chikkaballapur|ಸ್ಥಾನಮಾನ ಅಂಗಡಿಯಲ್ಲಿ ಸಿಗುತ್ತಾ? ವಿರೋಧಿಗಳಿಗೆ ಟಾಂಗ್ ಕೊಟ್ಟ ಡಿ ಕೆ ಶಿವಕುಮಾರ್.
chikkaballapur news:-
ಚಿಕ್ಕಬಳ್ಳಾಪುರ-ಕೆಪಿಸಿಸಿ(KPCC) ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್(DK Shivakumar) ವಿರುದ್ದ ಕಿಡ ಕಾರುತ್ತಿರುವ ವಿರೋಧಿಗಳಿಗೆ ಡಿ.ಕೆ. ಹೆಸರು ಹೇಳದೆ ಟಾಂಗ್ ಕೊಟ್ಟಿದ್ದಾರೆ.
ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ದೆಹಲಿಯಿಂದ (Delhi )ವಾಪಾಸ್ಸಾದ ಡಿ ಕೆ ಶಿವಕುಮಾರ್ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಯಾವುದಾದರೂ ಸ್ಥಾನ ಮಾನ ಮೀಡಿಯಾದವರು ಕೊಡ್ತಾರಾ..? ಅಂಗಡಿಯಲ್ಲಿ ಎಲ್ಲಾದರೂ ಸಿಗುತ್ತಾ..? ಪಾರ್ಟಿ ಹಿರಿಯ ನಾಯಕರು ನಾವು ಮಾಡುವ ಕೆಲಸ ಗುರ್ತಿಸಿ ಯಾರ್ಯಾರಿಗೆ ಏನೇನು ಕೆಲಸ ಕೊಡಬೇಕು ಅದು ಕೊಡ್ತೇವೆ.
ಇದನ್ನೂ ಓದಿ:-Karnataka:ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ SC/ST ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷಕ್ಕೆ ಹೆಚ್ಚಳ
ಅದು ಬಿಟ್ಟು ಮಿಡಿಯಾ ಮುಖಾಂತರ ಮಾತಾಡಿದ್ರೆ ಹುದ್ದೆ ಕೊಡ್ತಾರಾ..? ಈ ನಡೆಗಳನ್ನ ನಾನು ಹೊಸದಾಗಿ ನೋಡ್ತೀದ್ದಿನಿ ಅಂತ ವಿರೋಧಿಗಳಿಗೆ ಡಿ ಕೆ ಶಿವಕುಮಾರ್ ಪರೋಕ್ಷವಾಗಿ ಟಾಂಗ್ ನೀಡಿದರು.