For the best experience, open
https://m.kannadavani.news
on your mobile browser.
Advertisement

Sagar| ಗಣೇಶ ವಿಸರ್ಜನೆ ವೇಳೆ ಮನಸೆಳೆದ ಬೆಂಕಿಯಾಟ! ಹೇಗಿದೆ ವಿಡಿಯೋ ನೋಡಿ.

ಸಾಗರ :- ಸಾಗರ ನಗರದ (sagar) 8ನೇ ವಾರ್ಡ್ ನಲ್ಲಿನ ಶ್ರೀನಗರದಲ್ಲಿ 48ನೇ ವರ್ಷದ ಗಣೇಶ ವಿಸರ್ಜನೆ ಅದ್ದೂರಿಯಾಗಿ ನಡೆಯಿತು.
08:06 PM Sep 16, 2024 IST | ಶುಭಸಾಗರ್
sagar  ಗಣೇಶ ವಿಸರ್ಜನೆ ವೇಳೆ ಮನಸೆಳೆದ ಬೆಂಕಿಯಾಟ  ಹೇಗಿದೆ ವಿಡಿಯೋ ನೋಡಿ

ವರದಿ| ಸೂರಜ್ ನಾಯರ್.

Advertisement

ಸಾಗರ :- ಸಾಗರ ನಗರದ (sagar) 8ನೇ ವಾರ್ಡ್ ನಲ್ಲಿನ ಶ್ರೀನಗರದಲ್ಲಿ 48ನೇ ವರ್ಷದ ಗಣೇಶ ವಿಸರ್ಜನೆ ಅದ್ದೂರಿಯಾಗಿ ನಡೆಯಿತು.

ಅರೇ ವಿಶೇಷ ಏನು ಅಂತೀರಾ ಹೌದು ಹಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀನಗರ ಯುವಜನ ಸಂಘ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನವನ್ನು ಅದ್ದೂರಿಯಾಗಿ ಪದರದರ್ಶಿಸಲಾಯಿತು.

ಬೆಂಕಿಯಾಟದ ವಿಡಿಯೋ ನೋಡಿ:-

ಸಾಗರದ ಶ್ರೀನಗರದಿಂದ ವಿವಿಧ ಭಾಗದಲ್ಲಿ ಈ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.ನಗರದ ಹೃದಯ ಭಾಗವಾದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಸಾರ್ವಜನಿಕರು ಬೆಂಕಿಯಾಟವನ್ನು ಕಣ್ತುಂಬಿ ಕೊಂಡರು.

ಬೆಂಕಿಯಾಟದ ಇತಿಹಾಸ ಏನು?

ಸಾಗರದ ಇತಿಹಾಸದಲ್ಲಿ ಬೆಂಕಿಯಾಟ  ಪ್ರಾರಂಭವಾಗಿದ್ದು ಹೂವಿನ ಗೋಪಾಲಣ್ಣ ಅವರ ಕಾಲದಲ್ಲಿ. ಇದು ಮೂಲತಃ ಮಂಗಳೂರಿನಲ್ಲಿ ಪ್ರಾರಂಭವಾಗಿರುವಂತದ್ದು , ಪ್ರಥಮವಾಗಿ ಸಾಗರದ ಹಿಂದೂ ಮಹಾಸಭಾ ಗಣಪತಿಯಲ್ಲಿ ಪ್ರದರ್ಶನಗೊಂಡಿತು .

ನಂತರ ಶ್ರೀನಗರ ಯುವಜನ ಸಂಘ ಇದನ್ನು ಉಳಿಸಿಕೊಂಡು ಬಂದರು. ಆಧುನಿಕ ಫಿಟ್ನೆಸ್ ಸೆಂಟರ್‍ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ವ್ಯಾಯಾಮಗಳಿಗೆ, ದೇಹದಾಢ್ರ್ಯ ಪ್ರದರ್ಶನದ ಜೊತೆಗೆ ವ್ಯಾಯಾಮ ಶಾಲೆಗಳು ಆಕರ್ಷಕ ಹಾಗು ಸಾಹಸಮಯ ಪ್ರದರ್ಶನಕ್ಕೂ ಹೆಸರುವಾಸಿಯಾಗಿವೆ.

ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸಾಹಸಮಯ ಪ್ರದರ್ಶನಗಳನ್ನು ತಾಲೀಮು ಪ್ರದರ್ಶನಕಾರರು ನೀಡುತ್ತಾರೆ. ಆದರೂ ತಾಲೀಮು ಪ್ರದರ್ಶನವನ್ನು ದೇಹದಲ್ಲಿ ಶಕ್ತಿ ಇರುವ ತನಕ ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆ ಇದೆ ಎನ್ನುತ್ತಾರೆ ಸಾಗರದ ಎಂ ಜಿ ಚಂದ್ರಕಾಂತ್ ಈಗಲೂ ಆಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದಾರೆ.

ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸೋದು. ಈ ಬಣ್ಣೋಟ್ಟಿಗಳ ತುದಿಗೆ ಸೀಮೆ ಎಣ್ಣೆಯಿಂದ ಅದ್ದಿದ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿ, ಮೈ ಕೈಗಳಿಗೆ ಕೊಂಚವೂ ಕೂಡಾ ಬೆಂಕಿಯ ಕೆನ್ನಾಲಿಗೆ ತಾಕದಂತೆ ಬೀಸುವ ಸಾಹಸ ತಾಲೀಮಿನಲ್ಲಿ ಎಲ್ಲರ ಮನಸೆಳೆಯುವ ಒಂದು ಪ್ರಕಾರದ ಪ್ರದರ್ಶನವಾಗಿದೆ.

ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವ ನಡುವೆ ತಾಲೀಮು ತಂಡಗಳೂ ಇಂದು ಬೆರಳೆಣಿಕೆಯ ಸಂಖ್ಯೆಗೆ ಬಂದಿದೆ.

‌ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯತೆ ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ಶ್ರೀನಗರ ಯುವಜನ ಸಂಘದ ಉಪಾಧ್ಯಕ್ಷರಾದ ದಯಾನಂದ್ ನಾಯಕ್ ಹೇಳುತ್ತಾರೆ.

Uttrakannda karwar Gilani festival offers

ಇದನ್ನೂ ಓದಿ:-Arecanut price|ಅಡಿಕೆದರ 10 september 2024

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ