ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal:ನಿದ್ರೆ ಮಾತ್ರೆ ತಿನ್ನಿಸಿ ಗಂಡನ ಹ** -ಪತ್ನಿಗೆ ಜೀವಾವಧಿ ಶಿಕ್ಷೆ

10:47 PM May 04, 2025 IST | ಶುಭಸಾಗರ್
Karnataka court news kanndavani

Bhatkal:ನಿದ್ರೆ ಮಾತ್ರೆ ತಿನ್ನಿಸಿ ಗಂಡನ ಹ** -ಪತ್ನಿಗೆ ಜೀವಾವಧಿ ಶಿಕ್ಷೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಗಂಡ ಎರಡನೇ ಮದುವೆಯಾದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಭಟ್ಕಳದ(Bhatkal) ರೇಷ್ಮಾ ಖಾನಮ್ ಶಿಕ್ಷೆಗೊಳಗಾದ ಅಪರಾಧಿ ಭಟ್ಕಳ ಮೌಲಾನಾ ಆಜಾದ್ ರಸ್ತೆಯ ಅಬ್ದುಲ್ ನಾಸಿರ್ ಕೊಲೆಯಾದ ಪತಿ. 2017 ರ ಫೆ.17 ರಂದು ಘಟನೆ ನಡೆದಿತ್ತು.

ಇದನ್ನೂ ಓದಿ:-Bhatkal :ಭಟ್ಕಳದಲ್ಲಿದ್ದಾರೆ 14 ಪಾಕಿಸ್ತಾನಿ ಪ್ರಜೆಗಳು ! 

Advertisement

ಪತಿಗೆ ನಿದ್ರೆ ಮಾತ್ರೆ ತಿನ್ನಿಸಿ ಮಲಗಿಸಿದ ಪತ್ನಿ ನಂತರ ವೇಲ್‌ನಿಂದ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಮಲಗಿದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದಳು.

ವಾಷಿಂಗ್ ಮಷಿನ್‌ಗೆ ಹಾಕಿ ಕೊಲೆ ಮಾಡಲು ಬಳಸಿ  ವೇಲ್‌ನ್ನು ತೊಳೆದು, ಸಾಕ್ಷವನ್ನು ನಾಶಪಡಿಸಿದ್ದಳು.

ಆದರೆ, ಆಕೆಯ ವರ್ತನೆಯಿಂದ ಅನುಮಾನಗೊಂಡಿದ್ದ ಮೃತರ ಸಹೋದರನ ಪುತ್ರ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದನು.

ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ರೇಷ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಕಲೆ ಹಾಕಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:-Bhatkal: ಪ್ರತಿಭಟನೆ ಕಾರ್ಯಕರ್ತರಿಗೆ ಕೇಸ್ ನಾಯಕರಿಗೆ ಕೋಕ್ ! ಬಲಿಪಶುವಾದ್ರಾ ಬಿಜೆಪಿ ಕಾರ್ಯಕರ್ತರು!

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಶ ಡಿ.ಎಸ್.ವಿಜಯಕುಮಾರ್ ಅವರು, ಅಪರಾಧ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ 6 ಸಾವಿರ ರೂ. ದಂಡ ತುಂಬುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Advertisement
Tags :
BhatkalCourt orderKannda newsNewsಭಟ್ಕಳ
Advertisement
Next Article
Advertisement