Dandeli : ಸೋಶಿಯಲ್ ಮೀಡಿಯಾ ದಲ್ಲಿ ಪ್ರಧಾನಿ ,ಗೃಹಸಚಿವರು ಸೇರಿದಂತೆ ಬಿಜೆಪಿ ನಾಯಕರ ಅವಹೇಳನ-ಹಣ್ಣಿನ ವ್ಯಾಪಾರಿ ಬಂಧನ
Dandeli : ಸೋಶಿಯಲ್ ಮೀಡಿಯಾ ದಲ್ಲಿ ಪ್ರಧಾನಿ ,ಗೃಹಸಚಿವರು ಸೇರಿದಂತೆ ಬಿಜೆಪಿ ನಾಯಕರ ಅವಹೇಳನ-ಹಣ್ಣಿನ ವ್ಯಾಪಾರಿ ಬಂಧನ.
ಸಾಮಾಜಿಕ ಜಾಲತಾಣದಲ್ಲಿ (social media) ಪ್ರಧಾನಿ ಸೇರಿದಂತೆ ರಾಷ್ಟ್ರ ನಾಯಕರನ್ನು ಅವಮಾನಿಸಲಾದ ಭಾವಚಿತ್ರವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಹಣ್ಣಿನ ವ್ಯಾಪಾರಿಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ.

ಅನಿಸ್ ಹುಲ್ಗರ್ ಬಂಧನಕ್ಕೊಳಗಾದ ಹಣ್ಣಿನ ವ್ಯಾಪಾರಿಯಾಗಿದ್ದು , ಫೇಸ್ ಬುಕ್ ನಲ್ಲಿ ನಾಯಿಯ ದೇಹದ ಭಾವಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಸೇರಿಸಿ ಸಂಸದ ಓವೈಸಿ ಎಳೆತರುವ ಪೋಸ್ಟ್ ನನ್ನು ಹಾಕಿದ್ದನು.
ಈ ಘಟನೆ ದಾಂಡೇಲಿ ಪೊಲೀಸರ(police) ಗಮನಕ್ಕೂ ಬಂದಿದ್ದು ತಕ್ಷಣದಲ್ಲಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:-Dandeli : ನಕಲಿ ನೋಡಿನ ಮಾಲೀಕ ಉತ್ತರ ಪ್ರದೇಶದಲ್ಲಿ ಬಂಧನ! ಏನಿದು ಈತನ ಕಥೆ?
ಈತ ದಾಂಡೇಲಿ ನಗರದ ಸಂಡೆ ಮಾರ್ಕೆಟ್ ಹತ್ತಿರ ಹಣ್ಣು ವ್ಯಾಪಾರ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದನು.