ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli: ಮೈಕ್ರೋ ಫೈನಾನ್ಸ್ ಹಾವಳಿ ಮನೆಬಿಟ್ಟ 20 ಕುಟುಂಬ

ಕಾರವಾರ :-ರಾಜ್ಯದಲ್ಲಿ ಮೈಕ್ರೂ ಫೈನಾನ್ಸ್ ಹಾವಳಿಯಿಂದ ಸಾಲ ಪಡೆದ ಜನ ಸಂಕಷ್ಟಕ್ಕೆ ಸುಲುಕಿ ತಮ್ಮ ಜೀವವನ್ನೇ ಬಲಿಕೊಡುತಿದ್ದಾರೆ. ಇತ್ತ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ನಿಯಮ ಜಾರಿವೆ ತರಲು ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ.
09:42 PM Jan 31, 2025 IST | ಶುಭಸಾಗರ್
Micro Finance harassment

Dandeli: ಮೈಕ್ರೋ ಫೈನಾನ್ಸ್ ಹಾವಳಿ ಮನೆಬಿಟ್ಟ 20 ಕುಟುಂಬ!

Advertisement

ಕಾರವಾರ :-ರಾಜ್ಯದಲ್ಲಿ ಮೈಕ್ರೂ ಫೈನಾನ್ಸ್ ಹಾವಳಿಯಿಂದ ಸಾಲ ಪಡೆದ ಜನ ಸಂಕಷ್ಟಕ್ಕೆ ಸುಲುಕಿ ತಮ್ಮ ಜೀವವನ್ನೇ ಬಲಿಕೊಡುತಿದ್ದಾರೆ. ಇತ್ತ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ನಿಯಮ ಜಾರಿವೆ ತರಲು ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಹೀಗಿದ್ದರೂ ಮೈಕ್ರೋ ಫೈನಾನ್ಸ್ ( microfinance) ನವರ ಕಾಟ ಸಾಲಗಾರರಿಗೆ ತಪ್ಪುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು,ಹಳಿಯಾಳ,ದಾಂಡೇಲಿಯಲ್ಲಿ ಮೈಕ್ರೂ ಫೈನಾನ್ಸ್ ಕಾಟದಿಂದ 20 ಕುಟುಂಬಗಳು ಊರು ತೊರೆದಿದೆ.

20 ,30 ಸಾವಿರ ಸಾಲ ನೀಡಿ ಕಾಲಿ ಚಕ್ ಗೆ ಸಹಿ ಹಾಕಿಸಿಕೊಂಡು ಬಡ್ಡಿ ,ಅಸಲು ಹಣ ಪಡೆದು ಕೊನೆಗೆ ಮತ್ತೆ ಹಣಕ್ಕೆ ಬೇಡಿಕೆ ಇಡುವ ಕೆಲವು ಫೈನಾನ್ಸ್ ಗಳು ಕಾಲಿ ಚಕ್ ಬಳಸಿ ಸಾಲ ಪಡೆದವರಿಗೆ ಬೆದರಿಕೆ ಹಾಕುತಿದ್ದು ಕೋರ್ಟ(court) ನಲ್ಲಿ  ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿವೆ.

Advertisement

ಇದನ್ನೂ ಓದಿ:- Haliyala |3 ಲಕ್ಷ ಮೌಲ್ಯದ ನಾಟ ವಶ ನಾಲ್ಕುಜನ ಆರೋಪಿಗಳ ಬಂಧನ

ಇನ್ನು ದಾಂಡೇಲಿಯ(Dandeli) ಹಸೀನಾ ಶೇಖ್ ಎಂಬುವವರು ಫೈನಾನ್ಸ್ ನಲ್ಲಿ ಸಾಲ ಪಡೆದು ಬಡ್ಡಿ ಅಸಲು ಕಟ್ಟಿದ್ದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಇದೀಗ ಈ ಮಹಿಳೆ ಗ್ರಾಮ ದೊರೆದಿದ್ದಾಳೆ. ವಿಡಿಯೋ ಮಾಡಿ ತನ್ನ ನೋವು ತೋಡಿಕೊಂಡಿದ್ದು ಮುಖ್ಯಮಂತ್ರಿಗಳಿಗೆ ತಮಗೆ ಸಹಾಯ ಮಾಡುವಂತೆ ಕೋರಿದ್ದಾಳೆ.

ಇದನ್ನೂ ಓದಿ:-Dandeli ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ವ್ಯಕ್ತಿ ಬಂಧನ

ಹಳಿಯಾಳ ,ದಾಂಡೇಲಿ ಭಾಗದಲ್ಲಿ ಮೈಕ್ರೋ  ಫೈನಾನ್ಸ್ ನವರು ಪುಡಿ ರೌಡಿಗಳನ್ನು ಸಾಲ ,ಬಡ್ಡಿ ವಸೂಲಿಗೆ ಬಿಡುತಿದ್ದಾರೆ. ಹಗಲು ರಾತ್ರಿ ಎನ್ನದೇ ಮನೆಗೆ ನುಗ್ಗಿ ಸಾಲ ವಸೂಲಿಗೆ ಇಳಿಯುತಿದ್ದು ಇದೀಗ ಸಾಲ ಪಡೆದವರು ಮನೆ ಬಿಡುವಂತಾಗಿದೆ.

ಇದನ್ನೂ ಓದಿ:-Dandeli ಹೆದ್ದಾರಿಯಲ್ಲಿ ಆನೆ ಹಿಂಡು ರಸ್ತೆಗಿಳಿದು ಸೆಲ್ಫಿ ಗೆ ಮುಂದಾದ ಪ್ರವಾಸಿಗರು.

ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಇದರ ಜೊತೆ ಫೈನಾನ್ಸ್ ಕಂಪನಿಗಳು ಸಾಲ ವಸೂಲಿಗೆ ಕಿರುಕುಳ ನೀಡಿದರೇ ದೂರು ಕೊಡಲು ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

Advertisement
Tags :
BankDandeli newsFinanceKarnataka newsloanMicro Finance harassmentUttara kannda news
Advertisement
Next Article
Advertisement