CYCLONE :ಮೂರು ದಿನ ಕರ್ನಾಟಕದ ಈ ಭಾಗದಲ್ಲಿ ಮಾಳೆ ಸಾಧ್ಯತೆ
Cyclone news 30 November 2024 :- ಒಂದೆಡೆ ಚಳಿ ಮಂಜು ಈ ನಡುವೆ ಇದೀಗ ಫಂಗಲ್ ಸೈಕ್ಲೋನ್‌ನಿಂದಾಗಿ ಮತ್ತೆ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕರ್ನಾಟಕ(Karnataka) ಸೇರಿ ಏಳು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆ (Rain) ಬೀಳುವ ಸೂಚನೆಯಿದೆ. ಫಂಗಲ್ ಸೈಕ್ಲೋನ್‌ನಿಂದಾಗಿ ಎಲ್ಲಡೆ ಮೋಡ ಮುಸಕಿದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ.
ಇದನ್ನೂ ಓದಿ:-Karnataka:ಬೋರ್‌ವೆಲ್ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.
ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಹಾಗೂ ಅಂಡಮಾನ್, ನಿಕೋಬಾರ್ ದ್ವೀಪಗಳಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತಿದ್ದು ರೆಡ್ ಅಲರ್ಟ ನೀಡಲಾಗಿದೆ.
ತಮಿಳುನಾಡಿನಲ್ಲಿ ಮಳೆ ಅಬ್ಬರದಿಂದ ಭೂ ಕುಸಿತವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು, ಅದರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣ, ಹಾಗೂ ಸುತ್ತ ಮುತ್ತಲಿನ ಪ್ರದೇಶದದಲ್ಲಿ ಇನ್ನೂ 40 ಗಂಟೆ ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಷ್ಣಾಂಶ 18 ಡಿಗ್ರಿC ಇರುವುದರಿಂದ ಚಳಿಯೂ ಅಧಿಕವಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೊಡಗು, ಚಿಕ್ಕಮಗಳೂರು, ಹಾಸನ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಮಳೆ ಡಿಸೆಂಬರ್ 3ರವರೆಗೂ ಹಲವು ಕಡೆ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು ಈ ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ, ಉತ್ತರ ಕರ್ನಾಟಕದ ಸಾಧಾರಣ ಮಳೆಯಾಗಲಿದ್ದು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲೂ ಮಳೆಯಾಗಲಿದೆ.