For the best experience, open
https://m.kannadavani.news
on your mobile browser.
Advertisement

Sirsi  ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!

ಕಾರವಾರ :-ಸರ್ಕಾರದಿಂದ ನೀಡುವ ರೇಷನ್ ಅಕ್ಕಿಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ನೋಡಿರಬಹುದು.ಆದ್ರೆ ಕೊಡುವ ಅಕ್ಕಿಯಲ್ಲಿ ಕಲ್ಲು ,ಮಣ್ಣು, ಹೊಟ್ಟಿನ ಬೂದಿಗಳನ್ನು ಸೇರಿಸಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.
11:06 PM Apr 01, 2025 IST | ಶುಭಸಾಗರ್

Sirsi  ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!

Advertisement

ಕಾರವಾರ  :-ಸರ್ಕಾರದಿಂದ ನೀಡುವ ರೇಷನ್ ಅಕ್ಕಿಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ನೋಡಿರಬಹುದು.ಆದ್ರೆ ಕೊಡುವ ಅಕ್ಕಿಯಲ್ಲಿ ಕಲ್ಲು ,ಮಣ್ಣು, ಹೊಟ್ಟಿನ ಬೂದಿಗಳನ್ನು ಸೇರಿಸಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಗಣೇಶ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.

ಇದನ್ನೂ ಓದಿ:-Sirsi :ನೇಹಾ ಹೀರೇಮಠ್ ಹತ್ಯೆ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ.

ಪದ್ಮ ಚಂದ್ರ ಮೊಗೇರ್  ಎಂಬುವವರು ತನ್ನ ಕುಟುಂಬದ ಪಾಲಿನ 60 ಕೆಜಿ ರೇಷನ್ ಅಕ್ಕಿಯನ್ನು ತರಲು ಗಣೇಶ ನಗರದ ನ್ಯಾಯಬೆಲೆ ಅಂಗಡಿಗೆ ಹೋಗಿದ್ದು ಹತ್ತು ಕೆಜಿ ಉತ್ತಮವಾಗಿರುವ ಅಕ್ಕಿಯನ್ನು ಪ್ರತ್ತೇಕವಾಗಿ ನೀಡಿ ,ಉಳಿದ 50 ಕೆಜಿ ಅಕ್ಕಿಯನ್ನು ಚೀಲದಲ್ಲಿ ನೀಡಿದ್ದಾರೆ ನ್ಯಾಯಬೆಲೆ ಅಂಗಡಿಯವನು.

ಪ್ರಕೃತಿ ಮೆಡಿಕಲ್ ,ಕಾರವಾರ.

ಹತ್ತುಕೆಜಿ ಅಕ್ಕಿ ಚನ್ನಾಗಿದ್ದರಿಂದ ಉಳಿದದ್ದು ಚನ್ನಾಗಿದೆ ಎಂದು ಮನೆಗೆ ತಂದಿದ್ದ ಪದ್ಮಾ ರವರು ಇಂದು  ಚೀಲವನ್ನು ಬಿಚ್ಚಿ  ನೋಡಿದಾಗ ಬೆಚ್ಚಿ ಬಿದ್ದಿದ್ದು ,ಅಕ್ಕಿಚೀಲದಲ್ಲಿ ಕಲ್ಲು,ಹೊಟ್ಟಿನ ಬೂದಿ,ಮಣ್ಣು ತುಂಬಿದ್ದು ತಿನ್ನಲು ಯೋಗ್ಯವಾಗಿರದ ಸ್ಥಿತಿಯಲ್ಲಿದೆ.

ವಿಡಿಯೋ ನೋಡಿ:-

ಇನ್ನು ನ್ಯಾಯಬೆಲೆ ಅಂಗಡಿಯಲ್ಲಿ ಇದನ್ನು ಮಿಶ್ರಣ ಮಾಡಿ ಅಕ್ಕಿ ಹೊಡೆದಿದ್ದಾರ ಅಥವಾ ಆಹಾರ,ನಾಗರೀಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಸರಬರಾಜಾದ ಅಕ್ಕಿಯಲ್ಲೇ ಈರೀತಿ ಮಿಶ್ರಣ ಬಂದಿದೆಯೇ ಎಂಬುದು ತಿಳಿದು ಬರಬೇಕಿದ್ದು ಈ ಕುರಿತು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿದ್ದು ಜನ ಈ ರೀತಿ ಮಿಶ್ರಣ ಮಾಡಿ ನೀಡಿದ ಅಕ್ಕಿ ಹಂಚಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ