ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸರ್ವರ್ ಹ್ಯಾಕ್ 33 ಲಕ್ಷಕ್ಕೂ ಅಧಿಕ ಹಣ ಕದ್ದ ಸೈಬರ್ ಕಳ್ಳರು.

Ankola news:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ RTGS ಮೂಲಕ ಬೇರೆಯವರ ಖಾತೆ ದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು ವಂಚಿಸಿ ಕದ್ದಿದ್ದಾರೆ.
08:48 AM Jan 29, 2025 IST | ಶುಭಸಾಗರ್
Ankola news

Ankola ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್ ಹ್ಯಾಕ್ 33 ಲಕ್ಷಕ್ಕೂ ಅಧಿಕ ಹಣ ಕದ್ದ ಸೈಬರ್ ಕಳ್ಳರು.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Ankola news:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ(ankola) ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ RTGS ಮೂಲಕ ಬೇರೆಯವರ ಖಾತೆ ದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು  ವಂಚಿಸಿ ಕದ್ದಿದ್ದಾರೆ.

ಈ ಕುರಿತು ಕಾರವಾರದಲ್ಲಿ ಸೈಬರ್ ಕ್ರೈ ವಿಭಾಗದ ಠಾಣೆ (CN) ಯಲ್ಲಿ  ಅಂಕೋಲ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ.

ಇದನ್ನೂ ಓದಿ:-Ankola :ನಿಲ್ಲಿಸಿಟ್ಟ ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆ

Advertisement

ಅಂಕೋಲ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡ ರಿಂದ ವ್ಯವಸಾಯ ಸೇವಾ ಸಹಕಾರಿ ಸಂಘ ಕ್ಕೆ RTGS ಮಾಡಿದ 5,ಲಕ್ಷ ,MS ಮೆಂಕಟೇಶ್ವರ ಗ್ಯಾಸ್ ಸೆಂಟರ್ ನಿಂದ ಮೆಂಕಟೇಶ್ವರ ಗ್ಯಾಸ್ ಸೆಂಟರ್ ಗೆ RTGS ಮಾಡಿದ 5,46,000 ಲಕ್ಷ , ಜೊತೆಗೆ ಇವರದೇ ಮತ್ತೊಂದು ಖಾತೆಗೆ RTGS ಮಾಡಿದ 6,60,000 ಲಕ್ಷ , ಸವಿತಾ ವೆಂಕಟರಮಣ ನಾಯ್ಕ ರಿಂದ TAFE ACCESS LTD ಗೆ RTGS ಮಾಡಿದ 16,36,895 ಲಕ್ಷ ಸೇರಿ ಒಟ್ಟು 33,42,895 ಲಕ್ಷ ಹಣವು RTGS ಮಾಡಿದ ಖಾತೆಗೆ ಹೋಗದೇ ಹ್ಯಾಕ್ ಆಗಿದ್ದು ಸೈಬರ್ ಕಳ್ಳರ ಖಾತೆಗೆ ಜಮ ಆಗಿದೆ ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ:-Ankola : ಪ್ರಾವಾಹ ಸಂತ್ರಸ್ತರ ಪರಿಹಾರ ಹಣಕ್ಕೆ ಕತ್ತರಿ ದಾಖಲೆ ಕೊರತೆ ತಂದೊಡ್ಡಿತು ಸಮಸ್ಯೆ!

ಇನ್ನು ಯಾರಖಾತೆಗೆ ಜಮ ಆಗಿದೆ ಎಂದು ಈವರೆಗೂ ಮಾಹಿತಿ ತಿಳಿದಿಲ್ಲ. ಜೊತೆಗೆ ಜನವರಿ 24 ರಿಂದ 27 ರ ನಡುವೆ ಘಟನೆ ನಡೆದಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಬ್ಯಾಂಕ್ ಸರ್ವರ್ ನಿಂದಲೇ ಹ್ಯಾಕ್ ಆಗಿದ್ದು ಖಾತೆಯಿಂದ ಹಣ RTGS ಆದಾಗಲೇ ಖಾತೆದಾರರು ನೀಡಿದ ಖಾತೆ ಸಂಕೆಗೆ ಹೋಗದೇ ಯಾವುದೋ ಸಂಖೆಗೆ ಹೋಗಿದೆ ಎನ್ನಲಾಗುತ್ತಿದೆ. ಆದರೇ ಯಾವ ಸಂಖ್ಯೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ.

ಬ್ಯಾಂಕ್ ಸರ್ವರ್ ಹ್ಯಾಕ್ ಆದರೇ ಇನ್ನೂ ಹೆಚ್ಚಿನ ಜನರ ಖಾತೆಗೂ ಕನ್ನ ಬೀಳುವ ಸಾಧ್ಯತೆ ಇದ್ದು ಇದೀಗ ಆತಂಕ ಹುಟ್ಟುಹಾಕಿದೆ.

 

Advertisement
Tags :
BankFraudBankingScamCyberAttackCyberCrimeCyberFraudCyberSecurityDigitalTheftFraudAlertHackingOnlineScam
Advertisement
Next Article
Advertisement