For the best experience, open
https://m.kannadavani.news
on your mobile browser.
Advertisement

ರಾಮನಗರ-ಅನಮೋಡ್ ಗಡಿಯಲ್ಲಿ ನಿಷೇಧ ವಿದ್ದರೂ ಭಾರಿ ವಾಹನ ಸಂಚಾರ| ಅಧಿಕಾರಿಗಳಿಗೆ ಹಫ್ತ!

ಜೊಯಿಡಾ: ರಾಮನಗರ-ಅನಮೋಡ ರಸ್ತೆಯಲ್ಲಿ ನಾಲ್ಕು ಚಕ್ರಕ್ಕಿಂತ ದೊಡ್ಡ ವಾಹನಗಳಿಗೆ ನಿಷೇಧ ಹೇರಿದ್ದರೂ ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆಯಲ್ಲಿ ಈ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳೂ
01:52 PM Sep 13, 2024 IST | ಶುಭಸಾಗರ್
ರಾಮನಗರ ಅನಮೋಡ್ ಗಡಿಯಲ್ಲಿ ನಿಷೇಧ ವಿದ್ದರೂ ಭಾರಿ ವಾಹನ ಸಂಚಾರ  ಅಧಿಕಾರಿಗಳಿಗೆ ಹಫ್ತ

ಜೊಯಿಡಾ: uttara kannda ಜಿಲ್ಲೆಯ ರಾಮನಗರ -ಅನಮೋಡ ರಸ್ತೆಯಲ್ಲಿ ನಾಲ್ಕು ಚಕ್ರಕ್ಕಿಂತ ದೊಡ್ಡ ವಾಹನಗಳಿಗೆ ನಿಷೇಧ ಹೇರಿದ್ದರೂ, ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆಯಲ್ಲಿ ಈ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳೂ ಸಂಚರಿಸಲು ಅವಕಾಶ ಮಾಡಿಕೊಡಲಾಗುತಿದ್ದು ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಲಾಗಿದೆ.

Advertisement

ಅಕ್ರಮ ಸಂಚಾರಕ್ಕೆ ಹಣ ವಸೂಲಿ ಆರೋಪ!

Ramnagara news

ಇನ್ನು ಈ ಭಾಗದಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ 500 ರಿಂದ 2000ಕ್ಕೂ ಹೆಚ್ಚು ಹಣ ಪಡೆದು ವಾಹನಗಳನ್ನು ಇಲ್ಲಿನ ನಿಯೋಜಿತ ಅಧಿಕಾರಿಗಳು ಬಿಡುತಿದ್ದು ತಮಗೆ ಪರಿಚಿತ ವ್ಯಕ್ತಿಗಳ ಖಾತೆಗೆ ಹಣ ವನ್ನು ಲಾರಿ ಚಾಲಕರಿಂದ ಹಾಕಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ಇನ್ನು ತರಕಾರಿ, ಹಾಲಿನ ವಾಹನಗಳನ್ನು ಬಿಡಲು ಅನುಮತಿ ಇದ್ದರೂ ಅವರಿಂದಲೂ ಪೊಲೀಸರು, ಆರ್.ಟಿ‌.ಓ,ಅಬಕಾರಿ ಸಿಬ್ಬಂದಿಗಳು 200 ರಿಂದ 500 ರೂ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದಿ , ಹಣ ನೀಡಿದ ದಾಖಲೆಗಳಿದ್ದರೂ ಇಲಾಖೆ ಹೆದರಿಕೆಗೆ ದೂರು ನೀಡಲು ವಾಹನ ಮಾಲೀಕರು ಹೆದರುತಿದ್ದಾರೆ. ಇದೇ ಬಂಡವಾಳ ಮಾಡಿಕೊಂಡು ಅಧಿಕಾರಿಗಳು ಸುಲಿಗೆಗೆ ಇಳಿದಿದ್ದಾರೆ.

Phone Pay ಯಲ್ಲಿ ಹಣ ವರ್ಗಾವಣೆ!

ಇನ್ನು ಅಧಿಕಾರಿಗಳು ವಸೂಲಿಗೆ phonepay ಬಳಕೆ ಮಾಡುತಿದ್ದು ತಮಗೆ ಪರಿಚಿತ ವ್ಯಕ್ತಿಗಳ ಫೋನ್ ನಂಬರ್ ಗೆ ಹಣ ಹಾಕಿಸಿಕೊಂಡು ನಂತರ ಅವರಿಂದ ನಗದು ಪಡೆಯುತಿದ್ದಾರೆ. ಹೀಗಾಗಿ ಕೈಗೆ ಸಿಲುಕದೇ ಜಾರಿಕೊಳ್ಳುವ ಮಾರ್ಗ ಹುಡುಕಿಕೊಂಡಿದ್ದಾರೆ.

ಇದನ್ನೂ ಓದಿ:-Uttrakannda|ಒಂದೇ ತಿಂಗಳಲ್ಲಿ 25 ಕ್ಲಬ್ ಬಂದ್ 93 ಜನರ ಮೇಲೆ ಪ್ರಕರಣದಾಖಲು

ಅಕ್ರಮ ಮರಳು ಸಾಗಾಟ!

ಇನ್ನು ಜೋಯಿಡಾ ಭಾಗದಿಂದ ಅಕ್ರಮ ಮರಳು ರಾಮನಗರದ ಮೂಲಕ ಮಧ್ಯರಾತ್ರಿ ಗೋವಾಕ್ಕೆ ಕಳುಹಿಸಲಾಗುತಿದ್ದು ಒಂದು ಲೋಡ್ ಗೆ 2000 ಹಣ ಪಡೆಯಲಾಗುತ್ತಿದೆ ಎಂಬುದು ಸ್ಥಳೀಯರು ಆರೋಪ ಮಾಡಿದ್ದು ಎಮ್ ಸ್ಯಾಂಡ್ ಜೊತೆ ಮೆರಳು ಸಹ ಅಕ್ರಮ ಸಾಗಾಟವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?

ಉತ್ತರ ಕನ್ನಡ ಜಿಲ್ಲಾಧಿಕಾರಿ ಜುಲೈ, 11ರಂದು ಹೊರಡಿಸಿದ ಆದೇಶದಲ್ಲಿ ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿ (NH4) ರಾಮನಗರ-ಅನಮೋಡ - ಮಾರ್ಗದಲ್ಲಿ ನಾಲ್ಕು ಚಕ್ರಗಳಿಗಿಂತ ದೊಡ್ಡದಾದ ವಾಹನಗಳ ಸಂಚಾರವನ್ನು ಸೆಪ್ಟೆಂಬರ್ 30ರವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ.

ಇದರ ನಂತರ ಭಾರಿ ವಾಹನಕ್ಕೆ ಅವಕಾಶ ಮಾಡಿಕೊಡುವ ಕುರಿತು ಪರಿಶೀಲನಾ ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು ,ಪೊಲೀಸ್ ಇಲಾಖೆ ಸದ್ಯ ಈ ರಸ್ತೆ ಭಾರಿ ವಾಹನಕ್ಕೆ ಸಂಚಾರಕ್ಕೆ ಯೋಗ್ಯವಲ್ಲ ,ರಸ್ತೆ ಅಪಾಯದ ಬಗ್ಗೆ ವರದಿ ನೀಡಿದ್ದು ನಿಷೇಧ ಮುಂದುವರೆಸಲು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೇ ಇದೀಗ ಬಾರಿ ವಾಹನಗಳಿಗೆ ನಿಷೇಧದ ನಡುವೆಯೂ ಗೋವಾ ಭಾಗಕ್ಕೆ ತೆರಳಲು ಹಾಗೂ ಗೋವಾ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲು ರಾತ್ರಿ ವೇಳೆ ಬಿಡುತಿದ್ದು ಜಣ..ಜಣ ಕಾಂಚಾಣದ ಸದ್ದು ಕೇಳಿಬರುತ್ತಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ