Uttra kannda| ಫಟಾ ಫಟ್ ಸುದ್ದಿ ,ಮಧ್ಯಾಹ್ನ ಏನೇನು ಆಯ್ತು?
Murudeshwara| ದೋಣಿ ಮಗಚಿ ಮೀನುಗಾರ ಸಾವು.
Bhatkal News :-ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಿಗೆ ಬಿದ್ದು ಅಸ್ವಸ್ಥಗೊಂಡಿದ್ದ ಮೀನುಗಾರ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದಲ್ಲಿ ನಡೆದಿದೆ.
ಮುರ್ಡೇಶ್ವರದ ಮಾವಳ್ಳಿ ನಿವಾಸಿ ಹೈದರ್ ಅಲಿ(45) ಮೃತ ದುರ್ದೈವಿಯಾಗಿದ್ದು ಬೆಳಿಗ್ಗೆ ಕಡಲತೀರದಿಂದ 50 ಮೀಟರ್ ದೂರದಲ್ಲಿ ಬಲೆ ಹಾಕುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ಅವಘಡ ಸಂಭಿಸಿದ್ದು ಇದರಲ್ಲಿ ಇಬ್ಬರು ಈಜಿ ಪಾರಾಗಿದ್ದಾರೆ. ಘಟನೆ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Honnavara | ಚಿರತೆ ದಾಳಿ
Honnavara News :- ಆಕಳು ಮೇಲೆ ಚಿರತೆ ದಾಳಿ ನಡೆಸಿ ,ಆಕಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲಕೋಡಿನ ಗಾಣಗೇರಿಯಲ್ಲಿ ಇದು ನಡೆದಿದೆ .ಗಣಪತಿ ಎಂಬುವವರಿಗೆ ಸೇರುದ ಆಕಳು ಇದಾಗಿದ್ದು ಈ ಹಿಂದೆ ಈ ಭಾಗದಲ್ಲಿ ಗ್ರಾಮಗಳಿಗೆ ನುಗ್ಗಿ ಹಸು,ನಾಯಿಗಳನ್ನ ಭೇಟೆಯಾಡಿತ್ತು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನನ್ನು ಇಟ್ಟಿತ್ತಾದರೂ ಸಫಲವಾಗಿರಲಿಲ್ಲ.ಇದೀಗ ಮತ್ತೆ ಚಿರತೆ ಗ್ರಾಮಗಳತ್ತ ನುಗ್ಗುತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀದಿ ನಾಯಿ ಕಾಟ! ಏಳೂವರೆ ತಿಂಗಳಲ್ಲಿ 5494 ನಾಯಿ ಕಡಿತ.
Honnavara| ಹೆದ್ದಾರಿ ಪ್ರಾಧಿಕಾರದ ಕಚೇರಿ ಮುತ್ತಿಗೆ.
ರಾಷ್ಟ್ರೀಯ ಹೆದ್ದಾರಿ 66 ರ ಕಳಪೆ ಕಾಮಗಾರಿಯನ್ನು ವಿರೋಧಿಸಿ ಹೊನ್ನಾವರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.