For the best experience, open
https://m.kannadavani.news
on your mobile browser.
Advertisement

Heavy rain; ಸಿದ್ದಾಪುರದ -ಕುಮಟಾ ಹೆದ್ದಾರಿಯಲ್ಲಿ ಸಂಚರಿಸುವವರೇ ಈ ಸುದ್ದಿ ಓದಿ

ಕಾರವಾರ: ಉತ್ತರ ಕನ್ನಡ(uttara kannada) ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಭಾರೀ ಮಳೆಗೆ ಹೆದ್ದಾರಿ ಅಂಚಿನಲ್ಲಿ ಧರೆ ಕುಸಿದಿದೆ. ಸಿದ್ದಾಪುರದ ದುಬಾರಿ ಘಟ್ಟದ ಬಳಿ ರಸ್ತೆ ಪಕ್ಕದಲ್ಲೇ ಭೂಕುಸಿತವಾಗಿದೆ.
07:41 PM Jul 25, 2025 IST | ಶುಭಸಾಗರ್
ಕಾರವಾರ: ಉತ್ತರ ಕನ್ನಡ(uttara kannada) ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಭಾರೀ ಮಳೆಗೆ ಹೆದ್ದಾರಿ ಅಂಚಿನಲ್ಲಿ ಧರೆ ಕುಸಿದಿದೆ. ಸಿದ್ದಾಪುರದ ದುಬಾರಿ ಘಟ್ಟದ ಬಳಿ ರಸ್ತೆ ಪಕ್ಕದಲ್ಲೇ ಭೂಕುಸಿತವಾಗಿದೆ.
heavy rain  ಸಿದ್ದಾಪುರದ  ಕುಮಟಾ ಹೆದ್ದಾರಿಯಲ್ಲಿ ಸಂಚರಿಸುವವರೇ ಈ ಸುದ್ದಿ ಓದಿ

Heavy rain; ಸಿದ್ದಾಪುರದ -ಕುಮಟಾ ಹೆದ್ದಾರಿಯಲ್ಲಿ ಸಂಚರಿಸುವವರೇ ಈ ಸುದ್ದಿ ಓದಿ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (uttara Kannada) ಸಿದ್ದಾಪುರ ತಾಲೂಕಿನಲ್ಲಿ ಭಾರೀ ಮಳೆಗೆ ಹೆದ್ದಾರಿ ಅಂಚಿನಲ್ಲಿ ಧರೆ ಕುಸಿದಿದೆ. ಸಿದ್ದಾಪುರದ ದುಬಾರಿ ಘಟ್ಟದ ಬಳಿ ರಸ್ತೆ ಪಕ್ಕದಲ್ಲೇ ಭೂಕುಸಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿ ಸಮೀಪ ಕುಮಟಾ-ಸಿದ್ದಾಪುರ  ರಾಜ್ಯ ಹೆದ್ದಾರಿಯಲ್ಲಿ ಈ ಕುಸಿತ ಕಂಡಿದೆ.

ರಾಜ್ಯ ಹೆದ್ದಾರಿ 48ರ ಸಿದ್ದಾಪುರ ಭಾಗದಲ್ಲಿ  ನಿರಂತರ ಮಳೆಯಾಗುತ್ತಿದೆ. ಹಿಂದಿನ ವರ್ಷವೇ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿತ್ತು. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ.

ಕುಸಿತದಿಂದಾಗಿ ಸಿದ್ದಾಪುರ-ಕುಮಟಾ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಖಡಿತ ಸಾಧ್ಯತೆ ಇದೆ. ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766 (E) ಕಾರ್ಯ ನಡೆಯುತ್ತಿರುವುದರಿಂದ ಪರ್ಯಾಯ ರಸ್ತೆಯಾಗಿ ಈ ರಸ್ತೆಯನ್ನ ಸೂಚಿಸಲಾಗಿತ್ತು. ಇನ್ನೆರಡು ದಿನ ಮಳೆ ಮುಂದುವರೆದರೆ ಭೂಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದ್ದು ಸವಾರರು ಸಂಚರಿಸುವಾಗ ಎಚ್ಚರದಿಂದ ತೆರಳಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ