Uttara kannada: ಕುಮಟಾ -ಸಿದ್ದಾಪುರ ರಸ್ತೆ ಜಲಾವೃತ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ ಸುರಿಯುತಿದ್ದು ಮಳೆಯ ಅಬ್ಬರಕ್ಕೆ ಕುಮಟಾದ ಕುಮಟಾ -ಸಿದ್ದಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದೆ. .
02:28 PM May 20, 2025 IST | ಶುಭಸಾಗರ್
Uttara kannda: ಕುಮಟಾ -ಸಿದ್ದಾಪುರ ರಸ್ತೆ ಜಲಾವೃತ.
Advertisement
ಕಾರವಾರ :- ಉತ್ತರ ಕನ್ನಡ ( uttara Kannada)ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ ಸುರಿಯುತಿದ್ದು ಮಳೆಯ ಅಬ್ಬರಕ್ಕೆ ಕುಮಟಾ ತಾಲೂಕಿನ ಕುಮಟಾ -ಸಿದ್ದಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದೆ.


ಸದ್ಯ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವವರು ಪರದಾಡಬೇಕಿದ್ದು ಸಂಚಾರ ಅಸ್ತವ್ಯಸ್ಥವಾಗಿದೆ.
ಕುಮಟಾದಲ್ಲಿ ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯ ಪಕ್ಕದ ಚಿರಂಡಿ ಬ್ಲಾಕ್ ಆಗಿದ್ದು ,ನೀರು ಸರಾಗವಾಗಿ ಹೋಗದೇ ರಸ್ತೆ ಮೇಲೆ ನೀರು ಹರಿಯುತ್ತಿದೆ.
ಈ ಭಾಗದ ವಾಲ್ಗಳ್ಳಿಯ ಬಳಿ ಮನೆ ಜಮೀನುಗಳಿಗೆ ನೀರು ನುಗ್ಗುವ ಆತಂಕ ತಂದೊಡ್ಡಿದೆ.ಇನ್ನು ಕುಮಟಾ -ಸಿದ್ದಾಪುರ ರಸ್ತೆ ನೀರು ತುಂಬಿ ಬಂದಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿಯೂ ಸಂಚಾರ ಅಸ್ತವ್ಯಸ್ತವಾಗಿದೆ.
Advertisement