OREO ಬಿಸ್ಕೇಟ್ ನಲ್ಲಿ ಹುಳ ಪತ್ತೆ | ಬಿಸ್ಕತ್ ತೆರದ ಬಾಲಕನಿಗೆ ಕಾದಿತ್ತು ಶಾಕ್| ವಿಡಿಯೋ ನೋಡಿ
OREO ಬಿಸ್ಕೇಟ್ ನಲ್ಲಿ ಹುಳ ಪತ್ತೆ | ಬಿಸ್ಕತ್ ತೆರದ ಬಾಲಕನಿಗೆ ಕಾದಿತ್ತು ಶಾಕ್| ವಿಡಿಯೋ ನೋಡಿ.
ಕಾರವಾರ:- ಮಗುವಿಗೆ ತಿನ್ನಲು ಕೊಟ್ಟ ಓರಿಯೋ (OREO) ಕಂಪನಿಯ ಬಿಸ್ಕೇಟ್ ನ ಒಳಭಾಗದ ಕ್ರೀಮ್ ನಲ್ಲಿ ಹುಳ ಪತ್ತೆಯಾಗಿದೆ. ಹೌದು ಈ ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ (dandeli) ದಾಂಡೇಲಿಯಲ್ಲಿ .
ಇಲ್ಲಿನ ಖಾಸಗಿ ಸ್ಕೂಲ್ ಒಂದರಲ್ಲಿ ಯುಕೆಜಿ ಬಾಲಕನಿಗೆ ಆತನ ತಾಯಿ ಮಧ್ಯಾಹ್ನದ ವೇಳೆ ತಿನ್ನಲು ಟಿಫನ್ ಬಾಕ್ಸ್ ನಲ್ಲಿ ಓರಿಯಾ ಕಂಪನಿಯ ಬಿಸ್ಕೇಟ್ ನನ್ನು ಕಳುಹಿಸಿದ್ದರು. ಮಧ್ಯಾಹ್ನದ ವೇಳೆ ಆ ಪುಟ್ಟ ಬಾಲಕ ಬಿಸ್ಕೇಟ್ ತಿನ್ನಲು ಟಿಫನ್ ಬಾಕ್ಸ್ ನಿಂದ ಬಿಸ್ಕೇಟ್ ತೆರೆದಿದ್ದಾನೆ ಮೊದಲು ಬಿಸ್ಕೇಟ್ ನ ಸ್ಟ್ರಾಬರಿ ಪ್ಲೇವರ್ ನ ಕ್ರೀಮ್ ತಿನ್ನಲು ಬಿಡಿಸಿದಾಗ ಈ ಕ್ರೀಮ್ ನಲ್ಲಿ ಚಿಕ್ಕ ಹುಳಗಳು ಇರುವುದು ಕಂಡಿದೆ. ತಕ್ಷಣ ಶಿಕ್ಷಕರ ಗಮನಕ್ಕೆ ತರಲಾಗಿದ್ದು ,ಆತ ತಂದ ಬಿಸ್ಕೇಟ್ ತೆಗೆದು ನೋಡಿದಾಗ ಎಲ್ಲಾ ಬಿಸ್ಕೇಟ್ ನಲ್ಲಿ ಹುಳಗಳು ಪತ್ತೆಯಾಗಿದೆ.
ಓರಿಯೋ ಬಿಸ್ಕೇಟ್ ಅಮೇರಕ ಮೂಲದ ಬಿಸ್ಕೇಟ್ ಆಗಿದ್ದು 1912 ರಲ್ಲಿ ಇದರ ಉತ್ಪಾದನೆ ಮಾಡಲಾಗುತಿದ್ದು, ಇಂಟರ್ ನ್ಯಾಷನಲ್ ಬ್ರಾಂಡ್ ಆಗಿದೆ. ಹೀಗಿದ್ದರೂ ಇದರ ಕ್ವಾಲಿಟಿ ಇಷ್ಟು ಕೆಳಮಟ್ಟದ್ದಾಗಿದ್ದು,ಹುಳ ಬಿದ್ದಿರುವುದು ಆಘಾತ ತರುತ್ತಿದೆ.
Dandeli |ಕಾಳಿ ನದಿಯ ಕಬ್ಬಿಣದ ಬೇಲಿ ದಾಟಿ ಬಂದ ಮೊಸಳೆ ! ವಿಡಿಯೋ ನೋಡಿ
ಮಕ್ಕಳಿಗೆ ಪ್ರಿಯವಾದ ಈ ಬಿಸ್ಕೇಟ್ ಸಾಂಟವಿಚ್ ಕುಕ್ಕೀಸ್ ರೂಪದ್ದಾಗಿದ್ದು , ಹಲವು ಫ್ಲೇವರ್ ನಲ್ಲಿ ಲಭ್ಯವಿದೆ. ಹೀಗಾಗಿ ಮಕ್ಕಳಿಗೆ ಪೋಷಕರು ಪೂರ್ವಾಪರ ನೀಡದೇ ಕೊಡುತಿದ್ದಾರೆ. ಇಂತಹ ಬಿಸ್ಕೇಟ್ ನಲ್ಲಿ ಹುಳ ಆಗಿದೆ ಎಂದರೇ ಪ್ರತಿಯೊಬ್ಬರೂ ಜಾಗೃತರಾಗಿರುವುದು ಅವಷ್ಯ.
ಇನ್ನು ಈ ಬಿಸ್ಕೇಟ್ ನಲ್ಲಿ ಹುಳ ನೋಡಿದ ಶಿಕ್ಷಕರು ಪೋಷಕರಿಗೂ ಎಚ್ಚರಿಸಿದ್ದು ,ಮಕ್ಕಳಿಗೆ ಹೊರಗಿನ ತಿನಿಸು ನೀಡಬೇಡಿ, ಮನೆಯಲ್ಲೇ ಮಾಡಿದ ಆಹಾರ ನೀಡುವಂತೆ ತಿಳಿ ಹೇಳಿದ್ದಾರೆ.
ಮೈದವೇ ಹೆಚ್ಚಾಗಿರುವ ಈ ಬಿಸ್ಕೇಟ್ ನಲ್ಲಿ ಆಯಲ್ ಅಂಶ ಕೂಡ ಇರುತ್ತದೆ.ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಬಿಸ್ಕೇಟ್ ಗಳ ಬಗ್ಗೆ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಕುರುಕಲು ತಿನಿಸಿನ ಮೋಹ ಬಿಡದಿರುವುದು ದುರಂತ .

