For the best experience, open
https://m.kannadavani.news
on your mobile browser.
Advertisement

Today news| ಇಂದಿನ ಪ್ರಮುಖ ಸುದ್ದಿ ಎಲ್ಲಿ ಏನು?

Today News (03 November 2025): Major headlines from Karnataka — robbery by transgenders in Murdeshwar, ₹2.29 crore online trading scam in Karwar, theft in Sorab, tragic accident in Thirthahalli, cyber fraud in Bhadravathi, and rain forecast for Shivamogga. Gold and silver prices surge, Bigg Boss update, RBI on ₹2000 note withdrawal, and Karnataka tops GST revenue list.
12:22 PM Nov 03, 2025 IST | ಶುಭಸಾಗರ್
Today News (03 November 2025): Major headlines from Karnataka — robbery by transgenders in Murdeshwar, ₹2.29 crore online trading scam in Karwar, theft in Sorab, tragic accident in Thirthahalli, cyber fraud in Bhadravathi, and rain forecast for Shivamogga. Gold and silver prices surge, Bigg Boss update, RBI on ₹2000 note withdrawal, and Karnataka tops GST revenue list.
today news  ಇಂದಿನ ಪ್ರಮುಖ ಸುದ್ದಿ ಎಲ್ಲಿ ಏನು
ರಾಜ್ಯದ ಪ್ರಮುಖ ಸುದ್ದಿಗಳು ಪ್ರತಿ ಜಿಲ್ಲೆಯ ವಿವರ ಇಲ್ಲಿದೆ.

Today news| ಇಂದಿನ ಪ್ರಮುಖ ಸುದ್ದಿ ಎಲ್ಲಿ ಏನು?

Today news (03 November2024):- ಉತ್ತರ ಕನ್ನಡ,ಶಿವಮೊಗ್ಗ,ಉಡುಪಿ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳು ಇಲ್ಲಿವೆ. 

Advertisement

ಉತ್ತಮ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು ನಮ್ಮೊಂದಿಗೆ ಕೈ ಜೋಡಿಸಲು ಕೆಳಗಿನ ಅಕ್ಷರ ಮೇಲೆ ಕ್ಲಿಕ್ ಮಾಡಿ ಗ್ರೂಪ್ ಗೆ ಸೇರಿ:-

https://chat.whatsapp.com/HbI3YG8zHwtAYxenaKEbAg?mode=ems_copy_ta

Bhatkal: ಯುವಕನಿಂದ ಚಿನ್ನದ ಸರ ಸುಲಿಗೆ ಮಾಡಿದ ಮಂಗಳಮುಖಿಯರು .

Murudeshwara police station crime news
Murudeshwara police station

ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿ-66ರ ಸರ್ವೀಸ್ ರಸ್ತೆಯಲ್ಲಿ ಮಂಗಳಮುಖಿಯರು ಯುವಕನಿಗೆ ಮುತ್ತು ನೀಡುವ ನೆಪದಲ್ಲಿ ಬೆದರಿಸಿ, ಆತನ ಕುತ್ತಿಗೆಯಲ್ಲಿದ್ದ ₹1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾರೆ. ದೂರುದಾರರಾದ ಅರುಣ್ ಕುಮಾ‌ರ್ ಭಾಸ್ಕರ ನಾಯ್ಕ (32) ರೈಲ್ವೆ ಸ್ಟೇಷನ್‌ ಬಳಿ ನಿಂತಿದ್ದಾಗ ನಾಲ್ವರು ಮಂಗಳಮುಖಿಯರು ಬಂದು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

Karwar: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ₹2. 29 ಕೋಟಿ ವಂಚನೆ.

Karwar cyber crime police station
Karwar cyber crime police station

ಶಿರಸಿಯ 54 ವರ್ಷದ ಸಂಪತಕುಮಾರ ಮುಕುಂದ ರಾವ್ ಎಂಬುವವರು ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ ಹೂಡಿಕೆ ಮಾಡಿ ₹2,29,05,376 ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 31, 2025ರ ಅವಧಿಯಲ್ಲಿ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿದ್ದರು. ಟ್ರೇಡಿಂಗ್ ಆ್ಯಪ್‌ನಲ್ಲಿ ₹10 ಕೋಟಿಗೂ ಹೆಚ್ಚು ಲಾಭತೋರಿಸಿದರೂ, ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ವಂಚನೆ ಅರಿವಾಗಿದೆ. ಈ ಸಂಬಂಧ ಕಾರವಾರದ(Karwar) ಸೈಬ‌ರ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Sorab: 150 ಕಬ್ಬಿಣದ ಪ್ಲೇಟ್‌ಗಳು ಕಳ್ಳತನ

Shivamogga anavatti police station
ಆನವಟ್ಟಿ ಪೊಲೀಸ್ ಠಾಣೆ. ಸೊರಬ

ಸೊರಬ ತಾಲೂಕು ಆನವಟ್ಟಿಯ ತಲ್ಲೂರು ಗ್ರಾಮದ ಶ್ರೀ ಸಾಯಿಬಾಬಾ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯ ಸೆಂಟ್ರಿಂಗ್ ಕೆಲಸಕ್ಕೆ ತರಿಸಲಾಗಿದ್ದ 150 ಕಬ್ಬಿಣದ ಪ್ಲೇಟ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಈ ಕಳ್ಳತನದಿಂದ ಸುಮಾರು 90,000 ರೂ. ನಷ್ಟವಾಗಿದೆ ಎಂದು ಗುತ್ಯಪ್ಪ ಎಂಬುವವರು ಆರೋಪಿಸಿ ದೂರು ನೀಡಿದ್ದಾರೆ. ಈ ಸಂಬಂಧ ಆನವಟ್ಟಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

Thirthahalli : ಅಡಿಕೆ ಗೊನೆ ಕೊಯ್ಯುವಾಗ ವಿದ್ಯುತ್ ತಗುಲಿ ಕಾರ್ಮಿಕ ಸಾವು

ಶಿವಮೊಗ್ಗ ಜಿಲ್ಲೆ (shivamogga) ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಲಕ್ಷ್ಮಿಪುರ ಗ್ರಾಮದ ಬಳಿ ಭಾನುವಾರ ಅಡಿಕೆ ಗೊನೆ ಕೊಯ್ಯುವಾಗ ವಿದ್ಯುತ್ ತಗುಲಿ ಕೃಷಿ ಕಾರ್ಮಿಕ ಸತೀಶ್ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದೋರಗಲ್ಲು ಗ್ರಾಮದವರಾದ ಸತೀಶ್, ರೈತ ಸುಂದರೇಶ್ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಡಿಕೆ ಗೊನೆ ಕೊಯ್ಯಲು ಬಳಸಿದ ದೋಟಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

ತೀರ್ಥಹಳ್ಳಿ: ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ, ಜಿಂಕೆ ಸಾವು

Thiruthandi deal death for accident Shimoga news

ತೀರ್ಥಹಳ್ಳಿ ತಾಲೂಕಿನ 23ನೇ ಮೈಲಿಗಲ್ಲಿನ ಬಳಿ ಇಂದು ಬೆಳಿಗ್ಗೆ ಸುಮಾರು 7:30ರ ಸುಮಾರಿಗೆ ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Bhadravathi: ಭದ್ರಾವತಿಯ ವ್ಯಕ್ತಿಯೊಬ್ಬರಿಗೆ 3. 96 ಲಕ್ಷ ವಂಚನೆ

Shivamogga news Bhadravathi police station
ಭದ್ರಾವತಿ ಪೊಲೀಸ್ ಠಾಣೆ

ಭದ್ರಾವತಿಯ ವ್ಯಕ್ತಿಯೊಬ್ಬರು, ಹಣ ಡಬಲ್ ಆಗಲಿದೆ ಎಂಬ ಟೆಲಿಗ್ರಾಂ ಮೆಸೇಜ್ ನಂಬಿ 3.96 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಜೈದೀಪ್ ಭಾರತಿ ಎಂಬ ಹೆಸರಿನಲ್ಲಿ ಬಂದಿದ್ದ ಈ ಮೆಸೇಜ್‌ಗೆ ಮಗ ಮತ್ತು ಅಳಿಯನ ಜೊತೆ ಮಾತನಾಡುತ್ತಿದ್ದಾಗ ಹಣ ವರ್ಗಾಯಿಸಿದ್ದರು. ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Abinaya sagar drama festival 2025
ಅಭಿನಯ ಸಾಗರ , ನಾಟಕೋತ್ಸವ-2025

Shivamogga: ಮತ್ತೆ ಮಳೆಯಾಗುವ ಸಾಧ್ಯತೆ ಇದೆ

ರಾಜ್ಯಾದ್ಯಂತ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಲ್ಲಿ ಚದುರಿದಂತೆ ಮಳೆ(rain) ಸುರಿಯಬಹುದು ಎಂದು ನಿರೀಕ್ಷಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ವಿವಿಧೆಡೆ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಶಿವಮೊಗ್ಗದಲ್ಲಿ ಇವತ್ತು ಮೋಡ ಕವಿದ ವಾತಾವರಣ ಇರಲಿದೆ. ಇದರ ಮಧ್ಯೆ ಬಿಸಿಲಿನ ಅಬ್ಬರವು ಇರುವ ಕುರಿತು ಅಂದಾಜಿಸಲಾಗಿದೆ.

Shivamogga: ಶಿವಮೊಗ್ಗ ದ ಐವರನ್ನ ಬಂಧಿಸಿದ ನ್ಯಾಮತಿ ಪೊಲೀಸರು

ಗಾಂಜಾ ಮಾರಾಟ ಸಂಬಂಧ ಶಿವಮೊಗ್ಗದ ಐವರನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. ನ್ಯಾಮತಿ ತಾಲ್ಲೂಕಿನ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಸಾಲಬಾಳು ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧರಿಸಿ ನ್ಯಾಮತಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಎನ್‌. ಎಸ್. ರವಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಐವರು ಆರೋಪಿಗಳು ಬಂಧಿತರಾಗಿದ್ದಾರೆ.

Gold rate| ಮತ್ತೆ ಏರಿಕೆ ಕಂಡ ಚಿನ್ನ ಇಂದು ಎಷ್ಟು ರೇಟ್?

ಒಂದೇ ದಿನದಲ್ಲಿ ₹2,000 ಏರಿಕೆಯಾದ ಬೆಳ್ಳಿ ದರ.ವಾರದ ಆರಂಭದ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಂಗಳೂರು ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ದರ ₹170 ರಷ್ಟು ಏರಿಕೆಯಾಗಿ ₹1,23,170 ಕ್ಕೆ ತಲುಪಿದೆ.

ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹150 ರಷ್ಟು ಏರಿಕೆಯಾಗಿ ₹1,12,900 ಕ್ಕೆ ತಲುಪಿದೆ. ಬೆಳ್ಳೆ ಬೆಲೆ ಪ್ರತಿ ಕೆಜಿಗೆ ₹2,000 ರಷ್ಟು ಏರಿಕೆಯಾಗಿ ₹1,54,000ಕ್ಕೆ ತಲುಪಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ದರ ಇರಲಿದೆ.

Bigboss | ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣ ಇಲ್ಲಿದೆ.

Mallamma Bigg Boss contestant Kannada news

ಬಿಗ್‌ಬಾಸ್‌ ಮನೆಯಿಂದ ಮಲ್ಲಮ್ಮ ಔಟ್.

ಬಿಗ್‌ಬಾಸ್ ಮನೆಯಿಂದ ಮಾತಿನ ಮಲ್ಲಿ ಮಲ್ಲಮ್ಮ ಔಟ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣದಿಂದ ಅವರು ಬಿಗ್‌ಬಾಸ್ ಮನೆ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಸ್ವತಃ ಬಿಗ್‌ಬಾಸ್, ಮಲ್ಲಮ್ಮನನ್ನು ವಿಶೇಷವಾಗಿ ಬೀಳ್ಕೊಟ್ಟರು. ನೀವು ಬಿಗ್‌ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ ಈ ಮನೆ ಸದಾ ನಿಮ್ಮದೇ ಬಿಗ್‌ಬಾಸ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಬಿಗ್‌ಬಾಸ್ ಹಾರೈಸಿದೆ.

₹2000 ನೋಟುಗಳ ಹಿಂಪಡೆಯುವಿಕೆ| RBI ಹೇಳಿದ್ದೇನು?

₹2000 ನೋಟುಗಳ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಇಲ್ಲಿಯವರೆಗೆ 98.37% ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಆರ್‌ಬಿಐ ಪ್ರಕಾರ, ಮೇ 19, 2023 ರಂದು ₹2000 ನೋಟುಗಳ ಹಿಂಪಡೆಯುವಿಕೆಯ ಘೋಷಣೆಯ ಮೊದಲು, ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು ಮತ್ತು ಈ ಅಂಕಿ ಅಂಶವು ಈಗ ₹5,817 ಕೋಟಿಗೆ ಇಳಿದಿದೆ ಎಂದು ತಿಳಿಸಿದೆ.

ರಾಜ್ಯವಾರು GST ಆದಾಯ ವರದಿ ಬಿಡುಗಡೆ: ಕರ್ನಾಟಕ ಪ್ರಥಮ

GST Karnataka

2025ರ ಅಕ್ಟೋಬರ್ ತಿಂಗಳ ರಾಜ್ಯವಾರು ಸರಕು ಮತ್ತು ಸೇವಾ ತೆರಿಗೆ ಆದಾಯ ವರದಿ ಬಿಡುಗಡೆ ಆಗಿದೆ. 2024ರ ಅಕ್ಟೋಬರ್‌ಗೆ ಹೋಲಿಸಿದರೆ 2025ರ ಅಕ್ಟೋಬ‌ರ್ ದೇಶಿಯ GST 1,45,052 ಕೋಟಿ ರೂ. ಸಂಗ್ರಹವಾಗಿದೆ, ಅಂದರೆ ಶೇ.2ರಷ್ಟು ಬೆಳವಣಿಗೆ ಹೊಂದಿದೆ. ಆ ಮೂಲಕ ಪ್ರಮುಖ ಆರ್ಥಿಕ ರಾಜ್ಯಗಳ ಬೆಳವಣಿಗೆ ದರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿ ಇದೆ. ಹಣಕಾಸು ಸಚಿವಾಲಯ ರಾಜ್ಯಗಳ GST ಸಂಗ್ರಹ & ಬೆಳವಣಿಗೆ ದರ ಮಾಹಿತಿ ಬಿಡುಗಡೆ ಮಾಡಿದೆ. ಆ ಪೈಕಿ ಅಕ್ಟೋಬ‌ರ್ ತಿಂಗಳ GST 1.95ಲಕ್ಷ ಕೋಟಿ ಸಂಗ್ರಹವಾಗಿದೆ.

Mandya |ನಾಲೆಗೆ ಬಿದ್ದ ಕಾರು ಚಾಲಕ ಪಾರು

Mandya news

ಮಂಡ್ಯ: ನಾಲೆಗೆ ಕಾರೊಂದು ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ (Mandya) ತಾಲೂಕಿನ ಬಿ.ಯರಹಳ್ಳಿ ಬಳಿಯ ವಿಸಿ ನಾಲೆಯಲ್ಲಿ (VC Canal) ನಡೆದಿದೆ.

ಬೆಳಗಿನ ಜಾವ 4:30ರ ಸುಮಾರಿಗೆ ಘಟನೆ ಸಂಭವಿಸಿದೆ. ಮಂಡ್ಯದ ಕಲ್ಲಹಳ್ಳಿ ನಿವಾಸಿ ಕೃಷ್ಣ ಎಂಬವರು ಕ್ರೇಟಾ ಕಾರು (Creta Car) ಚಲಾಯಿಸುತ್ತಿದ್ದರು. ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ. ಕಾರು ನಾಲೆಗೆ ಬೀಳುತ್ತಿದ್ದಂತೆ ಚಾಲಕ ಕೃಷ್ಣ ಕಾರಿನಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ