Covid-19: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಫಾಸಿಟಿವ್ ಪತ್ತೆ
Uttara kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಫಾಸಿಟಿವ್ ಪತ್ತೆ.
ಕಾರವಾರ :-ರಾಜ್ಯದಲ್ಲಿ ಕೋವಿಡ್ (covid) ಮಹಾಮಾರಿ ಹೆಚ್ಚಾಗುತಿದ್ದಂತೆ ಗಡಿ ಜಿಲ್ಲೆ ಉತ್ತರ ಕನ್ನಡ ದಲ್ಲೂ ಕೋವಿಡ್ ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಯಲ್ಲಾಪುರದ(yallapura) ಕಿರುವತ್ತಿಯ ಗರ್ಭಿಣಿ ಮಹಿಳೆ ಹಾಗೂ ಚಾಲಕನಲ್ಲಿ ಕೋವಿಡ್ ಇರುವುದು ದೃಡಪಟ್ಟಿದೆ.
ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 8 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು .
ಎಂಟು ಜನರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.ಜಿಲ್ಲೆಯಾಧ್ಯಾಂತ ಒಟ್ಟು 16 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಉಳಿದವರ ತಪಾಸಣಾ ವರದಿ ಹೊರಬರಬೇಕಿದೆ.
ಇದನ್ನೂ ಓದಿ:-Yallapura : ಹಳ್ಳದ ನೀರಿಗೆ ಕೆಮಿಕಲ್ ನೀರು ಬೆರೆಸಿ ಪರಾರಿಯಾದ ಆಗುಂತಕರು!
ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು ,ಈ ಭಾರಿ ಯಾರು ತುಂಬಾ ಅಸ್ವಸ್ಥತೆಯಿಂದ ಕೋವಿಡ್ (covid) ರೋಗ ಲಕ್ಷಣ ಇರುತ್ತಾರೋ ಅಂತವರನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದು ,ಜನ ಭಯ ಪಡುವ ಅಗತ್ಯ ಇಲ್ಲ, ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.