Bhatkal |ಗಣಪತಿ ವಿಸರ್ಜನೆ ವೇಳೆ ಸಮುದ್ರ ಪಾಲಾದ ಬಾಲಕನ ರಕ್ಷಣೆ
Bhatkal : ಗಣೇಶನ ಮೂರ್ತಿ ವಿಸರ್ಜಿನೆ ವೇಳೆ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಬಾಲಕನನ್ನು ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನೇ ರಕ್ಷಣೆಗೊಳಗಾದವನಾಗಿದ್ದಾನೆ.
ಭಟ್ಕಳ (bhatkal ) ತಾಲೂಕಿನ ತಲಗೋಡಿನಲ್ಲಿ ಸ್ಥಾಪಿಸಲಾದ ಗಣಪನ ವಿಗ್ರಹ ವಿಸರ್ಜನೆಗೆ ಊರಿನವರು ಭಾನುವಾರ ಸಮುದ್ರಕ್ಕೆ ತೆರಳಿದ್ದರು.
ಗಣೇಶನ ವಿಗ್ರಹ ಜೊತೆ ಇದ್ದ ಸಮರ್ಥ ಖಾರ್ವಿ ಸಮುದ್ರಕ್ಕೆ ಇಳಿದಿದ್ದನು. ವಿಗ್ರಹದ ಜೊತೆ ನೀರಿನಲ್ಲಿ ಮುಂದೆ ಹೋಗಿದ್ದು ಗಣಪನನ್ನು ಮುಳುಗಿಸಿದ ನಂತರವೂ ಅಲ್ಲಿಯೇ ಇದ್ದ ಈತ ಏಕಾಏಕಿ ಬಂದ ಅಬ್ಬರದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾನೆ.
ತಕ್ಷಣ ಇದನ್ನು ನೋಡಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ್ ಖಾರ್ವಿ ಸಮುದ್ರಕ್ಕೆ ಜಿಗಿದು ರಕ್ಷಣೆ ಮಾಡಿ ದಡಕ್ಕೆ ಎಳೆದು ತಂದರು. ಅಸ್ವಸ್ಥಗೊಂಡ ಆತನನ್ನು ಇದೀಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:-Bhatkal| ದಾನದ ಹೆಸರಲ್ಲಿ ಸುಳ್ಳು ಪ್ರತಿಷ್ಟೆತೋರಿದ ವ್ಯಕ್ತಿಗೆ ಹಣ ಮರಳಿಸಿ ಸ್ವಾಭಿಮಾನ ತೋರಿದ ಮಹಿಳೆಯರು