ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli ಬಸ್ ನಲ್ಲೇ ಪ್ರಾಣ ಬಿಟ್ಟ ಸರ್ಕಾರಿ ಅಧಿಕಾರಿ

Dandeli news 05 November 2024 :- ಧಾರವಾಡದಿಂದ ದಾಂಡೇಲಿಗೆ ಹೊರಟ ಬಸ್ಸಿನಲ್ಲಿದ್ದ ಪುಂಡಲಿಕ ರಾಯಪ್ಪ ಚಂದರಗಿ (58) ಬಸ್ಸಿನೊಳಗೆ ಸಾವನಪ್ಪಿದ್ದಾರೆ.
09:14 PM Nov 05, 2024 IST | ಶುಭಸಾಗರ್

Report by  :- Kumar

Advertisement

Dandeli news 05 November 2024 :- ಧಾರವಾಡದಿಂದ ದಾಂಡೇಲಿಗೆ ಹೊರಟ ಬಸ್ಸಿನಲ್ಲಿದ್ದ ಪುಂಡಲಿಕ ರಾಯಪ್ಪ ಚಂದರಗಿ (58) ಬಸ್ಸಿನೊಳಗೆ ಸಾವನಪ್ಪಿದ್ದಾರೆ.

ಜೊಯಿಡಾದ (joida) ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:-Dandeli| ರಿಪೇರಿಗೆ ತಂದ ಸ್ಕೂಟಿ ಬೆಂಕಿಗಾಹುತಿ ವಿಡಿಯೋ ನೋಡಿ

Advertisement

ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅವರು ಧಾರವಾಡದಿಂದ ಕರ್ತವ್ಯಕ್ಕೆ ಹೊರಟಿದ್ದರು. ಬಸ್ಸು ಕೊನೆಯ ನಿಲ್ದಾಣ ದಾಂಡೇಲಿ ತಲುಪಿದರೂ ಅವರು ಬಸ್ಸಿನಿಂದ ಇಳಿಯಲಿಲ್ಲ.

ಇದನ್ನೂ ಓದಿ:-Joida| ರಾಮನಗರ ಬಸ್ ನಿಲ್ದಾಣದಲ್ಲಿ ಚಾಲಕ,ನಿರ್ವಾಹಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಅವರು ನಿದ್ರೆ ಮಾಡಿರಬಹುದು ಎಂದು ಭಾವಿಸಿ ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರು ಎಬ್ಬಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ:-Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ!

ಆದರೂ ಎಚ್ಚರಗೊಳ್ಳದ ಕಾರಣ ನಿರ್ವಾಹಕರಿಗೆ ಮಾಹಿತಿ ನೀಡಿದರು. ಬಸ್ಸಿನ ನಿರ್ವಾಹಕರು ಆಂಬುಲೆನ್ಸ ಕರೆಯಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಪುಂಡಲಿಕ ಚಂದರಗಿ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಪುಂಡಲಿಕ ಅವರು ಹೃದಯಘಾತದಿಂದ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರ ಪತ್ನಿ ರೇಣುಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶವ ಪಡೆದರು.

Feed: invalid feed URL

Advertisement
Tags :
Dandeligovernment employeeHeart attacktraveling busದಾಂಡೇಲಿ
Advertisement
Next Article
Advertisement