For the best experience, open
https://m.kannadavani.news
on your mobile browser.
Advertisement

Kalaburgi ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: 6 ಮಂದಿ ವಿರುದ್ಧ FIR

ಕಲಬುರಗಿ, ಜನವರಿ 12: ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ (National Flag) ಅಗೌರವ ತೋರಿದ್ದ ಆರು ಜನರ ವಿರುದ್ಧ ಕಲಬುರಗಿಯ (Kalaburagi) ನಗರದ ಚೌಕ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
02:44 PM Jan 12, 2025 IST | ಶುಭಸಾಗರ್
kalaburgi ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ  6 ಮಂದಿ ವಿರುದ್ಧ fir
Disrespect to the national flag at Sheikh Dargah in Kalaburagi FIR filed against 6 individuals
kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಕಲಬುರಗಿ, ಜನವರಿ 12: ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ (National Flag) ಅಗೌರವ ತೋರಿದ್ದ ಆರು ಜನರ ವಿರುದ್ಧ ಕಲಬುರಗಿಯ (Kalaburagi) ನಗರದ ಚೌಕ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Advertisement

ಘಟನೆ ಏನಾಗಿತ್ತು?

ಜನವರಿ 10 ರಂದು ಕಲಬುರ್ಗಿಯ ಶೇಖ್ ದರ್ಗಾದಲ್ಲಿ ಜುನೈದಿ ಎಂಬುವರ ಜನ್ಮದಿನ ಆಚರಣೆ ಮಾಡಲಾಗಿತ್ತು.

ಹುಟ್ಟು ಹಬ್ಬ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಧ್ವಜದ ಕೆಳಗಡೆ ರಾಷ್ಟ್ರಧ್ವಜವನ್ನು ಇರಿಸಿ ಆರೋಹಣ ಮಾಡಲಾಗಿತ್ತು.

ಇದನ್ನೂ ಓದಿ:-GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿ ಹೊಸ ಹೆಜ್ಜೆ ಇಟ್ಟ ನಿಮ್ಮ ಕನ್ನಡವಾಣಿ ಏನಿದು ವಿಶೇಷ ಇಲ್ಲಿದೆ ನೋಡಿ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಹ ವೈರಲ್ ಆಗಿತ್ತು. ದ್ವಜ ನಿಯಮದ ಪ್ರಕಾರ ರಾಷ್ಟ್ರಧ್ವಜವನ್ನು ಯಾವುದೇ ಧ್ವಜದ ಕೆಳಗೆ ಹಾರಿಸುವಂತಿಲ್ಲ. ಹೀಗಿದ್ದರೂ ದರ್ಗಾದಲ್ಲಿ ಆರೋಹಣ ಮಾಡಲಾಗಿದ್ದು ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ‌ ಕೇಳಿಬಂದಿತ್ತು.

ಇದನ್ನೂ ಓದಿ:-Karnataka:ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!ವಿಡಿಯೋ ನೋಡಿ.

ಈ ಘಟನೆ ಸಂಬಂಧ ಕಲಬುರ್ಗಿಯ ಚೌಕ್​ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮುಖಂಡ, ವಕೀಲ ಮೊಹಮ್ಮದ್ ಜುನೈದಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್​ ಅಫ್ಜಲುದ್ದೀನ್ ಜುನೈದಿ, ಮೊಹಮ್ಮದ್ ಕಿವಾಮೊದ್ದಿನ್ ಜುನೈದಿ, ತಾಹಿರ್ ಅಲ್ಲಾವುದ್ದಿನ್ ಜುನೈದಿ, ಫಕ್ರುದ್ದಿನ್ ಮಣಿಯಾಲ್, ರಿಜ್ವಾನ್ ಅಹ್ಮದ್ ಮತ್ತು ಮೌಲಾನ್ ಅಹ್ಮದ್​ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವ ಕಾಯ್ದೆ 1971 ಯು/ಎಸ್​ 2 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಈ ವಿಷಯ ಕಲಬುರಗಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ದಾಖಲಾಗುವ ಮೂಲಕ ಆರೋಪಿಗಳ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು ಜನರ ಖಂಡನ ವ್ತಕ್ತವಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ