Uttra kannda ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಕುರಿತು ಪ್ರಬಂಧ ಬರೆಯಿರಿ 10 ಸಾವಿರ ಗೆಲ್ಲಿ
ಅಂಕೋಲಾ : ಕರ್ನಾಟಕ ಇತಿಹಾಸ ಅಕಾದೆಮಿ (ರಿ.) ಬೆಂಗಳೂರು ಇವರ 'ಐತಿಹಾಸಿಕ ಪರಂಪರೆ ಉಳಿಸಿ' ಅಭಿಯಾನದ ಭಾಗವಾಗಿ ಪ್ರಾಚ್ಯಕಥಾ ವಾಹಿನಿಯ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಕುರಿತಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಯಾರೆಲ್ಲ ಭಾಗವಹಿಸಬಹುದು?
ಯಾವುದೇ ಪೂರ್ವ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ ಇರುವುದಿಲ್ಲ.
ಬಹುಮಾನಗಳ ವಿವರ :
ಸ್ಪರ್ಧೆಯ ಪ್ರಥಮ ಬಹುಮಾನ 10,000, ದ್ವಿತೀಯ ಬಹುಮಾನ 7,000, ತೃತೀಯ ಬಹುಮಾನ 5000, ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಜೊತೆಗೆ ಪ್ರತಿ ತಾಲೂಕಿನಿಂದ ಒಂದು ಉತ್ತಮ ಪ್ರಬಂಧವನ್ನು ಆಯ್ಕೆ ಮಾಡಿ ತಲಾ 2000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಸ್ಪರ್ಧೆಯ ನಿಯಮಗಳು :
1. ಪ್ರಬಂಧವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಬೇಕು. ನುಡಿ ಅಥವಾ ಯುನಿಕೋಡ ತಂತ್ರಾಂಶದಲ್ಲಿ ಟೈಪ್ ಮಾಡಿ ಸಲ್ಲಿಸುವುದು.
2. ಪ್ರಬಂಧದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸ್ಮಾರಕಗಳನ್ನು ಪರಿಚಯಿಸಬಹುದು. ಆದರೆ ಆಯ್ದುಕೊಳ್ಳುವ ಸ್ಮಾರಕವು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯೊಳಗೆ ಇರುವುದು ಕಡ್ಡಾಯವಾಗಿರುತ್ತದೆ.
3. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಹಳ್ಳಿಯಲ್ಲಿರುವ ವೀರಗಲ್ಲು, ಶಾಸನ, ಮಾಸ್ತಿಕಲ್ಲು, ಜಟಕ, ನಿಷದಿ ಕಲ್ಲು, ಬಸದಿ, ದೇವಾಲಯ, ಗುಡಿ-ಚರ್ಚು-ಮಸೀದಿ, ಮೂರ್ತಿ ಶಿಲ್ಪಗಳು ಕೋಟೆ-
ಕೊತ್ತಲಗಳು ಹೀಗೆ ನೂರು ವರ್ಷಗಳಿಗಿಂತ ಹಳೆಯದಾದ ಯಾವುದೇ ಸ್ಮಾರಕದ ಕುರಿತು
ಪ್ರಬಂಧವನ್ನು ರಚಿಸಬಹುದು. ಪ್ರಬಂಧ ರಚನಾಕಾರರು ಈಗಾಗಲೇ ಖ್ಯಾತವಾಗಿರುವ ಸ್ಮಾರಕಗಳಿಗಿಂತ ಆಜ್ಞಾತವಾಗಿರುವ, ಅಪರಿಚಿತ ಸ್ಮಾರಕಗಳ ಕುರಿತಾಗಿ ಬರೆಯಲು ಹೆಚ್ಚಿನ ಆದ್ಯತೆ ನೀಡಬೇಕು. ಮೌಲ್ಯಮಾಪನದ ಸಂದರ್ಭದಲ್ಲಿ ವಿಶೇಷವಾಗಿ ಈ ಅಂಶವನ್ನು ಗಮನಿಸಲಾಗುವುದು.
4. ಪ್ರಬಂಧದಲ್ಲಿ ಸ್ಮಾರಕದ ಪ್ರಾಚೀನತೆ, ಅದರ ಇತಿಹಾಸ, ಅದರ ಕುರಿತಾಗಿರುವ ಪವಾಡ ಸದೃಶ್ಯ ಕಥೆಗಳು, ಸ್ಥಳೀಯವಾಗಿ ಸ್ಮಾರಕಕ್ಕಿರುವ ಮಹತ್ವ ಇತ್ಯಾದಿ ಅಂಶಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿವರವಾಗಿ ದಾಖಲಿಸಲು ಪ್ರಯತ್ನಿಸುವುದು. ಜೊತೆಗೆ ಸ್ಮಾರಕ ಇರುವ ಹಳ್ಳಿ, ಗ್ರಾಮ ಪಂಚಾಯಿತಿ ತಾಲೂಕು ಇತ್ಯಾದಿ ಅದರ ಸ್ಥಳ ವಿವರ, ಸಾಧ್ಯವಾದರೆ ಸ್ಮಾರಕ ಇರುವ ಅಕ್ಷಾಂಶ-ರೇಖಾಂಶಗಳ ಮಾಹಿತಿ ದಾಖಲಿಸಲು ಪ್ರಯತ್ನಿಸಬೇಕು. ತಾಲೂಕು ಕೇಂದ್ರದಿಂದ ಸ್ಮಾರಕಕ್ಕೆ ಸಾಗುವ ದಾರಿಯ ವಿವರಗಳನ್ನು ದಾಖಲಿಸಬೇಕು.
5. ಪ್ರಬಂಧ ರಚಿಸಲು ತಮ್ಮ ಶಿಕ್ಷಕರ, ಉಪನ್ಯಾಸಕರ ಅಥವಾ ಯಾವುದೇ ವ್ಯಕ್ತಿಗಳ ಸಹಾಯ ಸಹಕಾರವನ್ನು ತೆಗೆದುಕೊಳ್ಳಬಹುದು. ಪುಸ್ತಕಗಳ ನೆರವು ಪಡೆಯಬಹುದು. ಪ್ರಬಂಧ ರಚನೆಗೆ ಯಾರದಾದರೂ ಸಹಾಯ, ಮಾರ್ಗದರ್ಶನ ಪಡೆದುಕೊಂಡಿದ್ದಲ್ಲಿ ಅವರ ಹೆಸರನ್ನು, ಪರಾಮರ್ಶನ ಮಾಡಿದ ಪುಸ್ತಕಗಳ-ಪತ್ರಿಕೆಗಳ ಕುರಿತಾಗಿ ಮಾಹಿತಿಯನ್ನು ಪ್ರಬಂಧದ ಕೊನೆಯಲ್ಲಿ ದಾಖಲಿಸಬೇಕು. ಈಗಾಗಲೇ ಸ್ಮಾರಕದ ಕುರಿತಾಗಿ ಯಾವುದಾದರೂ ಪತ್ರಿಕೆಯಲ್ಲಿ ಅಥವಾ ಪುಸ್ತಕದಲ್ಲಿ ಲೇಖನಗಳು ಪ್ರಕಟವಾಗಿದ್ದನ್ನು ತಾವು ಗಮನಿಸಿದ್ದಲ್ಲಿ ಅದರ ವಿವರಗಳನ್ನು ದಾಖಲಿಸಬೇಕು.
ಇದನ್ನೂ ಓದಿ'-ankola| ಈ ದೇವಸ್ಥಾನದಲ್ಲಿ ಗಿಡವೇ ಪ್ರಸಾದ!
6. ಪ್ರಬಂಧದ ಕೊನೆಯಲ್ಲಿ ತಮ್ಮ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆಯಬೇಕು.
7. ಸ್ಮಾರಕದ ಸುಂದರವಾದ ಒಂದೆರಡು ಫೋಟೋಗಳನ್ನು ಪ್ರಬಂಧದ ಜೊತೆಯಲ್ಲಿಡಬೇಕು.
8. ಸ್ಪರ್ಧೆಗೆ ಕಳುಹಿಸಿದ ಪ್ರಬಂಧಗಳನ್ನು ಹಿಂದುರುಗಿಸಲಾಗುವುದಿಲ್ಲ. ಬಹುಮಾನಿತ ಹಾಗೂ ಇತರ ಉತ್ತಮ ಎನ್ನಬಹುದಾದ ಪ್ರಬಂಧಗಳನ್ನು ಆಯ್ಕೆ ಮಾಡಿಕೊಂಡು ಆಯಾ ಪ್ರಬಂಧಕಾರರ ಹೆಸರಿನೊಂದಿಗೆ ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯೂ ಇದೆ.
9. ಇನ್ನುಳಿದ ಹಕ್ಕುಗಳನ್ನು ಆಯೋಜನಾ ಸಮಿತಿಯು ಕಾಯ್ದಿರಿಸಿದೆ.
ಇದನ್ನೂ ಓದಿ:-Uttra kannda| ಫಟಾಫಟ್ ಸುದ್ದಿ11september 2024
ಪ್ರಬಂಧ ಕಳುಹಿಸಬೇಕಾದ ವಿಳಾಸ:
ಸಿದ್ಧವಾದ ಪ್ರಬಂಧಗಳನ್ನು ಅಕ್ಟೋಬರ್ 15, 2024ರ ಒಳಗಾಗಿ ಶ್ಯಾಮಸುಂದರ ಗೌಡ, ಇತಿಹಾಸ ಸಂಶೋಧಕರು, ಕಾರ್ಯಕಾರಿ ಮಂಡಳಿ ಸದಸ್ಯರು, ಕರ್ನಾಟಕ ಇತಿಹಾಸ ಅಕಾದೆಮಿ, ಕಾಮಾಕ್ಷಿ ಕಾಂಪ್ಲೆಕ್ಸ್, ಕಾರವಾರ ರಸ್ತೆ, ವಾಜಂತ್ರಿಕೇರಿ, ಅಂಕೋಲಾ-೫೮೧೩೧೪ (ಉತ್ತರ ಕನ್ನಡ ಜಿಲ್ಲೆ) ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ prachyakatha@gmail.com ಈ ವಿಳಾಸಕ್ಕೆ ಇ-ಮೇಲ್ ಮೂಲಕ ಕಳುಹಿಸತಕ್ಕದ್ದು.
ಹೆಚ್ಚಿನ ವಿವರಗಳಿಗಾಗಿ 7019024187 ಈ ನಂಬರಿಗೆ ಕರೆ ಮಾಡಬಹುದಾಗಿದೆ.