Rain:-ಹೊನ್ನಾವರ-ಕುಮಟಾದಲ್ಲಿ ಪ್ರವಾಹ ಸಂತ್ರಸ್ತ ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ
Rain:-ಹೊನ್ನಾವರ-ಕುಮಟಾದಲ್ಲಿ ಪ್ರವಾಹ ಸಂತ್ರಸ್ತ ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ.
ವಿಡಿಯೋ ನೋಡಿ:-
ಕಾರವಾರ :- ಉತ್ತರಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದ್ದು ಜಿಲ್ಲೆಯ ಕುಮಟಾ,ಹೊನ್ನಾವರ ಭಾಗದಲ್ಲಿ ಶರಾವತಿ,ಅಘನಾಶಿನಿ ನದಿ (river)ಪ್ರವಾಹದಿಂದ ಹಲವು ಮನೆಗಳು ಜಲಾವೃತವಾಗಿದೆ.ಹೊನ್ನಾವರದ ಭಾಸ್ಕೇರಿ, ಕವಲಕ್ಕಿ, ಕೆಳಗಿನೂರು, ಕುಮಟಾದ ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ, ಹಿರೇಕಟ್ಟು ಗ್ರಾಮಗಳು ಜಲಾವೃತವಾಗದೆ.
ಇದನ್ನೂ ಓದಿ:-Kumta: ಒಂದು ಅಡಿ ಉದ್ದ ,ಎರಡು ಇಂಚು ಅಗಲ ಚಾಕು ನುಂಗಿದ ನಾಗರಹಾವು! ವಿಡಿಯೋ ನೋಡಿ
ಕೆಳಗಿನೂರಿನ ನಾಗರಾಜ ಉದಯ ಮಡಿವಾಳ ಎಂಬವರ ಮನೆ, ತೋಟಕ್ಕೆ ನೀರು ನುಗ್ಗಿ ಆಹಾರ ವಸ್ತುಗಳು ನೀರು ಪಾಲಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ.
ಕುಮಟಾ ಊರಕೇರಿ ಗ್ರಾಮದ ಕೆಳಗಿನಕೇರಿ ಮಜಿರೆಯ 17 ಕುಟುಂಬ ಹಾಗೂ ಹಿರೇಕಟ್ಟು ಮಜಿರೆಯ ಜನರನ್ನು ದೋಣಿ ಮೂಲಕ ಸ್ಥಳಾಂತರ ಮಾಡಲಾಗಿದ್ದು ಕುಮಟಾದ ಕಡವ ಸರಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೊನ್ನಾವರದ ಭಾಸ್ಕೇರಿಯಲ್ಲೂ ಸುಮಾರು 5-6 ಕುಟುಂಬಗಳನ್ನು ಹೊಸಕುಳಿಯ
ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಡಳಿತದಿಂದ ಕುಮಟಾ ಹಾಗೂ ಹೊನ್ನಾವರ ಸೇರಿ ಮೂರು ಕಡೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದಲ್ಲದೇ ಶರಾವತಿ ನದಿ ನೀರಿನ ಪ್ರಮಾಣ ನಿರಂತರ ಹೆಚ್ಚಾಗುತಿದ್ದು ಯಾವುದೇ ಸಂದರ್ಭದಲ್ಲಿ ನೀರನ್ನುಹೊರಬಿಡುವ ಕಾರಣ ಕೆ.ಪಿ.ಸಿ.ಎಲ್ ನಿಂದ ನದಿ ಪಾತ್ರದ ಜನರಿಗೆ ಅಲರ್ಟ ನೀಡಿದ್ದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ.
ಶರಾವತಿ ನದಿ ಪಾತ್ರದಲ್ಲಿ ಅಲರ್ಟ
ಜಲಾಶಯದ ಗರಿಷ್ಟ ಮಟ್ಟ - 1819.00 ಅಡಿಗಳಿದ್ದು , ಸಂಜೆ ವೇಳೆಗೆ 1806.80ಅಧಿಕವಾಗಿದೆ.ಅಡಿಗಳು ತಲುಪಿದ್ದು ,ಒಳಹರಿವು 60,0000 ಕ್ಯೂಸೆಕ್ ಗಿಂತ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ನದಿ ಪಾತ್ರದ ಜನರಿಗೆ ಅಲರ್ಟ ನೀಡಿದ್ದು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗಿದೆ.