :- ಸಾವಿರಾರು ಎಕರೆ ವಕ್ಫ್ ‌ಆಸ್ತಿಯದು ಸರ್ಕಾರ ಮಾಡಿದ ತೀರ್ಮಾನದಿಂದ ಇದೀಗ ಸರ್ಕಾರ ಹಿಂದೆ ಸರಿದಿದೆ.
08:24 PM Nov 02, 2024 IST | ಶುಭಸಾಗರ್
ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ. ಫೋಟೋದ ಮೇಲೆ ಕ್ಲಿಕ್ ಮಾಡಿ ಮಾಹಿತಿ ತಿಳಿಯಿರಿ.
ಕಾರವಾರದಲ್ಲಿ ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ವಿಶೇಷ ರಿಯಾಯಿತಿ ಮಾರಾಟ ಒಮ್ಮೆ ಭೇಟಿಕೊಡಿ

Bangalore 02 number 2024 :- ಸಾವಿರಾರು ಎಕರೆ ವಕ್ಫ್ ‌ಆಸ್ತಿಯದು ಸರ್ಕಾರ ಮಾಡಿದ ತೀರ್ಮಾನದಿಂದ ಇದೀಗ ಸರ್ಕಾರ ಹಿಂದೆ ಸರಿದಿದೆ.

Advertisement

ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳೂ ರದ್ದು ಮಾಡಿ ಸರ್ಕಾರದ ಮಹತ್ವದ ಆದೇಶ ಮಾಡಿದೆ.

ವಕ್ಫ್‌  (waqf) ವಿಚಾರದಲ್ಲಿ ರೈತರಿಗೆ  ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:-Deepavaliಯಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು ಏಕೆ ಹಬ್ಬದ ಮಹತ್ವ ವೇನು?

Advertisement

ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಇಂದು ಕಂದಾಯ, ಅಲ್ಪಸಂಖ್ಯಾತರ ಕಲ್ತಾಣ ಇಲಾಖೆ ಹಾಗೂ ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು.

ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನೋಟಿಸ್‌ ವಿಚಾರದಲ್ಲಿ ಕೆಲ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆಯೂ ಅಸಮದಾನ ತೋಡಿಕೊಂಡರು.

ಈ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು, ವಕ್ಫ್‌ ವಿಚಾರವನ್ನು ಜೆಡಿಎಸ್‌ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ.

ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಮುಖ್ಯಮಂತ್ರಿಯವರು ವಿನಂತಿ ಮಾಡಿದರು. ಜೊತೆಗೆ ಅಪ ಪ್ರಚಾರಗಳಿಗೆ ಕಿವಿಗೊಡದಂತೆ ಕೋರಿದರು.

ಅಧಿಕಾರಿಗಳೂ ಈ ಕುರಿತು ಎಚ್ಚರ ವಹಿಸಬೇಕು. ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ಸಿಎಂ ನಿರ್ದೇಶನ ನೀಡಿದರು.

 ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ:-

ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು.
ರೈತರು ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು.‌
ಕಾನೂನು ಬಾಹಿರವಾಗಿ ಹಾಗೂ ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು.
Advertisement
Tags :
CM instructsCm siddaramaiahimmediatelyissued to farmersKannda newsWaqf Boardwithdraw notice
Advertisement
Next Article
Advertisement