For the best experience, open
https://m.kannadavani.news
on your mobile browser.
Advertisement

Bhatkal: ಹಿಂದೂ ಕಾರ್ಯಕರ್ತನ ಹಲ್ಲೆ ಗಲಾಟೆ- ಆರೋಪ ತಳ್ಳಿಹಾಕಿದ ಎಸ್.ಪಿ ಎಂ ನಾರಾಯಣ್

ಕಾರವಾರ :- ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ತನಿಖೆ ನೆಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಎಂ. ನಾರಾಯಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಇಂದು ಸಹ ಭಟ್ಕಳದ(bhatkal) ಶಹರ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಎಸ್.ಪಿ ಯವರು ಕ್ಷಮೆ ಕೋರುವಂತೆ ಆಗ್ರಹಿಸಿದರು.
11:55 PM Apr 09, 2025 IST | ಶುಭಸಾಗರ್

Bhatkal: ಹಿಂದೂ ಕಾರ್ಯಕರ್ತನ ಹಲ್ಲೆ ಗಲಾಟೆ- ಆರೋಪ ತಳ್ಳಿಹಾಕಿದ ಎಸ್.ಪಿ ಎಂ ನಾರಾಯಣ್

Advertisement

ಕಾರವಾರ :- ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ತನಿಖೆ ನೆಪದಲ್ಲಿ ಉತ್ತರ ಕನ್ನಡ ಜಿಲ್ಲೆಯ  ಎಸ್ಪಿ ಎಂ. ನಾರಾಯಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಇಂದು ಸಹ ಭಟ್ಕಳದ(bhatkal) ಶಹರ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಎಸ್.ಪಿ ಯವರು ಕ್ಷಮೆ ಕೋರುವಂತೆ ಆಗ್ರಹಿಸಿದರು.

ನಂತರ ಬಿಜೆಪಿ ಪಕ್ಷದ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಮುಖಂಡರ  ಎಸ್.ಪಿ ರವರ ಸಮ್ಮುಖದಲ್ಲಿ ಮಾತೂಕತೆ ನಡೆಸಿ ಪ್ರತಿಭಟನಾ ಕಾರರು ತಮ್ಮ ಪ್ರತಿಭಟನೆ ಹಿಂಪಡೆದರು.

ಪ್ರಕೃತಿ ಮೆಡಿಕಲ್ ,ಕಾರವಾರ.

ನಿನ್ನೆ ದಿನ ರೌಡಿ ಶೀಟರ್ ಗಳ ಪೆರೆಡ್ ನನ್ನು ಶಿರಸಿಯಲ್ಲಿ ನಡೆಸಿದ್ದು ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಲೀಸ್ಟ್ ನಲ್ಲಿದ್ದ ಶ್ರೀನಿವಾಸ ನಾಯ್ಕ ರನ್ನು ಸಹ ಕರೆಸಲಾಗಿತ್ತು.

ಆದರೇ ಮಂಗಳವಾರ ರಾತ್ರಿ ವೇಳೆ ಭಟ್ಕಳಕ್ಕೆ ಆಗಮಿಸಿದ ಶ್ರೀನಿವಾಸ್ ನಾಯ್ಕ ಎಸ್.ಪಿ ತಮ್ಮಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೇ ವೇಳೆ ರಾತ್ರೋ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ನ್ನು ಬಂದ್ ಮಾಡಿ ಭಟ್ಕಳ(Bhatkal) ಶಹರ ಠಾಣೆಗೆ ಮುತ್ತಿಗೆ ಹಾಕಿ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರು (protest)ಪ್ರತಿಭಟನೆಗಿಳಿದಿದ್ದರು.

ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀನಿವಾಸ ನಾಯ್ಕ

 ಇನ್ನು ಈ ಪ್ರಕರಣವನ್ನು ಅಲ್ಲೆಗಳೆದಿರುವ ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ. ನಾರಾಯಣ್ ರವರು ಶ್ರೀನಿವಾಸ ನಾಯ್ಕ್ ಮೇಲೆ ತಾನು ಹಲ್ಲೆ ನಡೆಸಿಲ್ಲ ,ಉತ್ತರಕನ್ನಡ ಜಿಲ್ಲೆಯಲ್ಲಿ 996 ರೌಡಿಗಳಿದ್ದು, ಅವರ ಮೇಲೆ ನಿಗಾ ಇರಿಸಿದ್ದೇವೆ,ನಿನ್ನೆ ಶಿರಸಿಯಲ್ಲಿ ಕೆಲವು ರೌಡಿಗಳನ್ನು ಕರೆಯಿಸಿ ಅವರಿಗೆ ಕೇವಲ ವಾರ್ನಿಂಗ್ ನೀಡಲಾಗಿದೆ,ಆದರೆ, ಶ್ರೀನಿವಾಸ ಭಟ್ಕಳಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿ ಹಲ್ಲೆ ನಡೆಸಿರುವ ಆರೋಪ‌ ಮಾಡಿದ್ದಾನೆ.ಇದೆಲ್ಲಾ ಸುಳ್ಳು ನಾಟಕವಾಗಿದ್ದು, ಆತನ ಮೇಲೆ ಯಾವ ರೀತಿಯಲ್ಲೂ ಹಲ್ಲೆ ಮಾಡಿಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿ, ಐಜಿಪಿಗೆ ಮಾಹಿತಿ ನೀಡಲಾಗಿದೆ.ಈ ಪ್ರಕರಣವನ್ನು ಕಾನೂನು ರೀತಿಯಲ್ಲಿ ನಾವು ಎದುರಿಸುತ್ತೇವೆ.ಯಾರೆಲ್ಲಾ ಸಮಾಜಘಾತಕ ಕೃತ್ಯದಿಂದ ದೂರವಿದ್ದಾರೆ ಅವರನ್ನು ಗೂಂಡಾ ಲಿಸ್ಟ್‌ನಿಂದ ಹೊರತೆಗೆಯುತ್ತೇವೆ,ಅದೇ ಕೃತ್ಯಗಳನ್ನು ಮುಂದುವರಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದ ಎಸ್ಪಿ ಎಂ.ನಾರಾಯಣ್ ಹೇಳಿದರು.

 ಎಂ.ನಾರಾಯಣ್. ಎಸ್.ಪಿ ಉತ್ತರ ಕನ್ನಡ  ಹೇಳಿಕೆ ವಿಡಿಯೋ:-

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ