ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್

ಗೋಕರ್ಣ:- ಮಾನಸಿಕ ಅಸ್ವಸ್ಥಳಾಗಿದ್ದ ತಂಗಿಯನ್ನು ಮಹಾರಾಷ್ಟ್ರದ ಸೋಲಾಪುರ ದಿಂದ ಗೋಕರ್ಣ ಕ್ಕೆ ವಾಹನದಲ್ಲಿ ಕರೆತಂದು ಬಿಟ್ಟುಹೋಗಿದ್ದು ,ಮಾನಸಿಕ ಅಸ್ವಸ್ಥತೆ ಗೋಕರ್ಣ ದಲ್ಲಿ
06:40 PM Sep 08, 2024 IST | ಶುಭಸಾಗರ್

ಗೋಕರ್ಣ:- ಮಾನಸಿಕ ಅಸ್ವಸ್ಥಳಾಗಿದ್ದ ತಂಗಿಯನ್ನು ಮಹಾರಾಷ್ಟ್ರದ ಸೋಲಾಪುರ ದಿಂದ ಗೋಕರ್ಣ ಕ್ಕೆ ವಾಹನದಲ್ಲಿ ಕರೆತಂದು ಬಿಟ್ಟುಹೋಗಿದ್ದು ,ಮಾನಸಿಕ ಅಸ್ವಸ್ಥತೆ ಗೋಕರ್ಣ ದಲ್ಲಿ ಓಡಾಡಿಕೊಂಡಿದ್ದಳು.

Advertisement

ವಿಷಯ ತಿಳಿದ ಗೋಕರ್ಣ (Gokarna) ಪೊಲೀಸರು ಮಾನಸಿಕ ಮಹಿಳೆಯ ಸ್ಥಿತಿ ನೋಡಿ ಆಕೆಯ ವಾರಸುದಾರರ ಮಾಹಿತಿ ಕಲೆಹಾಕಿದರೂ ಸಿಗದಿದ್ದಾಗ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಾರಿನ ನೊಂದಣಿ ಪಡೆದು ಮಹಿಳೆಯ ಅಣ್ಣನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಆತನನ್ನು ಕರೆಸಿ ಬುದ್ದಿವಾದ ಹೇಳಿ ನಂತರ
ತಂಗಿಯನ್ನ ಅಣ್ಣನಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ ಪಿಎಸ್ ಖಾದರ್.

ನೋಡಿಕೊಳ್ಳಲಾಗದೇ ಬಿಟ್ಟು ಹೋಗಿದ್ದ ಅಣ್ಣ

ತನ್ನ ತಂಗಿಯ ಮಾನಸಿಕ ರೋಗದ ವೆಚ್ಚ ಭರಿಸಲು ನನಗೆ ಅಸಾಧ್ಯ ವಾಗಿತ್ತು ಹೀಗಾಗಿ ಆಕೆಯನ್ನು ಇಲ್ಲಿಗೆ ತಂದು ಬಿಟ್ಟುಹೋಗಿದ್ದೆ ಎಂದು ಮಾನಸಿಕ ಮಹಿಳೆಯ ಅಣ್ಣ ಓಂಕಾರ್ ತಿಳಿಸಿದ್ದಾನೆ.

Advertisement

ನಂತರ PSI ಖಾದರ್ ರವರು ಸರ್ಕಾರದ ಉಚಿತ ವೈದ್ಯಕೀಯ ವ್ಯವಸ್ತೆಯ ಬಗ್ಗೆ ಮಾಹಿತಿ ಕೊಟ್ಟು
ತಂಗಿಯನ್ನ ಗುಣಪಡಿಸಿ ಮನೆಗೆ ಕರೆದುಕೊಂಡು ಹೊಗುವಂತೆ ತಿಳಿ ಹೇಳಿದ್ದು ಓಂಕಾರ ತಂಗಿಯನ್ನ ಕರೆದುಕೊಂಡು ಹೊಗಿದ್ದಾನೆ.

ಇದನ್ನೂ ಓದಿ:-

Gokarna| ಮಹಾಬಲೇಶ್ವರನಿಗೆ ಮೇಲುಸ್ತುವಾರಿ ಸಮಿತಿ ಸದಸ್ಯರ ನೇಮಕ.

Advertisement
Tags :
GokarnaNewsPolicesisterUttra kanndaಗೋಕರ್ಣ
Advertisement
Next Article
Advertisement