ಅಬ್ಬರದ Rain | ಕರಾವಳಿಯಲ್ಲಿ ರೆಡ್ ಅಲರ್ಟ ಎಲ್ಲೆಲ್ಲಿ ಹಾನಿ ವಿವರ ನೋಡಿ
Rain News:- ಕರಾವಳಿಯಲ್ಲಿ ಅಲ್ಪ ಬಿಡುವು ಕೊಟ್ಟಿದ್ದ ಮಳೆ ಇದೀಗ ತನ್ನ ವೇಗ ಹೆಚ್ಚಿಸಿಕೊಂಡಿದ್ದು ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ರೆಡ್ ಅಲರ್ಟ ( Red Alert) ಘೋಷಣೆ ಮಾಡಲಾಗಿದೆ.
ವಾಯುಭಾರ ಕುಸಿತ ಹಿನ್ನಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಕಾರವಾರ,ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತಿದ್ದು (Rain) ಕಳೆದ 24 ಗಂಟೆಯಲ್ಲಿ ಭಟ್ಕಳ ಭಾಗದಲ್ಲಿ ಸುರಿದ ಮಳೆಯಿಂದ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾದರೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಭಟ್ಕಳ ತಾಲೂಕಿನ ಹಡಿಲ ಗ್ರಾಮದ ಚಂದ್ರಾವತಿ ಗೊಂಡ ರವರ ಮನೆಯ ಪಕ್ಕದಲ್ಲಿ ಧರೆ ಕುಸಿದು ಆತಂಕ ಸೃಷ್ಟಿಯಾದರೇ ಬೈಲೂರು ಗ್ರಾಮದ ಕಾಸಗೇರಿ ಮಜರೆಯ ನಿವಾಸಿಯಾದ ಗಿರಿಜಾ ನಿತ್ಯಾನಂದ ಶೇರುಗರ ರವರ ವಾಸ್ತವ್ಯದ ಮನೆಯು ಮಳೆಯಿಂದಾಗಿ ನೀರು ತುಂಬಿಕೊಂಡು ಹಾನಿಯಾಗಿದೆ.
ಇದನ್ನೂ ಓದಿ:-Bhatkal|ರಿಕ್ಷಾದಲ್ಲಿ ಮೆರೆದಾಡಿದ ಪ್ಯಾಲಸ್ತೀನ್ ಬೆಂಬಲದ ಧ್ವಜ| ಸಂಸದರೇನು ಮಾಡಿದ್ರು ಗೊತ್ತಾ?
ಇನ್ನು ಮಳೆನಾಡು ಭಾಗದಲ್ಲಿ ಅಲ್ಪ ಮಳೆಯಾಗುತಿದ್ದು ಇಂದು ಸಂಜೆ ವೇಳೆಯಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ.