Dandeli|ದಾಂಡೇಲಿಯಲ್ಲಿ ಕಾಂಗ್ರೆಸ್ ಶಾಸಕನ ಮಗನ ಗಪ್ ಚುಪ್ ಅದ್ದೂರಿ ಅರಿಶಿನ ಶಾಸ್ತ್ರ| ಜನರ ಮೆಚ್ಚಿಗೆ ಗಳಿಸಲು ಹೇಳಿದ್ರ ಸುಳ್ಳು?
Dandeli|ದಾಂಡೇಲಿಯಲ್ಲಿ ಕಾಂಗ್ರೆಸ್ ಶಾಸಕನ ಮಗನ ಗಪ್ ಚುಪ್ ಅದ್ದೂರಿ ಅರಿಶಿನ ಶಾಸ್ತ್ರ| ಜನರ ಮೆಚ್ಚಿಗೆ ಗಳಿಸಲು ಹೇಳಿದ್ರ ಸುಳ್ಳು?
ಕಾರವಾರ:- ರಾಜಕಾರಣಿಗಳು ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುಂತಾಗಿದ್ದು ಕಾಂಗ್ರೆಸ್ ಶಾಸಕ ಕೋನರೆಡ್ಡಿಯ ಮಗನ ಅರಿಶಿನ ಶಾಸ್ತ್ರ ಕಾರ್ಯಕ್ರಮವು ದಾಂಡೇಲಿಯ ಖಾಸಗಿ ರೆಸಾರ್ಟ ನಲ್ಲಿ ಅದ್ದೂರಿಯಾಗಿ ನಡೆದಿದ್ದು ,ಜನ ಪ್ರಶ್ನೆ ಮಾಡುವಂತಾಗಿದೆ.

ಸಾರ್ವಜನಿಕರ ಮೆಚ್ಚುಗೆ ಗಳಿಸಲು ಸುಳ್ಳು ಹೇಳಿದರಾ ಕಾಂಗ್ರೆಸ್ ಶಾಸಕ? ರೈತ ಬಂಡಾಯದ ಮಣ್ಣಿನ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಡಬಲ್ ಸ್ಟ್ಯಾಂಡ್ ಮಾತಿಗೆ ಇದೀಗ ಚರ್ಚೆ ಹುಟ್ಟುಹಾಕಿದೆ.
Dandeli |ಕಾಳಿ ನದಿಯ ಕಬ್ಬಿಣದ ಬೇಲಿ ದಾಟಿ ಬಂದ ಮೊಸಳೆ ! ವಿಡಿಯೋ ನೋಡಿ
ಮಗನ ಮದುವೆ ವಿಚಾರವಾಗಿ ಪ್ರಚಾರ ತೆಗೆದುಕೊಳ್ಳಲು ಮಾಧ್ಯಮದ ಮುಂದೆ ಡಿಸೆಂಬರ್ 7 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ಮಾಡುವುದಾಗಿ ಪ್ರಚಾರ ಪಡೆದಿದ್ದ ಶಾಸಕ ಕೋನರೆಡ್ಡಿ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.
ತಮ್ಮ ಸುಪುತ್ರ ನವೀನಕುಮಾರ್ ಮದುವೆ ವಿಚಾರದಲ್ಲಿ ಸುಳ್ಳು ಹೇಳಿ ತಗ್ಲಾಕಿಕೊಂಡ ಶಾಸಕ
ಅಸಲಿಗೆ ಮದ್ವೆಯ ಶಾಸ್ತ್ರ ಆಯೋಜನೆ ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ರೆಸಾರ್ಟ್ ನಲ್ಲಿ ಎನ್ನುವುದು ದೃಢವಾಗಿದೆ.
ದಾಂಡೇಲಿಯ ಖಾಸಗಿ ರೆಸಾರ್ಟ್ ನಲ್ಲಿ ಭರ್ಜರಿ ಅರಿಶಿಣ ಕಾರ್ಯಕ್ರಮ ನಡೆದಿದ್ದು ಡಿಜೆ, ಗಾನ- ಬಜಾನಾ ಮೂಲಕ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದು, ಇಂದು ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದೆ.ಅರಿಶಿಣ ಸೇರಿದಂತೆ ಎಲ್ಲ ಶಾಸ್ತ್ರಗಳನ್ನ ಅದ್ಧೂರಿಯಾಗಿ ಮಾಡಲಾಗುತ್ತಿದ್ದು ಇಂದು ಮದುವೆ ಕಾರ್ಯ ನಡೆಯಲಿದೆ.
Gokarna|ಲೈಪ್ ಗಾರ್ಡ ಮಾತು ಕೇಳದ ವಿದ್ಯಾರ್ಥಿಗಳು | ಸಮುದ್ರಪಾಲಾಗುತಿದ್ದವರ ರಕ್ಷಣೆ
ಅಧಿವೇಶನಕ್ಕೂ ಮೊದಲ ದಿನ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದ ಶಾಸಸ ಕೋನರೆಡ್ಡಿ
ಸಾಮೂಹಿಕ ವಿವಾಹದಲ್ಲಿ ಮಗನ ಮದುವೆ ಮಾಡುವ ಭರವಸೆ ನೀಡಿದ್ರು, ಸಾಮೂಹಿಕ ವಿವಾಹಕ್ಕೆ ಅಧಿವೇಶನಕ್ಕೆ ಸಿಎಂ ಸೇರಿದಂತೆ ಸಚಿವರನ್ನ ಕರೆಸಲು ಸಿದ್ದತೆ ಮಾಡಿಕೊಂಡಿದ್ದರು.
ಆದರೇ ಈಗ ಗಪ್ ಚುಪ್ ವಿವಾಹ ಜನರ ನಾಲಿಗೆ ಮೇಲೆ ಹರಿದಾಡುವಂತೆ ಮಾಡಿದೆ.