For the best experience, open
https://m.kannadavani.news
on your mobile browser.
Advertisement

Uttara kannda ಜಿಲ್ಲೆಯಲ್ಲಿ ಹೊಸ ವರ್ಷಕ್ಕೆ ಒಂದೇ ದಿನ ಮಾರಾಟವಾದ ಮದ್ಯವೆಷ್ಟು ಗೊತ್ತಾ?

ಕಾರವಾರ :- ಹೊಸವರ್ಷದ ಸಂಭ್ರಮದಲ್ಲಿ ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಭಾರಿ ಮದ್ಯ ಮಾರಾಟವಾಗುವ ಮೂಲಕ ಹೊಸವರ್ಷಾಚರಣೆ ಸಂಭ್ರಮ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
12:06 PM Jan 02, 2025 IST | ಶುಭಸಾಗರ್
uttara kannda ಜಿಲ್ಲೆಯಲ್ಲಿ ಹೊಸ ವರ್ಷಕ್ಕೆ ಒಂದೇ ದಿನ ಮಾರಾಟವಾದ ಮದ್ಯವೆಷ್ಟು ಗೊತ್ತಾ
Liquor sales

ಕಾರವಾರ :- ಹೊಸವರ್ಷದ ಸಂಭ್ರಮದಲ್ಲಿ ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಭಾರಿ ಮದ್ಯ ಮಾರಾಟವಾಗುವ ಮೂಲಕ ಹೊಸವರ್ಷಾಚರಣೆ ಸಂಭ್ರಮ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

Advertisement

ಡಿಸೆಂಬರ್ 31ರಂದು ಒಂದೇ ದಿನ ಎಂಟು ಸಾವಿರಕ್ಕೂ ಹೆಚ್ಚು ಪೆಟ್ಟಿಗೆ ಮದ್ಯ ಜಿಲ್ಲೆಯಲ್ಲಿ ಮಾರಾಟವಾಗಿದೆ.

ಹೊಸ ವರ್ಷಾಚರಣೆ (news year celebration) ಎಂದರೆ ಮದ್ಯ ಸಮಾರಾಧನೆ ಎಂಬಂತಾಗಿದೆ. ಇದರಿಂದ ವಿವಿಧೆಡೆಯಿಂದ ಪ್ರವಾಸಿ ತಾಣಗಳಿಗೆ ( tourist place) ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಬಾರ್, ವೈನ್ ಸ್ಟೋರ್, ರೆಸಾರ್ಟ್‌ಗಳು ಮಾತ್ರವಲ್ಲದೇ ಕೆಲವು ಹೋಂ ಸ್ಟೇಗಳೂ ಒಂದು ದಿನದ ವಿಶೇಷ ಪರವಾನಗಿ ಪಡೆದು ಮದ್ಯ ಮಾರಾಟ ( liquor sale) ಮಾಡಿವೆ.

ಇದನ್ನೂ ಓದಿ:-Murdeshwar:ಕಡಲ ತೀರ ನಿರ್ಬಂಧ ತೆರವು ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಆಗಮನ

ಅಬಕಾರಿ ಇಲಾಖೆಯ ಲೆಕ್ಕಾಚಾರದಂತೆ ಡಿಸೆಂಬರ್ 31ರಂದು ಒಟ್ಟು 8,102 ಬಾಕ್ಸ್ ಮದ್ಯ ಹಾಗೂ 7,258 ಬಾಕ್ಸ್ ಬಿಯರ್ ಬಿಕರಿಯಾಗಿದೆ.

ಜಿಲ್ಲೆಯ ಎಲ್ಲ ಬಾರ್, ಮದ್ಯದ ಪರವಾನಗಿ ಹೊಂದಿದ ರೆಸಾರ್ಟ್ ಗಳಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ(ಕೆಎಸ್‌ಬಿಸಿಎಲ್) ದಿಂದ ಮದ್ಯವನ್ನು ಪೂರೈಸಲಾಗುತ್ತದೆ. ಜಿಲ್ಲೆಯ ಕರಾವಳಿ ಭಾಗಕ್ಕೆ ಹೊನ್ನಾವರದ ಕೆಎಸ್‌ಡಿಸಿಎಲ್ ಉಗ್ರಾಣದಿಂದ. ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳಿಗೆ ಶಿರಸಿ ಉಗ್ರಾಣದಿಂದ, ಹಳಿಯಾಳ, ದಾಂಡೇಲಿ, ಜೊಯಿಡಾಕ್ಕೆ ಹುಬ್ಬಳ್ಳಿ ಉಗ್ರಾಣದಿಂದ ಮದ್ಯ ಪೂರೈಸಲಾಗುತ್ತದೆ.

ಸಾಮಾನ್ಯ ದಿನಗಳಲ್ಲಿ ಜಿಲ್ಲೆಯ 5 ರಿಂದ 6 ಸಾವಿರ ಬಾಕ್ಸ್ ಮಾರಾಟವಾಗುತ್ತದೆ.ಹೊಸವರ್ಷದ ಹಿನ್ನೆಲೆಯಲ್ಲಿ 2 ರಿಂದ ಮೂರು ಸಾವಿರ ಬಾಕ್ಸ್ ಮದ್ಯ ಮಾರಾಟವಾಗಿದೆ.

ಗೋಕರ್ಣದಲ್ಲಿ  (Gokarna)ವಿಶೇಷ ಪರವಾನಗಿ

ಮದ್ಯ ಮಾರಾಟ ಮಾಡಲು ಎಲ್ಲ ಹೋಟೆಲ್, ರೆಸಾರ್ಟ್‌ಗಳಿಗೆ ಅನುಮತಿ ಇಲ್ಲ. ವೈನ್ ಶಾಪ್, ಬಾರ್‌ಗಳನ್ನು ಹೊರತಾಗಿ ಜಿಲ್ಲೆಯ ಕೆಲವೇ ರೆಸಾರ್ಟ್‌ಗಳು ಮದ್ಯ ಮಾರಾಟದ ಕಾಯಂ ಪರವಾನಗಿ ಹೊಂದಿವೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ 10 ಅತಿಥಿ ಸತ್ಕಾರ ಸಂಸ್ಥೆಗಳು ಒಂದು ದಿನದ ವಿಶೇಷ ಪರವಾನಗೆ ಪಡೆದಿದ್ದವು.

ಶಿರಸಿ, ದಾಂಡೇಲಿಯಲ್ಲಿ ತಲಾ 1 ಹಾಗೂ ಗೋಕರ್ಣದಲ್ಲಿ 8 ರೆಸಾರ್ಟ್ ಹೋಟೆಲ್‌ಗಳು ಸಿಎಲ್-5 ಪರವಾನಗಿ ಪಡೆದು ಮದ್ಯ ಮಾರಾಟ ಮಾಡಿದವು.ದಾಂಡೇಲಿಯಲ್ಲಿ 849 ಬಾಕ್ಸ್ ಮದ್ಯ ಬಿಕರಿಯಾಗಿದ್ದರೆ. ಕರಾವಳಿಯ ತಾಲೂಕುಗಳಲ್ಲಿ 2,694 ಬಾಕ್ಸ್ ಮದ್ಯ ಮಾರಾಟವಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ