For the best experience, open
https://m.kannadavani.news
on your mobile browser.
Advertisement

Kumta ಶಾಸಕ ದಿನಕರ್ ಶಟ್ಟಿ ಬೆಂಬಲಿಗರ ದೂರು ಮತ್ತು ನೊಂದ ಮಹಿಳೆ ಹೇಳಿದ ಬೆಚ್ಚಿ ಬೀಳಿಸುವ ಲೈಂಗಿಕ ಶೋಷಣೆ ಆರೋಪದ ಕಥೆ !

Kumta news December 15 2024:- ಕುಮಟಾ ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ 80 ಸಾವಿರ ಕಳ್ಳತನವಾದ ಘಟನೆ ಮಾಧ್ಯಮದಲ್ಲಿ ಸುದ್ದಿಯಾಗುತಿದ್ದಂತೆ ಇದೀಗ ಮಧ್ಯಮದ ವಿರುದ್ಧ ಕೋರ್ಟ್ ನ ಅನುಮತಿ ಪಡೆದು ಅವರ ಬೆಂಬಲಿಗರು ದೂರು ದಾಖಲಿಸಿದ್ದಾರೆ
03:37 PM Dec 15, 2024 IST | ಶುಭಸಾಗರ್
kumta ಶಾಸಕ ದಿನಕರ್ ಶಟ್ಟಿ ಬೆಂಬಲಿಗರ ದೂರು ಮತ್ತು ನೊಂದ ಮಹಿಳೆ ಹೇಳಿದ ಬೆಚ್ಚಿ ಬೀಳಿಸುವ ಲೈಂಗಿಕ ಶೋಷಣೆ ಆರೋಪದ ಕಥೆ

Kumta news December 15 2024:- ಕುಮಟಾ ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ 80 ಸಾವಿರ ಕಳ್ಳತನವಾದ ಘಟನೆ ಮಾಧ್ಯಮದಲ್ಲಿ ಸುದ್ದಿಯಾಗುತಿದ್ದಂತೆ ಇದೀಗ ಮಧ್ಯಮದ ವಿರುದ್ಧ ಕೋರ್ಟ್ ನ ಅನುಮತಿ ಪಡೆದು ಅವರ ಬೆಂಬಲಿಗರು ದೂರು ದಾಖಲಿಸಿದ್ದಾರೆ

Advertisement

ಸಾಮಾಜಿಕ ಜಾಲತಾಣದಲ್ಲಿ ( social media) ಅವರ ಬೆಂಬಲಿಗರು ಕೆಲವು ನ್ಯೂಸ್ ಪೇಜ್ ಗಳಲ್ಲಿ ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಕಪೋಲೊಕಲ್ಪಿತ ಸುದ್ದಿಗಳನ್ನು ಬರೆಯುವ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ? "ಇವರಿಗೆ ಸಮಾಜಿಕ ಬದ್ಧತೆ ಇಲ್ಲವೇ"

ಸಾಕ್ಷಾಧಾರ ಗಳಿಲ್ಲದೇ ಸಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನಿನ ಮೂಲಕ ಬುದ್ದಿ ಕಲಿಸಬೇಕು ಎಂಬುದು ಎಲ್ಲರ ಅನಿಸಿಕೆ ಎಂದು ಹಾಕಲಾಗಿದೆ.

ಯಾವುದೇ ಮಾಧ್ಯಮಗಳು ಒಂದು ಸುದ್ದಿಯನ್ನು ಮಾಡುವಾಗ ಅದರ ಮೌಲ್ಯ ,ಸಾಕ್ಷಿ , ಇದರ ಸತ್ಯತೆ ಬಗ್ಗೆ ನೂರು ಬಾರಿ ಯೋಚಿಸಿಯೇ ಮೂಲ ಆಧರಿಸಿ ಸುದ್ದಿ ಪ್ರಕಟಿಸುತ್ತದೆ.

ಶಾಸಕರ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗಿರಲಿಲ್ಲ. ಮರುದಿನ ಹಲವು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದವು. ನಂತರ ಇದರ ಬಗ್ಗೆ ನಾವು ಕೂಡ ಪರಾಮರ್ಷೆ ಮಾಡಿದಾಗ ಆಗಿರುವ ಘಟನೆ ನಿಜವೆಂದು ಅರಿವಿಗೆ ಬಂತು .

ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಸುದ್ದಿ ಪ್ರಕಟ ಮಾಡಿದೆವು. ಆದರೇ ಇದರಬಗ್ಗೆ ಮಾಹಿತಿ ಪಡೆಯಲು ಕುದ್ದು ಶಾಸಕರಿಗೆ ಕಾಲ್ ಮಾಡಿದಾಗ ಅವರ ನಂಬರ್ ಕನೆಕ್ಟ್ ಆಗಲಿಲ್ಲ. ಇನ್ನು ಆರೋಪ ಹೊತ್ತ ಮಹಿಳೆ ಯನ್ನು ಸಹ ಸಂಪರ್ಕಿಸಿದಾಗ ಆಕೆ ಹೇಳಿದ ಮಾತು ಕೇಳಿ ನಾವೇ ಬೆಚ್ಚಿ ಬೀಳುವಂತಾಗಿತ್ತು. ಹೀಗಾಗಿ ನೀನು ನೊಂದಿದ್ದರೇ ಠಾಣೆಯಲ್ಲಿ ದೂರು ನೀಡಿ ಎಂದು ಅವರಿಗೆ ಹೇಳಲಾಗಿತ್ತು. ಆದರೇ ಆಕೆ ಶಾಸಕರು ಜೀವ ಬೆದರಿಕೆ ಹಾಕಿದ್ದಾರೆ ಸಹಾಯ ಮಾಡಿ ಎಂದು ಉತ್ತರಿಸಿದ್ದಳು.ನಂತರ ಆಕೆ ನೀಡಿದ ಸ್ಪಷ್ಟೀಕರಣ ಸಾಕಷ್ಟು ವಿವಾಧ ಎಬ್ಬಿಸುವ ಸಾಧ್ಯತೆ ಇದ್ದು ಈ ಬಗ್ಗೆ ಪೊಲೀಸ್ ಇಲಾಖೆ ,ಮಹಿಳಾ ಆಯೋಗ ,ಕೋರ್ಟ ಗೆ ಸಂಬಂಧಿಸಿದ್ದರಿಂದ ಅದನ್ನು ದೂರು ನೀಡಿದ ನಂತರ ಪ್ರಕಟಿಸುವುದಾಗಿ ತಿಳಿಸಲಾಗಿತ್ತು . ಬದಲಿಗೆ ಘಟನೆ ಬಗ್ಗೆ ಮಾತ್ರ ಪ್ರಕಟಣೆ ಮಾಡಲಾಯಿತು‌.

ಆದರೇ ಅವರ ಬೆಂಬಲಿಗರು ಸಾಕ್ಷಿ ಇದ್ದರೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಬದ್ದತೆ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ನೊಂದ ಮಹಿಳೆ ಹೇಳಿಕೆಯ ಆಡಿಯೋ ವನ್ನು ಇಲ್ಲಿ ನೀಡಲಾಗಿದೆ.

ಶಾಸಕರಿಂದ ನೊಂದ ಮಹಿಳೆ ಹೇಳಿದ ಹೇಳಿಕೆ ಆಡಿಯೋ:-

ಇನ್ನು ಆಕೆ ತನಗೆ ಶಾಸಕರು ಲೈಂಗಿಕ ಕಿರುಕುಳ ಕೊಟ್ಟ ಬಗ್ಗೆ ದೂರಿದ್ದಾಳೆ. ಈ ಬಗ್ಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ.

ಇದಲ್ಲದೇ ಶಾಸಕರು ಕೆಳಮಟ್ಟದಲ್ಲಿ ಮಾತನಾಡಿದ್ದ ವಿಡಿಯೋ ಗಳು ಸಹ ನಮಗೆ ದೊರೆತಿದೆ. ಆದರೇ ದೂರು ನೀಡದ ಹಿನ್ನೆಲೆಯಲ್ಲಿ ಹಾಗೂ ಆ ವಿಡಿಯೋ ಗಳು ಅವರ ವಯಕ್ತಿಕ ಅಭಿಪ್ರಾಯ ವಾದ್ದರಿಂದ ಪ್ರಕಟಿಸಿಲ್ಲ.

ಇವರು ಹೇಳುವಂತೆ ಶಾಸಕರ ತೇಜೋವಧೆ ಮಾಡುವುದಿದ್ದರೇ ಸರಣಿ ಸಾಕ್ಷಗಳ ಸುದ್ದಿಮಾಡುವಷ್ಟಿದೆ. ಅದು ಅವರ ವಯುಕ್ತಿಕ. ನಮಗೆ ಶಾಸಕರ ವಯಕ್ತಿಕ ಬದುಕನ್ನ ಕೆಟ್ಟದಾಗಿ ಬಿಂಬಿಸುವ ಇರಾದೆ ಖಂಡಿತಾ ಇಲ್ಲ. ಒಬ್ಬ ಜನಪ್ರತಿನಿಧಿಯಾಗಲು ಆತ ಸವಿಸುವ ಕಷ್ಟದ ಹಾದಿಗಳ ಬಗ್ಗೆ ಅರಿವಿದೆ. ಆದರೇ ಎಂದು ಜನಪ್ರತಿನಿಧಿ ಸಮಾಜಕ್ಕೆ ಘಾತಕವಾದರೇ ಸಹಿಸಿ ಸುಮ್ಮನಿರುವವರಲ್ಲ.

ನಾವು ಮಾಡಿದ್ದ ಸುದ್ದಿ ಕೇವಲ ಕಳ್ಳತನ ಕ್ಕೆ ಸಂಬಂಧಿಸಿದ್ದು ಹಾಗೂ ನೊಂದ ಮಹಿಳೆ ನೋವು ತೋಡಿಕೊಂಡಿದ್ದಕ್ಕೆ ಸೀಮಿತವಾಗಿತ್ತು.

ಹೊಗಳಿ ಬರೆದರೆ ಪರ, ವಿರುದ್ಧ ಸುದ್ದಿ ಬಂದರೇ ತೇಜೋವಧೆ ಎಂಬ ಹಣಪಟ್ಟಿ ಹೊಸತೇನಲ್ಲ. ಒಬ್ಬ ಪತ್ರಕರ್ತ ನ್ಯಾಯದ ಪಥ ದಲ್ಲಿ ಇದ್ದಾಗ ಜೀವ ಬೆದರಿಕೆ,ಹಲ್ಲೆ,ಪ್ರಕರಣಗಳು ಹೊಸತಲ್ಲ. ಅದನ್ನು ನಾವು ಸ್ವೀಕರಿಸುತ್ತೇವೆ ಮತ್ತು ಹೋರಾಡುತ್ತೇವೆ.

ನಾವು ಮಾಡಿದ ಸುದ್ದಿಯ ಸ್ಪಷ್ಟೀಕರಣಕ್ಕಾಗಿ ನೊಂದ ಮಹಿಳೆ ನೋವು ತೋಡಿಕೊಂಡ ಆಡಿಯೋ ವನ್ನು ಹಾಕಬೇಕಾಯಿತು. ನಾವು ನ್ಯಾಯದ ಪಥದಲ್ಲಿ ಹೋರಾಡಲು ಸಿದ್ದವಿದ್ದೇವೆ ಹಾಗೂ ನಾವು ಮಾಡಿದ ಸುದ್ದಿಗೆ ಬದ್ದರಿದ್ದೇವೆ.

ಹಿಂದೆ ಪ್ರಕಟಗೊಂಡ ಸುದ್ದಿ ಏನು? ಲಿಂಕ್ ಇಲ್ಲಿದೆ:-https://m.kannadavani.news/article/kumta-mla-denakar-shatty-lost-his-money-for-bedroom/24779

ಕುಮಟಾ ಪತ್ರಕರ್ತರಿಂದ ಖಂಡನೆ.

ಕುಮಟಾ ತಾಲೂಕಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲ ಸಂವಿಧಾನಬದ್ಧವಾಗಿ ಹಾಗೂ ಪತ್ರಿಕಾ ಧರ್ಮದಂತೆ ಕಳೆದ ಹಲವು ವರ್ಷಗಳಿಂದ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಬಂದಿದ್ದೇವೆ. ಜಾತಿ, ಧರ್ಮ ಬೇಧವಿಲ್ಲದೇ ಪಕ್ಷಾತೀತವಾಗಿ ಮತ್ತು ವಸ್ತುನಿಷ್ಠ ವರದಿಗಳನ್ನು ಮಾಡುವ ಮೂಲಕ ಈ ಸಮಾಜದಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಗೌರವವನ್ನು ಸಂಪಾದಿಸಿದ್ದೇವೆ. ಸಾರ್ವಜನಿಕ ಬದುಕಿನಲ್ಲಿರುವ ಕೆಲ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಆರೋಪಗಳು ಸಾರ್ವಜನಿಕವಾಗಿ ವ್ಯಕ್ತವಾದಾಗ ಅದನ್ನು ಅವರು ತಮ್ಮ ವಿರುದ್ಧದ ಅಪಪ್ರಚಾರ ಎಂದು ಭಾವಿಸುವುದು ಸಾಮಾನ್ಯವಾಗಿದೆ.ಈ ಬಗ್ಗೆ ಪರಾಮರ್ಷಿಸಿ ತನಿಖೆ ಕೈಗೊಳ್ಳಬೇಕು ಎಂದು ಹಾಗೂ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿರುವುದನ್ನು ಖಂಡಿಸಿ ಕುಮಟಾ ಕಾರ್ಯನಿರತ ಪತ್ರಕರ್ತರು ಕುಮಟಾ ಪೊಲೀಸರಿಗೆ ಮನವಿ ನೀಡಿದ್ದಾರೆ. ಸತ್ಯಾಸತ್ಯತೆ ಅರಿತು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸುವಂತೆ ಆಗ್ರಹಿಸಿ ಮನವಿ ನೀಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ