Breaking News : ಶಿರಸಿಯ ಮೋಸ್ಟ್ ವಾಂಟೆಟ್ ಉಗ್ರಗಾಮಿ ಬಂಧನ!
Breaking News : ಶಿರಸಿಯ ಮೋಸ್ಟ್ ವಾಂಟೆಟ್ ಉಗ್ರಗಾಮಿ ಬಂಧನ!
ಕಾರವಾರ:- ಕೆಜಿ ಹಳ್ಳಿ- ಡಿಜೆ ಹಳ್ಳಿ ಪ್ರಕರಣ ಹಾಗೂ ಉಗ್ರಚಟುವಟಿಕೆ ( terrorist activities )ಆರೋಪ ಹೊತ್ತಿರುವ ಮೋಸ್ಟ್ ವಾಂಟೆಡ್ ಆಗಿದ್ದ ಶಿರಸಿಯ ಟಿಪ್ಪು ನಗರದ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ನನ್ನು ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಎಂ ನಾರಾಯಣ್ ನೇತ್ರತ್ವದ ಸ್ಪೆಷಲ್ ಆಪರೇಷನ್ ಟೀಮ್ ಬಿಜಾಪುರದ ಸಿಂಧಗಿಯಲ್ಲಿ ಬಂಧನಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ (Sirsi)ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಪಿಎಫ್‌ಐ ಕಾರ್ಯಕರ್ತನಾಗಿದ್ದಲ್ಲದೇ ಉಗ್ರರಿಂದ ತರಬೇತಿ ಪಡೆದಿದ್ದನು.
ಇದನ್ನೂ ಓದಿ:-Uttara kannda :15 ಸಾವಿರ ಲಂಚ ಪಡೆದ PDO ಗೆ ನಾಲ್ಕು ವರ್ಷ ಜೈಲು ಶಿಕ್ಷೆ!
ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ NIAಯಿಂದ ಬಂಧಿತನಾಗಿದ್ದ ಸಾದಿಕ್‌ನನ್ನು ತಯಾರುಗೊಳಿಸಿದ್ದ ಮೌಸೀನ್ ಬೆಂಗಳೂರಿನ ಕೆಜೆ ಹಳ್ಳಿ-ಡಿಜೆಹಳ್ಳಿ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಇದಲ್ಲದೇ ಶಿರಸಿ ಠಾಣೆಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ಸಹ ದಾಖಲಾಗಿತ್ತು.
ಇದನ್ನೂ ಓದಿ:-Sirsi ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!
ಇನ್ನು ತಲೆ ಮರೆಸಿಕೊಂಡು ಹೈದರಾಬಾದ್‌ಗೆ ತೆರಳಿ ಬಿಜಾಪುರದ ಸಿಂಧಗಿಯಲ್ಲಿ ನೆಲೆಸಿದ್ದನು.ಈ ಕುರಿತು ಮಾಹಿತಿ ಪಡೆದ ಪೊಲೀಸರ ತಂಡ ಸಿಂಧಿಗಿಯಲ್ಲಿ ಈತನನ್ನು ಬಂಧನ ಮಾಡಿ ಹೆಡೆಮುರಿ ಕಟ್ಟಿದ್ದಾರೆ.
