Kumbhamela ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್ ಸಾಧ್ವಿಯಾರು ಗೊತ್ತಾ?
Kumbhamela news:-ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (prayaga)ಮಹಾಕುಂಭಮೇಳ-2025 ಬರ್ಜರಿಯಾಗಿ ಸದ್ದು ಮಾಡುತ್ತಿದೆ. ದೇಶ ,ವಿದೇಶಿಗರ ಆಕರ್ಷಣೆ ಜೊತೆ ನಾಗಸಾಧುಗಳು, ಚಿತ್ರ ವಿಚಿತ್ರ ಆಚರಣೆ ನಡೆಸುವ ಸನ್ಯಾಸಿಗಳ ಟ್ರಂಡ್ ಒಂದುಕಡೆಯಾದರೇ ಸಾದ್ವಿಯಾಗಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಯುವತಿಯದ್ದೇ ಸದ್ದು ಒಂದೆಡೆಯಾಗಿದೆ.
ಇದನ್ನೂ ಓದಿ:-MahaKumbh 2025 ಕುಂಭಮೇಳ ಎಂದರೇನು? ಮಹಾ ಕುಂಭಮೇಳದ ವಿಶೇಷತೆ ಏನು ಇಲ್ಲಿದೆ ಮಾಹಿತಿ.
ಅಷ್ಟಕ್ಕೂ ಈ ಚಲುವೆಯಾರು? ಸಾದ್ವಿಯಾಗಿದ್ದೇಕೆ ? ಇಂತ ಸುಂದರಿ ಎಲ್ಲರ ಕ್ರಶ್ ಅಲ್ಲವೇ, ಈ ಬೆಡಗಿಯನ್ನ ನೋಡಿದಷ್ಟೂ ಮತ್ತೊಮ್ಮೆ ನೋಡುವ ಎಂಬ ಹಂಬಲ.ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಕುತೂಹಲ ಹುಟ್ಟಿದೆ.
ಹೌದು ಈ ಸಾದ್ವಿ ಹೆಸರು ಹರ್ಷಾ ರಿಚರಿಯಾ (Harsha Richhariya) ಎಂದು. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳು ಈಕೆ ಹಿಂದೆ ಬಿದ್ದ ನಂತರ ಈಕೆಯ ಚರಿತ್ರೆ ಹೊರಬಂದಿದೆ.

ಹರ್ಷಾ ರಿಚರಿಯಾ ಅವರು ಮೂಲತಃ ಉತ್ತರಾಖಂಡ ಮೂಲದವರು.ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆ ಎಂದು ರಿಚರಿಯಾ ಪರಿಚಯ ಮಾಡಿಕೊಂಡಿದ್ದಾರೆ.
ನಟಿಯಾಗಿ, ಮಾಡೆಲ್ ಆಗಿ,ನಿರೂಪಕಿಯಾಗಿ ,ಸೋಷಿಯಲ್ ಮೀಡಿಯಾ influencer ಆಗಿ ಕೆಲಸ ಮಾಡಿದ ಈಕೆ, ಬಾಹ್ಯ ಪ್ರಪಂಚದ ಮಗ್ಗಲುಗಳನ್ನು ಅನುಭವಿಸಿ ಬಂದವರು.
ಹಣ ,ಹೆಸರು ಪಡೆಯುವ ಜೊತೆ ಒಳ್ಳೆ ಸೌಂದರ್ಯ ಇಟ್ಟುಕೊಂಡು ಉತ್ತಮ ಫ್ರೇಮ್ ನ ಲೈಪ್ ಲೀಡ್ ಮಾಡಿದಾಕೆ.
ಆದ್ರೆ ಈಕೆಗೆ ತಾನು ಮೊದಲಿದ್ದ ಲೈಪ್ ನಲ್ಲಿ ಶಾಂತಿ ,ನೆಮ್ಮದಿಯಿಲ್ಲ ಎಂದು ಅರಿತ ಈಕೆ ಕಳೆದ ಎರಡು ವರ್ಷದ ಹಿಂದೆ ದೀಕ್ಷೆ ಪಡೆದರಂತೆ.
ಈಗಿನ್ನೂ 30 ವರ್ಷ ವಯಸ್ಸು ದಾಟಿದ ಈಕೆ ಇನ್ನೂ ಬ್ರಹ್ಮಿಣಿ. ಒಂಟಿ ಲೈಪ್ ನಲ್ಲಿ ದೇಶ ,ವಿದೇಶ ಸುತ್ತಿದ ಈಕೆ ಆರಿಸಿಕೊಂಡದ್ದು ಸನಾತನ ಸೂತ್ರ.

ಆಕೆಯೇ ಹೇಳುವಂತೆ ನಾನು ಇರುವುದೆಲ್ಲವನ್ನು ಬಿಟ್ಟು ಈ ಹಾದಿಯನ್ನು ಅಪ್ಪಿಕೊಂಡಿದ್ದೇನೆ. ನಾನು ಆಂತರಿಕ ಶಾಂತಿಗಾಗಿ ಸಾಧ್ವಿಯ ಜೀವನವನ್ನು ಆರಿಸಿದ್ದೇನೆ.
ಎಂದು ವಿವರಿಸಿದ್ದಾರೆ. ನನಗೆ 30 ವರ್ಷ ವಯಸ್ಸಾಗಿದ್ದು, ಕಳೆದ ಎರಡು ವರ್ಷಗಳಿಂದ ಸಾಧ್ವಿಯಾಗಿ ಬದುಕುತ್ತಿದ್ದೇನೆ ಎಂದಿದ್ದಾರೆ.
ನಾನು ಈ ಹಿಂದೆ ನಟಿಯಾಗಿದ್ದೆ ಎಂದು ಬಹಿರಂಗಪಡಿಸುವ ಮೂಲಕ ಹರ್ಷಾ ರಿಚರಿಯಾ ಶಾಕ್ ನೀಡಿದ್ದಾರೆ. ನಟಿಯಾಗಿ, ಮಾಡೆಲ್ ಆಗಿ, ಜಾಲಿಯಾಗಿನ ಪ್ರಪಂಚ ಸುತ್ತಾಡಿಕೊಂಡು, ನಿರೂಪಕಿಯಾಗಿ ಮಿಂಚಿದ್ದ ಆಕೆಯ ಬದುಕು ತಿರುವು ಪಡೆದುಕೊಂಡ ಬಗ್ಗೆಯೂ ಅವರು ವಿವರಿಸಿದ್ದಾರೆ.

ನಟನೆ, ನಿರೂಪಣೆ, ಪ್ರಪಂಚವನ್ನು ಸುತ್ತುವಾಗ, ನಾವು ಜೀವನದಲ್ಲಿ ತುಂಬಾ ಸಾಧನೆ ಮಾಡಿದಾಗ ಯಾವುದೂ ನಿಜವಾದ ಶಾಂತಿಯನ್ನು ತರುವುದಿಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ . ನಮಗೆ ಖ್ಯಾತಿ ಮತ್ತು ಮನ್ನಣೆ ಇರಬಹುದು, ಆದರೆ ಸಮಾಧಾನವಿಲ್ಲ. ಭಕ್ತಿ ನನ್ನ ಸೆಳೆಯಲು ಪ್ರಾರಂಭಿಸಿತು. ನಾವು ಲೌಕಿಕ ಸಂಪರ್ಕಗಳಿಂದ ದೂರವಿರಬೇಕು ಎಂದು ಈ ಮಾರ್ಗ ಆಯ್ಕೆಮಾಡಿಕೊಂಡೆ ಎನ್ನುತ್ತಾರೆ.
ಇನ್ನು ನಾನು ಸನ್ಯಾಸಿನಿಯಲ್ಲ,ಸಾದ್ವಿಯೂ ಅಲ್ಲ ನನ್ನನ್ನು ಸಾದ್ವಿ ಎಂದು ಕರೆಯಬೇಡಿ ಎಂದು ಹೇಳುವ ಈಕೆ ಸದ್ಯ ಕುಂಭಮೇಳ (kumbhamela)ದಲ್ಲಿ ನಿರೂಪಣೆ, ಭಕ್ತಿಗೀತೆ ಆಯೋಜನೆ ಕಾರ್ಯಕ್ರಮದಲ್ಲಿ ಬಿಸಿಯಾಗಿದ್ದಾರೆ.
ಆದ್ರೆ ಈಕೆಯ ಸಾದ್ವಿಯ ಸಖತ್ ಲುಕ್ ಗೆ ಜನ ಫಿದಾ ಆಗಿದ್ದು ಈಕೆಯ ಬಗ್ಗೆ ಚರ್ಚೆ ನಡೆಯುತಿದ್ದರೇ ಇತ್ತ ಮೀಡಿಯಾದ ಕ್ಯಾಮರಾ ಕಣ್ಣುಗಳು ಈಕೆಯನ್ನು ಕಿತ್ತು ತಿನ್ನುತ್ತಿದೆ.