ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shivamogga ತೀರ್ಥಹಳ್ಳಿಯ ಅಳಿಯ ಎಸ್.ಎಂ ಕೃಷ್ಣ ಇವರ ಮದುವೆ ಹೇಗಾಯ್ತು ಗೊತ್ತಾ?

ಮಾಜಿ ಮುಖ್ಯಮಂತ್ರಿ,ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ ಹೀಗೆ ಹತ್ತು ಹಲವು ಹುದ್ದೆಯನ್ನು ನಿಭಾಯಿಸಿದ ಎಸ್.ಎಂ ಕೃಷ್ಣ(SM KRISHNA) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಕಡುಮಲ್ಲಿಗೆ ಗ್ರಾಮದ ಪ್ರೇಮಾ ರವರನ್ನು ವಿವಾಹವಾಗಿದ್ದಾರೆ.
07:15 PM Dec 10, 2024 IST | ಶುಭಸಾಗರ್

ಮಾಜಿ ಮುಖ್ಯಮಂತ್ರಿ,ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ ಹೀಗೆ ಹತ್ತು ಹಲವು ಹುದ್ದೆಯನ್ನು ನಿಭಾಯಿಸಿದ ಎಸ್.ಎಂ ಕೃಷ್ಣ(SM KRISHNA) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಕಡುಮಲ್ಲಿಗೆ ಗ್ರಾಮದ ಪ್ರೇಮಾ ರವರನ್ನು ವಿವಾಹವಾಗಿದ್ದಾರೆ.

Advertisement

ಇವರ ವಿವಾಹವೇ ಒಂದು ವಿಷೇಶ ಕುತುಹಲದ ಕತೆ ಇದೆ .ಏನು ಅಂತೀರಾ ಇಲ್ಲಿದೆ ನೋಡಿ.

ತೀರ್ಥಹಳ್ಳಿಯ ಕುಡುಮಲ್ಲಿಗೆಯ ಅಳಿಯ ಎಸ್. ಎಂ ಕೃಷ್ಣ

ಎಸ್‌.ಎಂ.ಕೃಷ್ಣ ಪತ್ನಿ ಪ್ರೇಮಾ (prema) ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಇಲ್ಲಿನ ಪ್ರಮುಖ ಅಡಿಕೆ ಬೆಳೆಗಾರ ಚಿನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿ.

ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಕುಡುಮಲ್ಲಿಗೆ (kadumallige) ಗ್ರಾಮವಿದೆ. ರಸ್ತೆ ಬದಿಯಲ್ಲೇ ಪ್ರೇಮಾ ಅವರ ಮನೆ ಕೂಡ ಇದೆ.

Advertisement

1966ರಲ್ಲಿ ಪ್ರೇಮಾ ಅವರು ಎಸ್‌.ಎಂ.ಕೃಷ್ಣ ಅವರೊಂದಿಗೆ ವಿವಾಹವಾಗಿದ್ದರು. ಆ ಸಮಯದಲ್ಲಿ ಎಸ್‌.ಎಂ.ಕೃಷ್ಣ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕರಾಗಿದ್ದರು.

ಮಲೆನಾಡಿನ ಈ ಪುಟ್ಟ ಹಳ್ಳಿಯ ಹುಡುಗಿಯನ್ನು ವಿವಾಹವಾಗಲು ಪರಿಚಯಿಸಿದ್ದೇ ಒಬ್ಬ ಮಾಜಿ ಮುಖ್ಯಮಂತ್ರಿ.

ಸಂಬಂಧ ಕುದುರಿಸಿದ ಮಾಜಿ ಸಿಎಂ ಕಡಿದಾಳು ಮಂಜಪ್ಪ

ಎಸ್.ಎಂ.ಕೃಷ್ಣ ಮತ್ತು ಪ್ರೇಮಾ ಅವರ ಕುಟುಂಬಗಳನ್ನು ಒಂದುಗೂಡಿಸಿದ್ದು ಮಾಜಿ ಮುಖ್ಯಮಂತ್ರಿ ದಿವಂಗತ ಕಡಿದಾಳು ಮಂಜಪ್ಪನವರು.

ಹೌದು ಈ ವಿಷಯವನ್ನು ಎಸ್‌.ಎಂ.ಕೃಷ್ಣ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕಡಿದಾಳು ಮಂಜಪ್ಪ ಅವರು ಎಸ್‌.ಎಂ.ಕೃಷ್ಣ ಅವರಿಗೂ ಸಂಬಂಧಿ. ಇತ್ತ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರ ಸಹೋದರ, ಪ್ರೇಮಾ ಅವರ ಸಹೋದರಿಯನ್ನು ವಿವಾಹವಾಗಿದ್ದರು. ಹಾಗಾಗಿ ಪ್ರೇಮಾ ಅವರಿಗು ಕಡಿದಾಳು ಮಂಜಪ್ಪ ಸಂಬಂಧಿಯಾಗಿದ್ದರು.

ಎಸ್.ಎಂ.ಕೃಷ್ಣ ಅವರಿಗೆ ಹೆಣ್ಣು ಹುಡುಕುತ್ತಿರುವ ವಿಚಾರ ತಿಳಿದು ಮಂಜಪ್ಪನವರು ಪ್ರೇಮಾ ಅವರ ವಿಷಯವನ್ನು ಎಸ್. ಎಂ ಕೃಷ್ಣಾ ರವರಿಗೆ ತಿಳಿಸಿದ್ದರು.

ಹೆಣ್ಣು ನೋಡಲು ಬಂದವರು ಜೈಲಿಗೆ ಹೋಗುವ ವಿಷಯ ಪ್ರಸ್ತಾಪಿಸಿದ್ದ ಎಸ್.ಎಂ ಕೃಷ್ಣ.

ಎಸ್.ಎಂ ಕೃಷ್ಣ ಪತ್ನಿಯ ತವರು ಮನೆ.

ಹೆಣ್ಣು ನೋಡುವ ಶಾಸ್ತ್ರ ಕುಡುಮಲ್ಲಿಗೆಯಲ್ಲಿ ನೆರವೇರಿತು. ಎಸ್.ಎಂ.ಕೃಷ್ಣ ಅವರು ಕುಟುಂಬದೊಂದಿಗೆ ಬೆಂಗಳೂರಿನಿಂದ ಕುಡುಮಲ್ಲಿಗೆಗೆ ಬಂದಿದ್ದರು.

ಈ ಸಂದರ್ಭ ಪ್ರೇಮಾ ಅವರ ಜೊತೆ ವೈಯಕ್ತಿಕವಾಗಿ ಮಾತನಾಡಬೇಕು ಎಂದು ಎಸ್‌.ಎಂ.ಕೃಷ್ಣ ಇಚ್ಛೆ ವ್ಯಕ್ತಪಡಿಸಿದ್ದರು. ಮೊದಲ ಮಾತುಕತೆಯಲ್ಲೇ ಜೀವನದಲ್ಲಿ ಏನೆಲ್ಲ ಪರಿವರ್ತನೆಯಾಗಲಿದೆ ಗೊತ್ತಿಲ್ಲ ಎಂದು ಆತಂಕದ ಮಾತುಗಳನ್ನಾಡಿದ್ದರಂತೆ.

ರಾಜಕೀಯದಲ್ಲಿ ಇದ್ದೇನೆ. ಹಾಗಾಗಿ ಜೀವನ ಸುಗಮವಾಗಿ ಇರುವುದಿಲ್ಲ.‌ ಏನೆಲ್ಲ ಪರಿವರ್ತನೆ ಆಗಲಿದೆ ಗೊತ್ತಾಗುವುದಿಲ್ಲ. ವಿರೋಧ ಪಕ್ಷದಲ್ಲಿ ಇರುವುದರಿಂದ ಜೈಲಿಗೂ ಹೋಗಬಹುದು ಎಂದು ಎಸ್.ಎಂ.ಕೃಷ್ಣ ತಿಳಿಸಿದ್ದರಂತೆ.

ಇದನ್ನೂ ಓದಿ:-ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ- ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ

ಇದಕ್ಕೆ ಪ್ರೇಮಾ ಅವರು ಇದಕ್ಕೆಲ್ಲ ನಾನು ಸಿದ್ಧ ಎಂದು ತಿಳಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಎಸ್‌.ಎಂ.ಕೃಷ್ಣ ಅವರೆ ಹೇಳಿಕೊಂಡಿದ್ದಾರೆ. 1966ರಲ್ಲಿ ಎಸ್‌.ಎಂ.ಕೃಷ್ಣ ಮತ್ತು ಪ್ರೇಮಾ ಅವರ ವಿವಾಹ ನೆರವೇರಿತು.

ನಂತರ ಅವರ ಬದುಕು ಬದಲಾಯಿತು ಶಾಸಕರಾಗಿದ್ದವರು ಮಂತ್ರಿಯಾದರು ,ಮುಖ್ಯಮಂತ್ರಿ ಹುದ್ದೆಯಿಂದ ರಾಷ್ಟ್ರ ರಾಜಕಾರಣದಲ್ಲೂ ಹೆಸರು ಗಳಿಸುವ ಮೂಲಕ ಜನರ ಪ್ರೀತಿ ಗಳಿಸಿದರು.

ಕುಡುಮಲ್ಲಿಗೆಯಲ್ಲಿ ಕಡು ಮೌನ.

ಪಡುಮಲ್ಲಿಗೆಯಲ್ಲಿ ಶ್ರದ್ಧಾಂಜಲಿ

ಇನ್ನು ಕುಡುಮಲ್ಲಿಗೆಯ ಗ್ರಾಮದಲ್ಲಿ ಮೌನ ಮರುಗಟ್ಟಿದ್ದು ಇವರ ಕುಟುಂಬದವರು ಎಸ್.ಎಂ ಕೃಷ್ಣಾರವರ ಅಂತ್ಯ ಸಂಸ್ಕಾರಕ್ಕೆ ಬೆಂಗಳೂರಿಗೆ ತೆರಳಿದ್ದಾರೆ.

ಇನ್ನು ಗ್ರಾಮದ ಜನ ಎಸ್.ಎಂ ಕೃಷ್ಣಾ (SM KRISHNA) ರವರ ಫೋಟೋ ಇಟ್ಟು ಗೌರವ ಪೂರ್ವಕವಾಗಿ ಶ್ರದ್ಧಾಂಜಲಿ ಅರ್ಪಿಸಿದರು

Feed: invalid feed URL

 

 

Advertisement
Tags :
ShivamoggaSm krishnaSM Krishna marriage lifeSM Krishna wife premaTirthahalli
Advertisement
Next Article
Advertisement