ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli:ಪ್ರಧಾನಿ ಮೋದಿ ಅವಹೇಳನಕಾರಿ ಪೋಸ್ಟ್ -ದಾಂಡೇಲಿ ವ್ಯಕ್ತಿ ಬಂಧನ

ಕಾರವಾರ :- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವಮಾನಿಸಲಾದ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದ ದಾಂಡೇಲಿ ನಗರದ ಗಾಂಧಿನಗರದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಇಂದು ನಡೆದಿದೆ.
02:56 PM May 16, 2025 IST | ಶುಭಸಾಗರ್
ಕಾರವಾರ :- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವಮಾನಿಸಲಾದ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದ ದಾಂಡೇಲಿ ನಗರದ ಗಾಂಧಿನಗರದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಇಂದು ನಡೆದಿದೆ.
ಪ್ರಕೃತಿ ಮೆಡಿಕಲ್ ,ಕಾರವಾರ.

 Dandeli:ಪ್ರಧಾನಿ ಮೋದಿ ಅವಹೇಳನಕಾರಿ ಪೋಸ್ಟ್ -ದಾಂಡೇಲಿ ವ್ಯಕ್ತಿ ಬಂಧನ

Advertisement

ಕಾರವಾರ :-  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (Modi) ಅವಮಾನಿಸಲಾದ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದ ದಾಂಡೇಲಿ ನಗರದ ಗಾಂಧಿನಗರದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಇಂದು ನಡೆದಿದೆ.

ದಾಂಡೇಲಿ ಗಾಂಧಿನಗರದ ನಿವಾಸಿ ದುಲೆಸಾಹೇಬ ಮುನಿರಸಾಬ ಸವಣೂರ ಎಂಬಾತನೇ ಈ ಕೃತ್ಯ ಎಸಗಿರುವ ಬಂಧಿತ ವ್ಯಕ್ತಿಯಾಗಿದ್ದಾನೆ. ಈತ ಗುರುವಾರ ಸಂಜೆ ಹಮ್ ಸಾಥ್ ಸಾಥ್ ಹೈ ವಾಟ್ಸಪ್ ಗ್ರೂಪ್ ನಲ್ಲಿ ತನ್ನ ಮೊಬೈಲ್ ಸಂಖ್ಯೆ : 9741270171 ರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಎದುರು ಮಂಡಿಯೂರಿ ಕುಳಿತು ಕೈ ಮುಗಿದ ರೀತಿಯ ಮತ್ತು ಪಾಕಿಸ್ತಾನದ ಧ್ವಜಗಳನ್ನು ಹಿಡಿದು ಸಾಲಾಗಿ ನಿಂತಿರುವ ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಶೂ ಎಸೆಯುತ್ತಿರುವುದು ಮತ್ತು ಅವರು ಓಡಿ ಹೋಗುತ್ತಿರುವ ದೃಶ್ಯದ ಲಿಂಕ್ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದನು.

ಇದನ್ನೂ ಓದಿ:-Dandeli: ಕಾರ್ಖಾನೆಯಲ್ಲಿ ರೇಡಿಯೇಟರ್ ಯಂತ್ರ ಬಿದ್ದು ಕಾರ್ಮಿಕ ಸಾ*ವು

Advertisement

ಇದು ಎರಡು ವರ್ಗಗಳ ಮಧ್ಯೆ ದ್ವೇಷ ಹಾಗೂ ಸಂಘರ್ಷಕ್ಕೆ ಮತ್ತು ಮತೀಯ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿಯೂ, ಎರಡು ಸಮುದಾಯದ ಜನರಿಗೆ ಪ್ರಚೋದಿಸುವಂತೆಯೂ ಹಾಗೂ ಸಾರ್ವಜನಿಕರ ಶಾಂತಿ ಕದಡುವ ತರಹದ ರೀತಿಯಲ್ಲಿ ಮಾಡಿರುತ್ತಾನೆ. ಎರಡು ವರ್ಗದವರನ್ನು ಉದ್ರೇಕಗೊಳಿಸಿ ದೊಂಬಿ ಅಪರಾಧ ನಡೆಯಲೆಂದು ಅಥವಾ ನಡೆಯುವ ಸಂಭವ ಇದೆ ಎಂದು ಗೊತ್ತಿದ್ದರೂ ಸಹ, ಎರಡು ವರ್ಗಗಳ ಜನರನ್ನು ಉದ್ರೇಕಿಸಿರುತ್ತಾನೆ ಹಾಗೂ ಎರಡು  ಧರ್ಮದವರ ಮೇಲೆ ವೈರತ್ವದ ಭಾವನೆಯನ್ನು ಮೂಡಿಸುವಂತಹ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿರುವುದಕ್ಕೆ  ದುಲೆಸಾಹೇಬ ಮುನಿರಸಾಬ ಸವಣೂರ ಈತನನ್ನು ಬಂಧಿಸಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ.

Advertisement
Tags :
DandeliFacebookKannda newsKaravaliKarnatakaModiPost
Advertisement
Next Article
Advertisement