ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta: ದೇವಿಮನೆ ಘಟ್ಟಭಾಗದಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ನಲ್ಲಿನ ಬೆಣ್ಣೆಹೊಳೆ ಭಾಗದಲ್ಲಿ ಮಳೆಯಿಂದ ಕೊಚ್ಚಿಹೋಗಿದ್ದ ತಾತ್ಕಾಲಿಕ ಸೇತುವೆಯಿಂದಾಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
10:42 PM Jun 01, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ನಲ್ಲಿನ ಬೆಣ್ಣೆಹೊಳೆ ಭಾಗದಲ್ಲಿ ಮಳೆಯಿಂದ ಕೊಚ್ಚಿಹೋಗಿದ್ದ ತಾತ್ಕಾಲಿಕ ಸೇತುವೆಯಿಂದಾಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

Kumta: ದೇವಿಮನೆ ಘಟ್ಟಭಾಗದಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ .ಮಕ್ಕಳ ಶಾಲಾ ಪುಸ್ತಕಗಳು ಅತೀ ಕಡಿಮೆ ದರದಲ್ಲಿ ಲಭ್ಯ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಶಿರಸಿ (kumta-sirsi) ರಾಷ್ಟ್ರೀಯ ಹೆದ್ದಾರಿ 766E ನಲ್ಲಿನ ಬೆಣ್ಣೆಹೊಳೆ ಭಾಗದಲ್ಲಿ

ಮಳೆಯಿಂದ ಕೊಚ್ಚಿಹೋಗಿದ್ದ ತಾತ್ಕಾಲಿಕ ಸೇತುವೆಯಿಂದಾಗಿ (Bridge) ಸಂಚಾರ ಸಂಪೂರ್ಣ ಬಂದ್ ಆಗಿತ್ತು.ಆದ್ರೆ ಇದೀಗ ಹೆದ್ದಾರಿಯಲ್ಲಿ  ಸ್ಥಗಿತಗೊಂಡ ಸಂಚಾರ ಪುನರ್ ಆರಂಭವಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಳೆದ ವಾರದಿಂದ ಮಳೆಯ ಅಬ್ಬರಕ್ಕೆ, ಬೆಣ್ಣೆ ಹೊಳೆ ತುಂಬಿ ಹರಿದಿದ್ದರಿಂದ ಕುಮಟಾ- ಶಿರಸಿ ಹೆದ್ದಾರಿ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದ ಬೆಣ್ಣೆ ಹೊಳೆಯ ಪರ್ಯಾಯ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ಕುಮಟಾ- ಶಿರಸಿ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಜನರಿಗೆ ತೊಂದರೆಯಾಗಿತ್ತು.ಈಗಾಗಲೇ ಈ ಹೆದ್ದಾರಿಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.

Advertisement

ಇದನ್ನೂ ಓದಿ:-Kumta landslide: ಮುರೂರಿನಲ್ಲಿ ರಸ್ತೆಗುರುಳಿದ ಬಂಡೆ

ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆಯ ಆರ್ಭಟಕ್ಕೆ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಬೆಣ್ಣೆ ಹೊಳೆಯ ಪರ್ಯಾಯ ರಸ್ತೆಯ ಎರಡು ಬದಿಯಲ್ಲಿ ಮಣ್ಣು ತುಂಬಿದ್ದು , ಸೇತುವೆಯಮೇಲೂ ಮಣ್ಣನ್ನು ಹಾಕಲಾಗಿದ್ದು, ಲಘು ವಾಹನಗಳು ಮಾತ್ರ ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ.ಇದರಿಂದ ಒಂದು ವಾರದಿಂದ ಸಂಚಾರ ಸ್ಥಗಿತಗೊಂಡು ತೊಂದರೆ ಅನುಭವಿಸುತ್ತಿದ್ದ ಜನರಿಗೆ ಅನುಕೂಲವಾಗಿದೆ.

ಇನ್ನು ಕೆಲವೇ ದಿನದಲ್ಲಿ ಅಪೂರ್ಣ ಗೊಂಡಿರುವ ಸೇತುವೆ ಸಹ ಪೂರ್ಣಗೊಳ್ಳಲಿದ್ದು ಈ ಸಂದರ್ಭದಲ್ಲಿ ದೇವಿಮನೆ ಘಟ್ಟ ಭಾಗದಲ್ಲಿ ಎಂದಿನಂತೆ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯ ಈ ಭಾಗದಲ್ಲಿ ಬಸ್ ಸಂಚಾರವೂ ಬಂದ್ ಆಗಿದ್ದು ಶಾಲೆ ಸಹ ಪ್ರಾರಂಭವಾಗಿದ್ದರಿಂದ ಕುಮಟಾ ಭಾಗಕ್ಕೆ ಹೋಗುತಿದ್ದ ವಿದ್ಯಾರ್ಥಿಗಳಿಗೆ ಇದೀಗ ಅನುಕೂಲ ಆಗಲಿದೆ.

(ಓದುಗರ ಗಮನಕ್ಕೆ:- ಜಿಲ್ಲಾಡಳಿತದಿಂದ ಈವರೆಗೂ ಲಘು ವಾಹನ ಬಿಡುವ ಬಗ್ಗೆ ಆದೇಶ ನೀಡಿಲ್ಲ.) 

Advertisement
Tags :
BridgeDeviMane Ghat roadHeavy rainKannadavaniKarnatakaKumtaNewsNH 766ERoadRoad sarfaringTraffic
Advertisement
Next Article
Advertisement