Kalaburgi ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: 6 ಮಂದಿ ವಿರುದ್ಧ FIR
ಕಲಬುರಗಿ, ಜನವರಿ 12: ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ (National Flag) ಅಗೌರವ ತೋರಿದ್ದ ಆರು ಜನರ ವಿರುದ್ಧ ಕಲಬುರಗಿಯ (Kalaburagi) ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆ ಏನಾಗಿತ್ತು?
ಜನವರಿ 10 ರಂದು ಕಲಬುರ್ಗಿಯ ಶೇಖ್ ದರ್ಗಾದಲ್ಲಿ ಜುನೈದಿ ಎಂಬುವರ ಜನ್ಮದಿನ ಆಚರಣೆ ಮಾಡಲಾಗಿತ್ತು.
ಹುಟ್ಟು ಹಬ್ಬ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಧ್ವಜದ ಕೆಳಗಡೆ ರಾಷ್ಟ್ರಧ್ವಜವನ್ನು ಇರಿಸಿ ಆರೋಹಣ ಮಾಡಲಾಗಿತ್ತು.
ಇದನ್ನೂ ಓದಿ:-GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿ ಹೊಸ ಹೆಜ್ಜೆ ಇಟ್ಟ ನಿಮ್ಮ ಕನ್ನಡವಾಣಿ ಏನಿದು ವಿಶೇಷ ಇಲ್ಲಿದೆ ನೋಡಿ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಹ ವೈರಲ್ ಆಗಿತ್ತು. ದ್ವಜ ನಿಯಮದ ಪ್ರಕಾರ ರಾಷ್ಟ್ರಧ್ವಜವನ್ನು ಯಾವುದೇ ಧ್ವಜದ ಕೆಳಗೆ ಹಾರಿಸುವಂತಿಲ್ಲ. ಹೀಗಿದ್ದರೂ ದರ್ಗಾದಲ್ಲಿ ಆರೋಹಣ ಮಾಡಲಾಗಿದ್ದು ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ:-Karnataka:ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!ವಿಡಿಯೋ ನೋಡಿ.
ಈ ಘಟನೆ ಸಂಬಂಧ ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮುಖಂಡ, ವಕೀಲ ಮೊಹಮ್ಮದ್ ಜುನೈದಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ಅಫ್ಜಲುದ್ದೀನ್ ಜುನೈದಿ, ಮೊಹಮ್ಮದ್ ಕಿವಾಮೊದ್ದಿನ್ ಜುನೈದಿ, ತಾಹಿರ್ ಅಲ್ಲಾವುದ್ದಿನ್ ಜುನೈದಿ, ಫಕ್ರುದ್ದಿನ್ ಮಣಿಯಾಲ್, ರಿಜ್ವಾನ್ ಅಹ್ಮದ್ ಮತ್ತು ಮೌಲಾನ್ ಅಹ್ಮದ್ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವ ಕಾಯ್ದೆ 1971 ಯು/ಎಸ್ 2 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ವಿಷಯ ಕಲಬುರಗಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ದಾಖಲಾಗುವ ಮೂಲಕ ಆರೋಪಿಗಳ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು ಜನರ ಖಂಡನ ವ್ತಕ್ತವಾಗಿದೆ.