Shirur|ಗಂಗಾವಳಿಯಲ್ಲಿ ಡ್ರಜ್ಜಿಂಗ್ ಕೈಗೊಳ್ಳಲು ಶಾಸಕ ಸತೀಶ್ ಸೈಲ್ ಪತ್ರ.
ಕಾರವಾರ: ಶಿರೂರು ಗಂಗಾವಳಿ ನದಿಯಲ್ಲಿ ಗುಡ್ಡಕುಸಿತದಿಂದ ಸೃಜನೆಯಾಗಿರುವ ಮಣ್ಣಿನ ನಡುಗಡ್ಡೆಯನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಶಾಸಕ ಸೈಲ್ ಅವರು ಅಭಿಷೇನಿಯ ಓಸಿಯನ್ ಸರ್ವಿಸ್ ಕಂಪೆನಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:-ಶಿರೂರು ಭೂ ಕುಸಿತ ಪ್ರಕರಣ| ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವೆಷ್ಟು? ವಿವರ ಇಲ್ಲಿದೆ .
16.07.2024 ರಲ್ಲಿ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ನಿರ್ಮಿತವಾದ ಮಣ್ಣಿನ ನಡುಗಡ್ಡೆಯನ್ನು ತೆರವು ಗೊಳಿಸಲು ಬಂದರು ನಿರ್ದೇಶಕರೊಂದಿಗೆ ಮತ್ತು ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆ ಸಭೆಯಲ್ಲಿ ಡ್ರೆಜ್ಜಿಂಗ್ ಕೈಗೊಳ್ಳಲು ದರ ನಿರ್ಣಯಿಸಿದ್ದು ಅದಕ್ಕೆ ತಾವು ಒಪ್ಪಿಕೊಂಡು ಕನಿಷ್ಠ ಹತ್ತು ದಿನದ ಕೆಲಸ ನೀಡಬೇಕೆಂಬ ಷರತ್ತನ್ನು ನೀವು ನೀಡಿದ್ದು, ಅದರಂತೆ ಒಪ್ಪಿ, ಐಆರ್‌ಬಿ ಕಂಪೆನಿಯವರು ದಿನಾಂಕ 28.08.2024ರಂದು ತಮ್ಮ ಖಾತೆಗೆ ರೂ.410 ಲಕ್ಷಗಳು ಜಮೆ ಮಾಡಲಾಗಿದೆ.
ಇದನ್ನೂ ಓದಿ:-NEWS IMPACT| ಜಗನ್ನಾಥ್ ಪುತ್ರಿಗೆ ತಾತ್ಕಾಲಿಕ ಉದ್ಯೋಗ!
ಹತ್ತು ದಿನದ ಕೆಲಸ ನೀಡಿದರೆ ಮಾತ್ರ
ನಮ್ಮ ಯಂತ್ರೋಪಕರಣಗಳನ್ನು ತಂದು ಕೆಲಸ ಮಾಡಲು ಸಾಧ್ಯ ಎಂಬ ಕಾರಣ ನೀಡಿದ್ದರಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪ್ರಕೃತಿ ವಿಕೋಪ ಪರಿಹಾರಕ್ಕೆ ನನ್ನ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ.25.0 ಲಕ್ಷ್ಯಗಳನ್ನು ನೀಡಲು ಒಪ್ಪಿಗೆ ಸೂಚಿಸಿದ್ದು ಅದರಂತೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ರೂ.10.0 ಲಕ್ಷಗಳನ್ನು ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ರೂ.10.0 ಲಕ್ಷಗಳನ್ನು ತಮ್ಮ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಲು ಒಪ್ಪಿಗೆ ನೀಡಿದ್ದರು.
ಅಲ್ಲದೇ ಹೊನ್ನಾವರ ಖಾಸಗಿ ಬಂದರು ಸಂಸ್ಥೆಯವರು ನನ್ನ ಮನವಿಗೆ ಸ್ಪಂದಿಸಿ ರೂ.10.0 ಲಕ್ಷಗಳನ್ನು ನೀಡಲು ಮುಂದೆ ಬಂದಿದ್ದು, ಅದರಲ್ಲಿ ರೂ.5.0 ಲಕ್ಷಗಳ ಮೊತ್ತವನ್ನು ಬಂದರು ಇಲಾಖೆಗೆ ಈಗಾಗಲೇ ಜಮಾ ಮಾಡಿರುತ್ತಾರೆ. ಆದಕಾರಣ. ಈ ರೂ.55.0 ಲಕ್ಷಗಳು ಹಾಗೂ ಈಗಾಗಲೇ ತಮ್ಮ ಖಾತೆಗೆ ಜಮಾ ಆದ ಮೊತ್ತದಿಂದ ಗಂಗಾವಳಿ ನದಿಯಲ್ಲಿ ಶೇಖರಣೆಯಾದ ಸಂಪೂರ್ಣ ಮಣ್ಣನ್ನು ತೆರವುಗೊಳಿಸಿ ಶವಶೋಧ ನಡೆಸಲು ಮುಂದಾಗಬೇಕೆಂದು ಕೇಳಿಕೊಂಡಿದ್ದೆ.
ಇದನ್ನೂ ಓದಿ:-Shirur|ಜಗನ್ನಾಥ್ ಪುತ್ರಿಗೆ ಕೈಗಾದಲ್ಲಿ ಉದ್ಯೋಗ ಕೊಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕೆ
ಈ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್, ಜಿಲ್ಲಾಡಳಿತ ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ್ದು ಅವರೆಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿರುತ್ತಾರೆ. ಆದ್ದರಿಂದ, ತಾವು. ತಮ್ಮ ಡೆಜ್ಜಿಗ್ ಯಂತ್ರೋಪಕರಣ ಹಾಗೂ ಕೆಲಸಗಾರರನ್ನು, ಹತ್ತು ದಿವಸ ನದಿಯಲ್ಲಿ ಮಣ್ಣು ತೆರವುಗೊಳಿಸುವ ಉದ್ದೇಶಕ್ಕೆ ಶಿರೂರಿಗೆ ಕರೆತಂದು ಕೆಲಸ ಪ್ರಾರಂಭಿಸಬೇಕೆಂದು ಕಾರವಾರ ಶಾಸಕ ಸತೀಶ್ ಸೈಲ್ ಅವರು ಮನವಿ ಮಾಡಿದ್ದಾರೆ.
ಶಿರೂರು ಕಾರ್ಯಾಚರಣೆಗೆ ಮಳೆ ಅಡ್ಡಿ.
ಕಳೆದ 15 ದಿನಗಳಿಂದ ನಿರಂತರ ಮಳೆ ಬರುತಿದ್ದು ಕಾರ್ಯಾಚರಣೆಗೆ ಡ್ರಜ್ಜಿಂಗ್ ಮಿಷನ್ ತರಲು ತಿಡಕಾಗಿದೆ.
ಗಂಗಾವಳಿ ನೀರಿನ ಮಟ್ಟ ಸಹ ಹೆಚ್ಚಿದ್ದು ಇದರಿಂದ ಶೀಘ ಕಾರ್ಯಾಚರಣೆ ಮಾಡಲು ಅನಾನುಕೂಲವಾಗಿದೆ. ಹೀಗಾಗಿ ಇದೇ ವಾರದಲ್ಲಿ ಪ್ರಾರಂಭವಾಗಬೇಕಿದ್ದ ಕಾರ್ಯಾಚರಣೆ ಪ್ರಾರಂಭವಾಗಿಲ್ಲ.