Ankola: ಮಂಗಳೂರಿಗೆ ತೆರಳುತಿದ್ದ ಬಸ್ ಹಳ್ಳದಲ್ಲಿ ಪಲ್ಟಿ-ಓರ್ವ ಸಾವು,ಐದು ಜನ ಗಂಭೀರ
Ankola: ಮಂಗಳೂರಿಗೆ ತೆರಳುತಿದ್ದ ಬಸ್ ಹಳ್ಳದಲ್ಲಿ ಪಲ್ಟಿ-ಓರ್ವ ಸಾವು,ಐದು ಜನ ಗಂಭೀರ
ಕಾರವಾರ :- ಬೆಂಗಳೂರಿನಿಂದ ಮಂಗಳೂರಿನ(mangalur) ಕಡೆ ತೆರಳುತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದು ಬಸ್ ನಲ್ಲಿ ಪ್ರಯಾಣಿಸುತಿದ್ದ ಐವರಿಗೆ ಗಂಭೀರ ಗಾಯವಾಗಿದ್ದು ಓರ್ವ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola)ರಾಷ್ಟ್ರೀಯ ಹೆದ್ದಾರಿ 63 ರ ಅಗಸೂರು ಬಳಿ ನಡೆದಿದೆ.
ಇದನ್ನೂ ಓದಿ:-Ankola: ಸಾರ್ವಜನಿಕ-ಖಾಸಗಿ ಸಹಭಾಗಿತ್ವ ದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ ಫೀಲ್ಡ್ ಬಂದರಿನ ಅಭಿವೃದ್ಧಿ.
ಬೆಂಗಳೂರಿನಿಂದ ಮಂಗಳೂರು ಕಡೆ 18 ಜನರನ್ನು ಕರೆದೊಯ್ಯುವ ವೇಳೆ ಅತೀ ವೇಗದಲ್ಲಿ ಬಂದು ಬಸ್ ಅಗಸೂರಿನ ಹೆದ್ದಾರಿಯ ಬ್ರಿಡ್ಜ್ ತಡೆಗೋಡೆಗೆ ಡಿಕ್ಕಿಯಾಗಿ ಹಳ್ಳದಲ್ಲಿ ಬಿದ್ದು ಪಲ್ಟಿಯಾಗಿದೆ. ಈವೇಳೆ ಐದು ಜನ ಗಂಭೀರ ಗಾಯಗೊಂಡರೇ ಓರ್ವ ಸಾವು ಕಂಡಿದ್ದು ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಐದು ಜನ ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಉಳಿದವರಿಗೆ ಅಂಕೋಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮೃತನ ಗುರುತು ಪತ್ತೆಯಾಗಬೇಕಿದ್ದು ,ಸ್ಥಳಕ್ಕೆ ಅಂಕೋಲ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಬಸ್ ನನ್ನು ಹಳ್ಳದಿಂದ ಮೇಲೆತ್ತಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.