For the best experience, open
https://m.kannadavani.news
on your mobile browser.
Advertisement

Darmasthala: ಶವ ಶೋಧ ಕಾರ್ಯದಲ್ಲಿ ಸಿಕ್ಕ ಪಾನ್ ಕಾರ್ಡ,ಡೆಬಿಟ್ ಕಾರ್ಡ ರಹಸ್ಯ ಬಯಲು 

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಾಯಿಂಟ್‌ ನಂಬರ್‌ ಒಂದರಲ್ಲಿ ಸಿಕ್ಕ ಡೆಬಿಟ್‌ ಕಾರ್ಡ್‌, ಪಾನ್‌ ಕಾರ್ಡ್‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ.
08:31 AM Aug 01, 2025 IST | ಶುಭಸಾಗರ್
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಾಯಿಂಟ್‌ ನಂಬರ್‌ ಒಂದರಲ್ಲಿ ಸಿಕ್ಕ ಡೆಬಿಟ್‌ ಕಾರ್ಡ್‌, ಪಾನ್‌ ಕಾರ್ಡ್‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ.
darmasthala  ಶವ ಶೋಧ ಕಾರ್ಯದಲ್ಲಿ ಸಿಕ್ಕ ಪಾನ್ ಕಾರ್ಡ ಡೆಬಿಟ್ ಕಾರ್ಡ ರಹಸ್ಯ ಬಯಲು 

Darmasthala: ಶವ ಶೋಧ ಕಾರ್ಯದಲ್ಲಿ ಸಿಕ್ಕ ಪಾನ್ ಕಾರ್ಡ,ಡೆಬಿಟ್ ಕಾರ್ಡ ರಹಸ್ಯ ಬಯಲು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಾಯಿಂಟ್‌ ನಂಬರ್‌ ಒಂದರಲ್ಲಿ ಸಿಕ್ಕ ಡೆಬಿಟ್‌ ಕಾರ್ಡ್‌, ಪಾನ್‌ ಕಾರ್ಡ್‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ.

ಪಾಯಿಂಟ್ ನಂಬರ್ ಒನ್‌ನಲ್ಲಿ ಡೆಬಿಟ್ ಹಾಗೂ ಪಾನ್ ಕಾರ್ಡ್ ಪತ್ತೆಯಾಗಿತ್ತು. ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಿಸುದಾರ ಸಾವು ಎಂದು ಮಾಹಿತಿ ಸಿಕ್ಕಿತ್ತು. ಇದೀಗ, ಆ ಡೆಬಿಟ್ ಕಾರ್ಡ್ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಎಂದು ಮಾಹಿತಿ ಲಭಿಸಿದೆ

ಡೆಬಿಟ್‌ ಕಾರ್ಡ್‌ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಮಹಿಳೆ ಇನ್ನೂ ಜೀವಂತ ಎಂದು ಮಾಹಿತಿ ಸಿಕ್ಕಿದೆ. ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಯನ್ನು ಎಸ್‌ಐಟಿ ಖಚಿತಪಡಿಸಿದೆ.

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

ಧರ್ಮಸ್ಥಳ ಫೈಲ್ಸ್‌ಗೆ (Dharmasthala Burials Case) ಮಹತ್ವದ ಟ್ವಿಸ್ಟ್ ಸಿಕ್ಕಿದೆ. 6ನೇ ಪಾಯಿಂಟ್‌ನಲ್ಲಿ 12 ಮೂಳೆಗಳು ಪತ್ತೆಯಾಗುವ ಮೂಲಕ ಅನಾಮಿಕನ ದೂರಿಗೆ ಬಲ ಬಂದಿದೆ. ಕತ್ತಲು ಕವಿಯುವವರೆಗೂ ನಡೆದ ಈ ಕಾರ್ಯಾಚರಣೆ ಅನೇಕ ಕುತೂಹಲಗಳನ್ನು ತೆರೆದಿಟ್ಟಿದೆ. ಇಂದು ಮತ್ತೆ ಉತ್ಖನನ ಮುಂದುವರಿಯಲಿದೆ.

ಇದನ್ನೂ ಓದಿ:- Karnataka:ಸಿನಿಮಾ ರೂಪದಲ್ಲಿ ಮೂಡಿಬರಲಿದೆ ಶಿರೂರು ದುರಂತ ಘಟನೆ!

 ಆರಂಭಿಕ 5 ಪಾಯಿಂಟ್‌ಗಳಲ್ಲಿ ಯಾವುದೇ ಮೂಳೆಯ ಕುರುಹು ಸಿಗದೇ ಇದ್ದಾಗ, ಅನಾಮಿಕ ದೂರುದಾರನ ಆರೋಪಗಳ ಬಗ್ಗೆನೇ ಸಂಶಯಗಳು ಎದ್ದಿದ್ವು.. ಇದೀಗ ಆರನೇ ಪಾಯಿಂಟ್‌ನಲ್ಲಿ ಮೂಳೆಗಳ ಕುರುಹು ಸಿಕ್ಕಿದೆ. ಸಿಕ್ಕಿರುವ ಮೂಳೆಗಳು ಪುರುಷನದ್ದು ಎನ್ನಲಾಗಿದೆ. ಉತ್ಖನನ ವೇಳೆ ಸಿಕ್ಕ 12 ಮೂಳೆಗಳನ್ನು ಸಂರಕ್ಷಿಸಿ ಇಡಲಾಗಿದೆ.

ಗುರುವಾರ ನಡೆದ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಅರಣ್ಯ ಪ್ರದೇಶದಲ್ಲಿ ಸಾಗಿ 6ನೇ ಪಾಯಿಂಟ್ ಅಗೆದಿದ್ರು. ನದಿ ತೀರದ ಪಾಯಿಂಟ್ ಬಗ್ಗೆ ದೂರುದಾರಿಗೆ ವಿಶೇಷ ಆತ್ಮವಿಶ್ವಾಸ ಇತ್ತು. ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು ಮೂರೇ ಅಡಿ ಅಗಿಯುವಾಗ ಎರಡು ಮೂಳೆಗಳು ಪತ್ತೆಯಾಗಿವೆ. ಹಿಟಾಚಿ ಬಳಸಿಕೊಂಡು ಮತ್ತಷ್ಟು ಆಳಕ್ಕಿಳಿದಾಗ ಒಟ್ಟು 12 ಮೂಳೆಗಳು ಕಂಡುಬಂದಿವೆ. ಮೂಳೆಗಳು ಸಿಗುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಹಾಗೂ ಎಫ್‌ಎಸ್‌ಎಲ್ ತಜ್ಞರನ್ನು ಬಳಸಿಕೊಂಡು ಎಲ್ಲಾ ಮೂಳೆಗಳನ್ನು ಸಂರಕ್ಷಿಸಲಾಗಿದೆ. ಮೂಳೆ ಸಿಕ್ಕ ಪಾಯಿಂಟ್‌ನಲ್ಲಿ ನೀರಿನ ಒರತೆ ಹೆಚ್ಚಿದ್ದ ಕಾರಣ, ತಗಡಿನ ಸೀಟುಗಳನ್ನು ಬಳಸಿ ಶೆಲ್ಟರ್ ಮಾಡಲಾಗಿದೆ

ಇದನ್ನೂ ಓದಿ;-Karnataka :ಖಾಸಗಿ ಅಂಬುಲೆನ್ಸ್ ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯದ ಜೊತೆ ದರ ನಿಗದಿ

ಇಂದು ಬೆಳಗ್ಗೆ 7ನೇ ಪಾಯಿಂಟ್‌ನಿಂದ ಮತ್ತೆ ಅಗೆಯುವ ಕಾರ್ಯ ಆರಂಭವಾಗಲಿದೆ. ಜೊತೆಗೆ 8ನೇ ಪಾಯಿಂಟ್‌ನ ಬಳಿ ಎಲ್ಲಾ ಸಿದ್ಧತಾ ಕಾರ್ಯ ನಡೆದಿದೆ. ಮತ್ತೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದ್ದು ಮುಂದಿನ ಎರಡು ದಿನದಲ್ಲಿ ಎಲ್ಲಾ ಪಾಯಿಂಟ್‌ಗಳಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಇಂದು ನಡೆಸೋ ಉತ್ಖನನದಲ್ಲಿ ಮತ್ತಷ್ಟು ಕಳೇಬರ ಸಿಕ್ರೆ ಈ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ