Gokarna| ಎರಡು ದಿನದ ನಂತರ ಪತ್ತೆಯಾಯ್ತು ವಿದ್ಯಾರ್ಥಿ ಶವ
ಗೋಕರ್ಣ:-ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈಜಲು ತೆರಳಿ ಸಮುದ್ರಪಾಲಾಗಿದ್ದ ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ವಿದ್ಯಾರ್ಥಿ ಶವ ಇಲ್ಲಿನ ಮಿಡ್ಲ್ ಬೀಚ್ ನಲ್ಲಿ ಇಂದು ಪತ್ತೆಯಾಗಿದೆ.
10:36 AM Sep 13, 2024 IST | ಶುಭಸಾಗರ್
Gokarna| ಎರಡು ದಿನದ ನಂತರ ಪತ್ತೆಯಾಯ್ತು ವಿದ್ಯಾರ್ಥಿ ಶವ
Advertisement
ಗೋಕರ್ಣ:-ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈಜಲು ತೆರಳಿ ಸಮುದ್ರಪಾಲಾಗಿದ್ದ ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ವಿದ್ಯಾರ್ಥಿ ಶವ ಇಲ್ಲಿನ ಮಿಡ್ಲ್ ಬೀಚ್ ನಲ್ಲಿ ಇಂದು ಪತ್ತೆಯಾಗಿದೆ.
ಇದನ್ನೂ ಓದಿ:-Gokarna|ಮೋಜು ಮಸ್ತಿಗೆ ಬಂದವರು ನೀರುಪಾಲು
ಕೋಲಾರ ಮೂಲದ ಶ್ರೀನಿವಾಸ ಪುರದ ವಿನಯ್ ಎಸ್.ವಿ(22) ಎಂಬ ವಿದ್ಯಾರ್ಥಿ ಶವವಾಗಿದ್ದು ,ಮೊನ್ನೆದಿನ ಬೆಂಗಳೂರಿನಿಂದ 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸ ಬಂದಿದ್ದು ಬಾವಿಕೊಡ್ಲ ಕಡಲ ತೀರದಲ್ಲಿ ಈಜುವಾಗ ಸಮುದ್ರದ ಅಲೆಗೆ ಸಿಲುಕಿ ವಿನಯ್ ತೇಲಿಹೋಗಿದ್ದರೇ ಸ್ಥಳೀಯರು ಐದು ಜನ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದರು. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎರಡು ದಿನದ ನಂತರ ಶವ ದೊರೆತಿದೆ.
Advertisement