ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttra Kannda | ಫಟಾಫಟ್ ಸುದ್ದಿ 14 September 2024

Uttra kannda| ಜಿಲ್ಲೆಯ ಸಮಗ್ರ ಸುದ್ದಿಗಳು ಒಂದು ಲಿಂಕ್ ನಲ್ಲಿ ಓದಿ. ಶನಿವಾರ ಜಿಲ್ಲೆಯಲ್ಲಿನ ಪ್ರಮುಖ ವಿದ್ಯಮಾನಗಳು ಈ ಕೆಳಗಿನಂತಿವೆ.
10:43 PM Sep 14, 2024 IST | ಶುಭಸಾಗರ್

Uttra kannda| ಜಿಲ್ಲೆಯ ಸಮಗ್ರ ಸುದ್ದಿಗಳು ಒಂದು ಲಿಂಕ್ ನಲ್ಲಿ ಓದಿ. ಶನಿವಾರ ಜಿಲ್ಲೆಯಲ್ಲಿನ ಪ್ರಮುಖ ವಿದ್ಯಮಾನಗಳು ಈ ಕೆಳಗಿನಂತಿವೆ.

Joida| ಪೊಲೀಸರೊಂದಿಗೆ ವಾಗ್ವಾದ ಒಂದು ಗಂಟೆ ಟ್ರಾಫಿಕ್ ಜಾನ್ .

Advertisement

 

 

ಜೋಯಿಡಾ'- ತಾಲೂಕಿನ ರಾಮನಗರದ ಅನಮೋಡ್ ಚಕ್ ಪೋಸ್ಟ್ ನಲ್ಲಿ ಜಿಲ್ಲಾಧಿಕಾರಿ ಆದೇಶ ವಿದ್ದರೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು , ಕೆಲವು ಖಾಸಗಿ ಬಸ್ ಗಳನ್ನು ಮಾತ್ರ ಗೋವಾ ಕಡೆಯಿಂದ ಜೋಯಿಡಾ ಕಡೆಗೆ ಬಿಡುತಿದ್ದು ಇದನ್ನು ಪ್ರಶ್ನಿಸಿ ಬೆಂಗಳೂರಿನ ಪ್ರವಾಸಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.ಈ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಗೋವಾ- ಅನಮೋಡ್ ಹೆದ್ದಾರಿ ಸಂಚಾರದಲ್ಲಿ ಟ್ರೋಫೀಕ್ ಜಾಮ್ ಆಗಿತ್ತು.

Advertisement

Bhatkal| ಗಣೇಶ ಮೆರವಣಿಗೆ ವೇಳೆ ವ್ಯಕ್ತಿ ಸಾವು: ದೂರು ದಾಖಲು.

ಭಟ್ಕಳ:- ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ನಗರದ ಜನತಾ ಪತ್ತಿನ ಸಹಕಾರಿ ಸಂಘದ ನಿವೃತ್ತ ನೌಕರ, ಬೇಂದ್ರೆ ಮಾವಿನಕಟ್ಟಾ ನಿವಾಸಿ ಮಾರುತಿ ಚೌಡಯ್ಯ ದೇವಾಡಿಗ (62) ಎಂದು ಗುರುತಿಸಲಾಗಿದೆ. ಸಾರ್ವಜನಿಕ ಗಣಪತಿಗಳನ್ನು ವಿರ್ಸಜನೆ ಮೆರವಣಿಗೆ ವೇಳೆ ಗುಂಪಿನಲ್ಲಿ ಕುಸಿದು ಬಿದ್ದ ವ್ಯಕ್ತಿ ಸಾವಿಗೀಡಾಗಿದ್ದು, Shahara ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Siddapura| ಬೆಲೆಬಾಳುವ ವಸ್ತು ಬಿಟ್ಟು ಅಂಚೆ ಮೊಹರು, ಪೆಟ್ಟಿಗೆ ಕದ್ದ ಕಳ್ಳರು.

Siddapura :-ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ.

ಅಂಚೆ ಕಚೇರಿ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಅಲ್ಲಿನ ಎಲ್ಲಾ ದಾಖಲೆಗಳನ್ನು ತಡಕಾಡಿದ್ದಾರೆ. ಕಾಗದ ಪತ್ರಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದು, ಅಂಚೆ ಕಚೇರಿಯ ಒಳಗಿದ್ದ ಮುದ್ರೆ ಹಾಗೂ ಮೊಳೆ ಪೆಟ್ಟಿಗೆಯನ್ನು ಹೊತ್ತೊಯ್ದಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Dandeli| ಲೋಕ ಅದಾಲತ್ 163 ಪ್ರಕರಣ ಇತ್ಯಾರ್ಥ.

ದಾಂಡೇಲಿ: ನಗರದ ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 163 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹14.23ಲಕ್ಷ ದಂಡ ಸಂಗ್ರಹಿಸಲಾಯಿತು.

ನ್ಯಾಯಾಧೀಶೆ ರೋಹಿಣಿ ಡಿ. ಬಸಾಪೂರ ನೇತೃತ್ವದಲ್ಲಿ ನಡೆದ ಲೋಕ್ ಅದಾಲತ್‌ ನಲ್ಲಿ ವಿಚಾರಣೆಗಾಗಿ 427 ಪ್ರಕರಣಗಳನ್ನು ಕೈಎತ್ತಿಗೊಳ್ಳಲಾಯಿತು. ಈ ವಕೀಲರಾದ ವಿಶ್ವನಾಥ ವೈ. ಲಕ್ಕಶೆಟ್ಟಿ, ಎಂ.ಸಿ ಹೆಗಡೆ ಹಾಗೂ ನ್ಯಾಯಾಲಯ ಸಿಬ್ಬಂದಿ ಲೋಕ್ ಅದಾಲತ್ ಯಶಸ್ಸಿಗೆ ಸಹಕರಿಸಿದರು.

Haliyala| ಹಣ ಡಬಲ್ ಮಾಡುವುದಾಗಿ ಹೇಳಿ ಬೈಕ್ ಎಗರಿಸಿದ ಭೂಪ ಅಂದರ್.

 ಹಳಿಯಾಳ  : ಹಣ ಕೊಟ್ಟರೇ ಡಬಲ್ ಮಾಡಿ ಕೊಡುತ್ತೇನೆ ಎಂದಾಗ ಹಣವಿಲ್ಲ ಎಂದ ಯುವಕನ ಬೈಕ್ ಎಗರಿಸಿದ್ದ ಆಸಾಮಿಯನ್ನು ಹಳಿಯಾಳ ಪೋಲಿಸರು ಬಂಧಿಸಿದ್ದಾರೆ.

ಹಳಿಯಾಳ ಪಟ್ಟಣದ ಚವ್ವಾಣ ಪ್ಲಾಟ್ ನಿವಾಸಿ ಕ್ರಿಮಿನಲ್ ಹಿನ್ನೆಲೆಯ, ಅಂಬಿಕಾನಗರದಲ್ಲಿ ಗುಂಡಾ ಲಿಸ್ಟ್ ನಲ್ಲಿರುವ ವ್ಯಕ್ತಿ ರಾಕೇಶ ದಿನಕರ ವಾಲೇಕರ ಎಂಬಾತನೇ ಆಪಾದಿತ ಆರೋಪಿಯಾಗಿದ್ದಾನೆ.

ಆಪಾಧಿತ ರಾಕೇಶನನ್ನು ಹಳಿಯಾಳ ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಸೆಪ್ಟೆಂಬರ್ 25 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ‌‌.

Advertisement
Tags :
BhatkalDandelidistrictHaliyalaJoidaNewsUttra kannda
Advertisement
Next Article
Advertisement