Yallapura| ಗ್ರಾಮಪಂಚಾಯ್ತಿ ಅಧ್ಯಕ್ಷೆ ಸ್ಕೂಟಿ ನಂಬರ್ ನಕಲಿ! ನೋಟೀಸ್ ಏನಿದು ಕಥೆ?
ಯಲ್ಲಾಪುರ :- ಅಪ್ಪ -ಅಮ್ಮ ಬಿಟ್ಟು ಎಲ್ಲವನ್ನೂ ನಕಲಿ ಮಾಡುವ ಕಾಲದಲ್ಲಿ ಇದೀಗ ನಕಲಿ ನಂಬರ್ ಪ್ಲೇಟ್ (number plate) ಗಳು ಸಹ ವಾಹನಗಳಿಗೆ ಅಳವಡಿಕೆಯಾಗುತ್ತಿದೆ.
ಹೌದು ಯಲ್ಲಾಪುರದ (yallapura) ಅನಗೋಡು ಗ್ರಾಮಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ರವರು ನೊಂದಣಿ ಸಂಖ್ಯೆ KA31w654 ಸ್ಕೂಟಿ ಹೊಂದಿದ್ದಾರೆ.
ಇದನ್ನೂ ಓದಿ:-Karwar|ಗಣೇಶನ ದುಡ್ಡಿಗಾಗಿ ಬಡಿದಾಡಿಕೊಂಡ ಸಹೋದರರು| ಸಾವಿನಲ್ಲಿ ಅಂತ್ಯ
ಇವರಿಗೆ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸ್ ನಿಂದ 1500ದಂಡದ ನೋಟಿಸ್ ಯಲ್ಲಾಪುರದ ಇವರ ಮನೆಗೆ ಬಂದಿದೆ.
ಈ ನೋಟಿಸ್ ನನ್ನು ನೋಡಿದ ಅವರು ಶಾಕ್ ಆಗಿದ್ದು ತಕ್ಷಣ ತಂತ್ರಜ್ಞಾನದ ಯಾಪ್ ಬಳಸಿ ನೋಡಿದಾಗ ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ಇವರ ಸ್ಕೂಟಿಯ ನಂಬರ್ ನನ್ನು ತನ್ನ ಬೈಕ್ ಗೆ ಬಳವಡಿಸಿದ್ದಲ್ಲದೇ ಮೂರು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ತಿಳಿದುಬಂದಿದೆ.
ತಕ್ಷಣ ಅದರ ಸಿಸಿ ಕ್ಯಾಮರಾ ದೃಶ್ಯದ ಚಿತ್ರಗಳನ್ನು ಸೇರಿಸಿ ಬೆಂಗಳೂರು ಪೊಲೀಸರಿಗೆ ಪತ್ರ ಬರೆದಿದ್ದು ಇದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿರವರಿಗೂ ದೂರು ನೀಡಿದ್ದು ನನ್ನದಲ್ಲದ ತಪ್ಪಿಗೆ ನಾನೇಕೆ ದಂಡ ಕಟ್ಟಬೇಕು ನಕಲಿ ನಂಬರ್ ಪ್ಲೇಟ್ ಬಳಸಿದವನನ್ನು ಹುಡುಕಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.