ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Colors kannda ಸ್ವಾಭಿಮಾನದ ಮಹಾ ಸಂಘರ್ಷದ ಹೊಸ ಕಥೆ-ಭಾರ್ಗವಿ LLB

ಮಂಗಳೂರು: ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯ ಮುಟ್ಟುವ ಮನಮಿಡಿವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ ‘ಭಾರ್ಗವಿ ಎಲ್‌ ಎಲ್‌ ಬಿ ’ಪ್ರೇಕ್ಷಕರಿಗೆ ತಲುಪಿಸುತ್ತಿದೆ.
10:43 PM Feb 28, 2025 IST | ಶುಭಸಾಗರ್
Colors kannda ಸ್ವಾಭಿಮಾನದ ಮಹಾ ಸಂಘರ್ಷದ ಹೊಸ ಕಥೆ-ಭಾರ್ಗವಿ ಎಲ್‌ ಎಲ್‌ ಬಿ

ಸ್ವಾಭಿಮಾನದ ಮಹಾ ಸಂಘರ್ಷದ ಹೊಸ ಕಥೆ-ಭಾರ್ಗವಿ ಎಲ್‌ ಎಲ್‌ ಬಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಮಂಗಳೂರು: ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯ ಮುಟ್ಟುವ ಮನಮಿಡಿವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ ‘ಭಾರ್ಗವಿ ಎಲ್‌ ಎಲ್‌ ಬಿ ’ಪ್ರೇಕ್ಷಕರಿಗೆ ತಲುಪಿಸುತ್ತಿದೆ.

ಈ ಬಹು ನಿರೀಕ್ಷಿತ ಧಾರಾವಾಹಿ ಮಾ.3ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.ಈ ಕಥೆ, ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತದೆ.

ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆ.ಪಿ. ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಇಂಥ ಸನ್ನಿವೇಶದಲ್ಲಿ ಖಾತಿಯ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

ಇದನ್ನೂ ಓದಿ:-Uttara kannda :ಅಂಕೋಲದಲ್ಲಿ ಮಾರ್ಚ 5 ರ ವರೆಗೆ ನಿಷೇದಾಜ್ಞೆ ಜಾರಿ

‘ಭಾರ್ಗವಿ ಎಲ್‌. ಎಲ್‌. ಬಿ ’ಮೂಲಕ ಮತ್ತೊಂದು ಮಹಿಳಾ ಪ್ರಧಾನ ಧಾರಾವಾಹಿಯನ್ನು ಮುಂದಿಡುತ್ತಿದ್ದಾರೆ "ಮುಂಗಾರು ಮಳೆ" ಕೃಷ್ಣ ಈ ಶೋಗೆ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸಂಗೀತ ರಚನೆ ಮತ್ತು ಗಾಯನ ಶಶಾಂಕ್ ಶೇಷಗಿರಿ ಅವರದು, ಹಾಗೂ ಪ್ರಮೋದ ಮರವಂತೆ ಮನಸಿಗೆ ಮುಟ್ಟುವಂತಹ ಸಾಹಿತ್ಯ ರಚಿಸಿದ್ದಾರೆ.

Advertisement
Tags :
bargavi LLBColors KannadaColors Kannada serialkannda sirialKarnatakaNews serial
Advertisement
Next Article
Advertisement